Saturday, March 13, 2021

Current affairs

ಟೇಪ್' ಅನ್ವೇಷಕ ಲಾವ್ ಆಟೆನ್ಸ್ ಇನ್ನಿಲ್ಲ
==================
ಆಡಿಯೋ 'ಕ್ಯಾಸೆಟ್ ಟೇಪ್' ಅನ್ವೇಷಕ ಮತ್ತು 'ಕಾಂಪ್ಯಾಕ್ಟ್ ಡಿಸ್ಕ್' (ಸಿಡಿ) ತಯಾರಿಸಲು ಪ್ರಮುಖ ಪಾತ್ರ ವಹಿಸಿರುವ ಡಚ್ ಎಂಜಿನಿಯರ್ ಲಾವ್ ಆಟೆನ್ಸ್ (ಲೂ ಅಟೆನ್ಸ್) ಮಾರ್ಚ್ 6ರಂದು ನಿಧನರಾಗಿದ್ದಾರೆ ಎಂದು ಡಚ್ ಮಾಧ್ಯಮಗಳು ವರದಿ ಮಾಡಿವೆ.
====================
ಎಲೆಕ್ಟ್ರಿಕಲ್ ದೈತ್ಯ ಸಂಸ್ಥೆ ಪಿಲಿಪ್ಸ್‌ಗಾಗಿ ಕೆಲಸ ಮಾಡುವಾಗ ಆಟೆನ್ಸ್ ಕಂಡು ಹಿಡಿದ ಕ್ಯಾಸೆಟ್ ಟೇಪ್, ಇಡೀ ವಿಶ್ವದ ಸಂಗೀತ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು. ತಲೆಮಾರಿನಿಂದ ತಲೆಮಾರಿನ ಸಂಗೀತ ಪ್ರೇಮಿಗಳಿಗೆ ತಮ್ಮ ಮೆಚ್ಚಿನ ಹಾಡುಗಳ ಕೇಳಲು ಮತ್ತು ಸಂಗೀತ ಮಿಶ್ರಣವನ್ನು ಸವಿಯಲು ಅವಕಾಶ ಮಾಡಿಕೊಟ್ಟಿದ್ದವು.
===========
ಕ್ಯಾಸೆಟ್ ಟೇಪ್ ಎಷ್ಟೊಂದು ಜನಪ್ರಿಯತೆ ಗಿಟ್ಟಿಸಿದೆಯೆಂದರೆ ಜಗತ್ತಿನಲ್ಲಿ 100 ಶತಕೋಟಿಗೂ ಹೆಚ್ಚು ಕ್ಯಾಸೆಟ್ ಟೇಪ್‌ಗಳು ಉತ್ಪಾದಿಸಲ್ಪಟ್ಟಿದ್ದವು. 1960ರ ದಶಕದಿಂದ ಆರಂಭವಾಗಿ 2000ನೇ ಇಸವಿಯ ವರೆಗೂ ಜನಪ್ರಿಯತೆ ಕಾಯ್ದುಕೊಂಡಿತ್ತು
============
ತಂತ್ರಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಲಾವ್ ಆಟೆನ್ಸ್ ಹೊಸ ಹೊಸ ತಂತ್ರಜ್ಞಾನಗಳನ್ನು ಶೋಧನೆ ಮಾಡುವಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದರು.
========
1926ರಲ್ಲಿ ಡಚ್ ನಗರವಾದ ಬೆಲ್ಲಿಂಗ್‌ವರ್ಲ್ಡ್‌ನಲ್ಲಿ ಜನಿಸಿದ ಆಟೆನ್ಸ್, ಅತಿ ಚಿಕ್ಕ ವಯಸ್ಸಿನಲ್ಲಿಯೇ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ತೋರಿದ್ದರು.
===========
ಎರಡನೇ ಮಹಾಯುದ್ಧದ ಸಮಯದಲ್ಲಿ ಹಾಲೆಂಡ್ ಮೇಲೆ ಜರ್ಮನಿಯ ಆಕ್ರಮಣದ ಸಮಯದಲ್ಲಿ 'ಫ್ರೀ ಡಚ್‌' (ಡಚ್‌ ವಿಮುಕ್ತಿ) ಎಂಬ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗಬಲ್ಲ, ವಿಶೇಷ ಆಂಟೆನ್ನಾ ಇರುವ ರೇಡಿಯೊವನ್ನು ಅವರು ಅಭಿವೃದ್ಧಿಪಡಿಸಿದ್ದರು. ಜರ್ಮನಿಯ ಜಾಮರ್‌ಗಳನ್ನೂ ಮೀರಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದ ಕಾರಣಕ್ಕಾಗಿ ಅವುಗಳನ್ನು 'ಜರ್ಮನ್‌ ಫಿಲ್ಟರ್‌' ಎಂದು ಕರೆಯಲಾಗುತ್ತಿತ್ತು.
==================================
🌷 ಖಾಸಗಿ ವಲಯದ 75% ಉದ್ಯೋಗ ಸ್ಥಳೀಯರಿಗೆ: ಹರಿಯಾಣ ಬಳಿಕ ಜಾರ್ಖಾಂಡ್‌ ನಿರ್ಧಾರ
================
ಖಾಸಗಿ ವಲಯದಲ್ಲಿನ ಶೇ.75 ರಷ್ಟು ನಿಗದಿತ ಸಂಬಳದವರೆಗಿನ ಉದ್ಯೋಗಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಲು ಹರಿಯಾಣ ಸರ್ಕಾರ ಇತ್ತೀಚಿಗೆ ನಿರ್ಧಾರ ತೆಗೆದುಕೊಂಡಿತ್ತು, ಇದೀಗ ಜಾರ್ಖಂಡ್‌ ಕೂಡ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ
============
ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸಚಿವ ಸಂಪುಟ ಇದೇ ರೀತಿಯ ನೀತಿಯನ್ನು ಅಂಗೀಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ
========
ಖಾಸಗಿ ವಲಯದ  ತಿಂಗಳಿಗೆ 30,000 ರೂ ವೇತನದವರೆಗಿನ ಶೇಕಡಾ 75 ರಷ್ಟು ಉದ್ಯೋಗಗಳನ್ನು ಸ್ಥಳೀಯ ಜನರಿಗೆ ನೀಡಲು ಜಾರ್ಖಾಂಡ್‌ ನಿರ್ಧರಿಸಿದೆ. ಮುಂದಿನ ವಾರ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಸೊರೆನ್ ಈ ನೀತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮಾರ್ಚ್ 17 ರಂದು ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.
=======
🌷 Jharkhand
=========
☘ Mukhyamantri SHRAMIK 
(Shahri Rozgar Manjuri For Kamgar) Yojna 
☘ Birsa Harit Gram Yojana (BHGY) 
☘ Neelambar Pitambar JAL Sammridhi Yojana (NPJSY) 
☘ Veer Sahid Poto Ho Khel Vikas Scheme (VSPHKVS) 
☘ Kisan Fasal Rahat Yojana
=================
🍁 Formation :- 15 November 2000
🍁 Capital :- Ranchi
🍁 Largest city :- Jamshedpur
🍁 Governor :- Draupadi Murmu 
 🍁 Chief Minister :- Hemant Soren

