Thursday, February 25, 2021

ಇಂದಿನ ವಿಶೇಷತೆ

☘ ವಿನಾಯಕ ದಾಮೋದರ ಸಾವರ್ಕರ್ ಅವರ "ಸ್ಮೃತಿ ದಿನ"
> ಜನನ :- ಮೇ 28, 1883
> ನಿಧನರಾದರು :- ಫೆಬ್ರವರಿ 26, 1966
=======================
ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ - ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ . ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ - ರಾಧಾಬಾಯಿ ದಂಪತಿಗಳಿಗೆ 1883 ರ ಮೇ 28 ರಂದು ಜನಿಸಿದ ವಿನಾಯಕ ಛಲ - ಸಾಹಸ - ಹೋರಾಟಗಳ ಪರ್ಯಾಯ , ಬದುಕು ಕ್ರಾಂತಿಕುಸುಮಗಳ ಸುಂದರಮಾಲೆ . ಹುತಾತ್ಮ ವಾಸುದೇವ ಬಲವಂತ ಫಡಕೆಯ ಪ್ರಚಂಡ ಸಾಹಸ , ಛಾಪೇಕರ್ ಸಹೋದರರ ಸಹೋದರರ ತ್ಯಾಗ ಸ್ವಾತಂತ್ರ ಯಜ್ಞದ ಸಮಿಧೆಯಾಗುವ ದೃಢಸಂಕಲ್ಪಕ್ಕೆ ನಾಂದಿಯಾಗಿ , ಬ್ರಿಟಿಷ್ ಸರಕಾರದ ಬಂಗಾಲ ವಿಭಜನೆಯ ಪ್ರಯತ್ನ ಅಭಿನವ ಮಿತ್ರಮೇಳಗಳ ಹುಟ್ಟಿಗೆ ಕಾರಣವಾಯಿತು .
===================
ಕಾಂಗ್ರೆಸ್‌ನ ಧರ್ಮಸಮನ್ವಯದ ಹಗಲುಗನಸು ದೇಶವಿಭಜನೆಯ ದುರಂತ ಕಥೆಗೆ ನಾಂದಿಹಾಡುತ್ತದೆಯೆಂದು ಎಚ್ಚರಿಸಿ , ಹಿಂದುಗಳು ಸೈನ್ಯಶಕ್ತಿಯ ಭಾಗವಾಗಬೇಕೆಂದು ಅಪೇಕ್ಷಿಸಿ , ಹಿಂದು ನರಮೇಧದ ವಿರುದ್ಧ ಧ್ವನಿಯೆತ್ತಿ , ತುಷ್ಟ್ರೀಕರಣ , ಓಲೈಕೆಯ ಮಾರ್ಗದ ಅನಾಹುತದ ಬಗ್ಗೆ ಭವಿಷ್ಯವಾಣಿ ನುಡಿದರು. ಗಾಂಧಿಹತ್ಯೆಯ ನೆಪದಲ್ಲಿ ಗೃಹಬಂಧನಕ್ಕೀಡಾದ ಸಾವರ್ಕರ್,
 'ನನ್ನ ಜೀವಾವಧಿ ಶಿಕ್ಷೆ ' 
 ' ಮೋಪ್ಲಾ ದಂಗೆ ' 
 ' ಹಿಂದುತ್ವ ಕೃತಿಗಳ ಮೂಲಕ ಭಾರತದ ಸಾರ್ವಭೌಮತೆಗೆದುರಾದ ದುಷ್ಟಶಕ್ತಿಗಳ ವಿರುದ್ಧ ದೇಶವಾಸಿಗಳನ್ನೆಚ್ಚರಿಸಿದ ಪುಣ್ಯಾತ್ಮ. ಇಚ್ಚಾಮರಣಿಯಂತೆ 1966 ರ ಫೆಬ್ರವರಿ 26 ರಂದು ಪಂಚಭೂತಗಳಲ್ಲಿ ಲೀನರಾದ ವೀರ ಸಾವರ್ಕರರ ಅಸ್ಕಲಿತ ರಾಷ್ಟ್ರನಿಷ್ಠೆ , ಉಜ್ವಲ ಸನಾತನತೆ ನಮ್ಮ ಜೀವನಕ್ಕೆ ಬೆಳಕಾಗಲಿ.
=================
🌷ಲೇಖಕರಾಗಿ
=========
☘ ಮರಾಠಿ ಕೃತಿಗಳಲ್ಲಿ “ಕಮಲಾ”
☘ “ನನ್ನ ಜೀವಾವಧಿ ಶಿಕ್ಷೆ”
☘ “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು)
☘ ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಳಾ ಪಾಣಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) 
☘ ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು.
☘ ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”.
=================
🌷ಫೆ.28ಕ್ಕೆ ಕೃತಿ ಲೋಕಾರ್ಪಣೆ
=================
ಸಾವರ್ಕರ್ ಲೇಖನಿಯಿಂದ 20 ಸಾವಿರ ಪುಟಗಳಷ್ಟು ಸಾಹಿತ್ಯ ಉಕ್ಕಿ ಹರಿದಿದೆ . 
ಇದೇ 28 ಕ್ಕೆ ಅವರ ಅಂತಿಮ ಕೃತಿ ಲೋಕಾರ್ಪಣೆಯಾಗುತ್ತಿದೆ . 
“ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು" ಈ ಕೃತಿಯ ಕನ್ನಡ ಅವತರಣಿಕೆ . ತಮ್ಮ ಇಳಿವಯಸ್ಸಿನಲ್ಲಿ 1963 ರಲ್ಲಿ ಮರಾಠಿಯಲ್ಲಿ ರಚಿಸಿದ ಈ ಕೃತಿ ಈಗಾಗಲೇ ಹಿಂದಿ , ಆಂಗ್ಲ ಮತ್ತಿತರ ಭಾಷೆಗಳಲ್ಲಿ ಬಂದಿದೆ .
=================
🌷NOTE
========
👉 Veer Savarkar is also known as _?
- Father Of Hindutva

👉 When was Veer Savarkar born ?
- 28th May 1883

👉 What is the full name of Veer Savarkar?
- Vinayak Damodar savarkar

👉 Who founded the Abhinav Bharat Society in Pune?
- Vinayak Damodar Savarkar

👉 Who called the Quit India Movement struggle (in 1942) as "Quit India but keep your army" movement?
- Vinayak Damodar Savarkar

👉 During his teenage, Veer Savarkar organised a youth organisation, what was it's name?
- Mitra Mela

👉  On which festival did Veer Savarkar burned all the Foreign goods and clothes?
- Dusshera

👉 . In which year Veer Savarkar was elected as the president of the Hindu Mahasabha?
- 1934

👉 Which among the following colleges were joined by Veer Savarkar in London?
- Gray's Inn

👉 Veer Savarkar was sentenced for how many years in Jail?
- 50

👉 When did Veer Savarkar died?
- 26th February 1966
💐💐💐💐

No comments:

Post a Comment