52ನೇ ವಿಧಿ : ರಾಷ್ಟ್ರಧ್ಯಕ್ಷರು ಹುದ್ದೆಗೆ ಅವಕಾಶವನ್ನು ಕಲ್ಪಿಸುತ್ತದೆ.
53ನೇ ವಿಧಿ : ಕೇಂದ್ರ ಕಾರ್ಯಂಗದ ಅಧಿಕಾರಿಗಳು
ರಾಷ್ಟ್ರಾಧ್ಯಕ್ಷರಿಗೆ ಸೇರುತ್ತದೆ.
58ನೇ ವಿಧಿ: ರಾಷ್ಟ್ರಧ್ಯಕ್ಷರ ಪದವಿಗೆ ಬೇಕಾಗುವ
ಅರ್ಹತೆಗಳು .
54 ಮತ್ತು 55 ನೇ
ವಿಧಿ : ರಾಷ್ಟ್ರಧ್ಯಕ್ಷರ ಚುನಾವಣೆಯ ಬಗ್ಗೆ ವಿವರಿಸುತ್ತದೆ .
56ನೇ ವಿಧಿ : ರಾಷ್ಟ್ರಪತಿಯ ಅಧಿಕಾರವಧಿಯ ಬಗ್ಗೆ
ತಿಳಿಸುತ್ತದೆ.
61 ನೇ ವಿಧಿ : ರಾಷ್ಟ್ರಧ್ಯಕ್ಷರ ಮಹಾಭಿಯೋಗ.
85 ನೇ ವಿಧಿ : ರಾಷ್ಟ್ರಧ್ಯಕ್ಷರು ಸಂಸತ್ತಿನ ಅಧಿವೇಶನ ಕರೆಯುವ ಮುಂದೂಡುವ ಹಾಗೂ ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ ಅವಧಿಗೆ ಮುನ್ನ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ.
108 ನೇ ವಿಧಿ : ರಾಷ್ಟ್ರಧ್ಯಕ್ಷರು ಉಭಯ ಸದನಗಳ ಜಂಟಿ ಸಭೆಯನ್ನು ಕರೆಯುವ ಅಧಿಕಾರ ಹೊಂದಿದ್ದಾರೆ .
80ನೇ ವಿಧಿ : ರಾಷ್ಟ್ರಧ್ಯಕ್ಷರು ಕಲೆ ಸಾಹಿತ್ಯ ವಿಜ್ಞಾನ ಸಮಾಜ ಸೇವೆ ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12ಮಂದಿಯನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡುವ ಅಧಿಕಾರ ಹೊಂದಿದ್ದಾರೆ.
331ನೇ ವಿಧಿ : ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್
ಸಮುದಾಯದ ಪ್ರಾತಿನಿಧ್ಯತೆಯ ಕೊರತೆಯಿದ್ದಲ್ಲಿ ರಾಷ್ಟ್ರಧ್ಯಕ್ಷರು ಆ ಸಮುದಾಯದ ಇಬ್ಬರು
ವ್ಯಕ್ತಿಗಳನ್ನು ಲೋಕಸಭಾ ಸದಸ್ಯರನ್ನಾಗಿ ನಾಮಕರಣ ಮಾಡಬಹುದು.
No comments:
Post a Comment