💐💐💐💐

=====
☘ ಲೋಕಸಭೆಯಲ್ಲಿ ಅನುಮೋದನೆಗೊಂಡ ಹಣಕಾಸು ಮಸೂದೆಯನ್ನು ರಾಜ್ಯಸಬೆ ಎಷ್ಟು ದಿನ ತಡೆಹಿಡಿಯಬಹುದು?
- 14 ದಿನಗಳು

☘ ರಾಷ್ಟ್ರಪತಿ ಅವರಿಂದ ಹಣಕಾಸು ಮಸೂದೆಗೆ ಅನುಮೋದನೆ ಸಿಕ್ಕ ಎಷ್ಟು ದಿನಗಳ ಒಳಗಾಗಿ ರಾಷ್ಟ್ರಪತಿ ಅವರು ಸಹಿ ಹಾಕಬೇಕು?
- 75 ದಿನಗಳು

==========
☘ ಪ್ರತೀ ವರ್ಷ ಬಜೆಟ್ ಅನ್ನು ಯಾವ ತಿಂಗಳಲ್ಲಿ ಮಂಡಿಸುತ್ತಾರೆ?
- ಫೆಬ್ರವರಿ

☘ ಬಜೆಟ್ ಗಾಗಿ ಯಾವ ತಿಂಗಳಲ್ಲಿ ಸುತ್ತೋಲೆಯನ್ನು ಹೊರಡಿಸುತ್ತಾರೆ...?
- ಸಪ್ಟೆಂಬರ್

====
☘ ಬಜೆಟ್ ಮೊದಲು ಬಜೆಟ್ ನಂತರದ ಚರ್ಚೆ
- ಸಾಮಾನ್ಯ ಚರ್ಚೆ & ವಿಸ್ತ್ರತ ಚರ್ಚೆ

☘ ಹಣಕಾಸು ಮಸೂದೆಯನ್ನು ಯಾವ ಸದನದಲ್ಲಿ ಮಂಡಿಸುತ್ತಾರೆ?
- ಲೋಕಸಭೆಯಲ್ಲಿ 109ನೇ ವಿಧಿಯ ಪ್ರಕಾರ

=====
☘ ಬಜೆಟ್ ಬಗ್ಗೆ ತಿಳಿಸುವ ಸಂವಿಧಾನದ ಕಲಂ ಯಾವುದು?
- 112

☘ ಬಜೆಟ್ ಅನ್ನು ಯಾರು ಮಂಡಿಸುತ್ತಾರೆ?
- ಹಣಕಾಸು ಸಚಿವರು

☘ ಬಜೆಟ್ ತಯಾರಿಸುವ ಮುಂಚೆ ಮಾಡುವ ಸಿಹಿ ತಿನಿಸು ಯಾವುದು...?
- ಹಲ್ವಾ

☘ ಸಮ್ಮರಿ ಪಾರ್ ದಿ ಕ್ಯಾಬಿನೆಟ್ ಎಂದರೇನು?
- ಬಜೆಟ್ ಮಂಡನೆಗೆ ಮೊದಲು ಸಚಿವರುಗಳು ಬಜೆಟ್ ಬಗ್ಗೆ ಸಾರಾಂಶ ನೀಡುವುದು

======
☘ ಮೀಸಲಾತಿಗಾಗಿ ಜಾಟ್ ಸಮುದಾಯ ಹೋರಾಡಿದ್ದು ಯಾವ ರಾಜ್ಯದಲ್ಲಿ?
- ಹರಿಯಾಣ

☘ ಮೀಸಲಾತಿಗಾಗಿ ಪಟೇಲ್ ಸಮುದಾಯ ಹೋರಾಡಿದ್ದು ಯಾವ ರಾಜ್ಯದಲ್ಲಿ?
- ಗುಜರಾತ್

No comments:

Post a Comment