Tuesday, February 23, 2021

ಪಂಚಾಯತ್ ರಾಜ್ ವ್ಯವಸ್ಥೆ

 

1977 ಡಿಸೆಂಬರ್ 12 ರಂದು ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಸರ್ಕಾರವು ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಕಾಯಕಲ್ಪಕ್ಕೆ ಪ್ರಯತ್ನ ಮಾಡಿತು. ಇದರ ಪರಿಣಾಮವಾಗಿ ಅಶೋಕ್‌ಮೆಹ್ತಾ ಸಮಿತಿಯನ್ನು ರಚನೆ ಮಾಡಿತು. ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಜನತಾ ಸರ್ಕಾರವು ಸ್ಥಳೀಯ ಸಂಸ್ಥೆಗಳ ಬಗ್ಗೆ ಅಧ್ಯಯನ ನಡೆಸಲು ಡಿಸೆಂಬರ್ 1977 ರಲ್ಲಿ ಅಶೋಕ್ ಮೆಹ್ತಾರವರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿತು. ಅಶೋಕ್ ಮೆಹ್ತಾ ಸಮಿತಿಯು ಆಗಸ್ಟ್ 1978 ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು 132 ಶಿಫಾರಸ್ಸುಗಳನ್ನು ನೀಡಿತ್ತು. ಈ ಸಮಿತಿಯ ಶಿಫಾರಸ್ಸಿನಂತೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳು ಹೊಸ ಕಾಯ್ದೆಯನ್ನು ಜಾರಿಗೆ ತಂದವು.

 ರಾಜೀವ್ ಗಾಂಧಿ ಅವರು ದೇಶಾದ್ಯಂತ ಏಕರೂಪದಲ್ಲಿ ಪಂಚಾಯತ್ ರಾಜ್  ವ್ಯವಸ್ಥೆಯನ್ನು ತರುವ ಉದ್ದೇಶದಿಂದ 1986 ರಲ್ಲಿ ಸಂವಿಧಾನ ತಜ್ಞರಾದ ಡಾ.ಎಲ್.ಎಂ. ಸಿಂಪ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಇದು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಶಿಫಾರಸ್ಸುಗಳು ಸಂವಿಧಾನದ 73 & 74ನೇ ಮಹತ್ತರ ತಿದ್ದುಪಡಿಗೆ ಕಾರಣವಾದವು.

·         ಸಿಂಘ್ವಿ ಸಮಿತಿಯ ಶಿಫಾರಸ್ಸುಗಳು:

1. ದೇಶಾದ್ಯಂತ ಮೂರು (3) ಹಂತಗಳ ಏಕ ರೂಪದ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತರಬೇಕು.

2. ಈ ಸಂಸ್ಥೆಗಳಿಗೆ ಸಂವಿಧಾನ ಬದ್ದ ಮಾನ್ಯತೆ ನೀಡುವ ಸಲುವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

3.ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ಕಡ್ಡಾಯಗೊಳಿಸಬೇಕು. ಅದಕ್ಕಾಗಿ ಪ್ರತ್ಯೇಕಚುನಾವಣಾ ಆಯೋಗವನ್ನು ರಚಿಸಬೇಕು.

4. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಆಯಾ ಹಂತಗಳಿಗೆ ಸೂಕ್ತವಾದ ಕಾರ್ಯಕ್ರಮಗಳನ್ನು ವರ್ಗಾಯಿಸಬೇಕು.

5. ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹಣಕಾಸನ್ನು ಕೂಡಾ ವರ್ಗಾಯಿಸಬೇಕು. ಅದಕ್ಕಾಗಿ ರಾಜ್ಯ ಹಣಕಾಸು ಆಯೋಗವನ್ನು ರಚಿಸಬೇಕು.


No comments:

Post a Comment