ಎಸ್ಎಸ್ಸಿ ಸಿಜಿಎಲ್ 2020 ನೋಟಿಫಿಕೇಶನ್ ಪ್ರಕಟ: ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ ಮಾಹಿತಿ ಇಲ್ಲಿದೆ..
ಸಿಬ್ಬಂದಿ ನೇಮಕಾತಿ ಆಯೋಗವು ಇಂದು (29-12-2020) ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2020 ಯ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ..
ಸಿಬ್ಬಂದಿ ನೇಮಕಾತಿ ಆಯೋಗವು ಇಂದು (29-12-2020) ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2020 ಯ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಆಯೋಗದ ಅಫೀಶಿಯಲ್ ವೆಬ್ಸೈಟ್ ssc.nic.in ನಲ್ಲಿ ನೋಟಿಫಿಕೇಶನ್ ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಎಸ್ಎಸ್ಸಿ ಸಿಜಿಎಲ್ ಪರೀಕ್ಷೆ 2020 ಗೆ ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಇಂದಿನಿಂದ ಆರಂಭವಾಗಿದ್ದು, 2021 ರ ಜನವರಿ 31 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಪ್ಲಿಕೇಶನ್ ಶುಲ್ಕವನ್ನು ಫೆಬ್ರವರಿ 2, 2021 ರವರೆಗೆ ಸಲ್ಲಿಸಬಹುದು.
ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಹುದ್ದೆಗಳಿಗೆ ಟೈಯರ್-1 ಪರೀಕ್ಷೆಯನ್ನು 2021 ರ ಮೇ 29 ರಿಂದ ಜೂನ್ 7 ರ ನಡುವೆ ನಡೆಸಲಿದೆ. ಎಸ್ಎಸ್ಸಿ ಸಿಜಿಎಲ್ ಪರೀಕ್ಷೆ ಮೂಲಕ ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳಲ್ಲಿನ ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ನಿರೀಕ್ಷಿತ ಹುದ್ದೆಗಳ ಸಂಖ್ಯೆ ಮೀಸಲಾತಿಗೆ ಅನುಗುಣವಾಗಿ ಒಟ್ಟು 6506 (ಗ್ರೂಪ್ 'ಬಿ' ಗೆಜೆಟೆಡ್-250, ಗ್ರೂಪ್ 'ಬಿ' ನಾನ್-ಗೆಜೆಟೆಡ್-3513, ಗ್ರೂಪ್ 'ಸಿ'-2743) ಹುದ್ದೆಗಳಿವೆ.
ಎಸ್ಎಸ್ಸಿ ಸಿಜಿಎಲ್ ಹುದ್ದೆಗಳಿಗೆ ಈ ಕೆಳಗಿನ ನಾಲ್ಕು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಟೈಯರ್-I: ಕಂಪ್ಯೂಟರ್ ಆಧಾರಿತ ಪರೀಕ್ಷೆ
ಟೈಯರ್-II: ಕಂಪ್ಯೂಟರ್ ಆಧಾರಿತ ಪರೀಕ್ಷೆ
ಟೈಯರ್-III: ಪೆನ್ ಮತ್ತು ಪೇಪರ್ ಮಾದರಿ ಪರೀಕ್ಷೆ (ವಿವರಣಾತ್ಮಕ ಪರೀಕ್ಷೆ)
ಟೈಯರ್-IV: ಕಂಪ್ಯೂಟರ್ ಅರಿವು ಪರೀಕ್ಷೆ / ಡಾಟಾ ಎಂಟ್ರಿ ಸ್ಕಿಲ್ ಟೆಸ್ಟ್ (ಯಾವುವು ಅಗತ್ಯವೋ ಅದು)
SSC CGL 2020: ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಸಲ್ಲಿಕೆ ಆರಂಭ ದಿನಾಂಕ : 29-12-2020
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 31-01-2021
ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ : 02-02-2021
ಟೈಯರ್-1 ಪರೀಕ್ಷೆ ನಿರೀಕ್ಷಿತ ದಿನಾಂಕ: 29-05-2021 ರಿಂದ 07-06-2021
ವಯೋಮಿತಿ ಅರ್ಹತೆಗಳು
ಪೋಸ್ಟ್ ಲೆವೆಲ್-8 ರ ಹುದ್ದೆಗಳಿಗೆ 30 ವರ್ಷ, ಪೋಸ್ಟ್ ಲೆವೆಲ್-7 ಕ್ಕೆ 20-30 ವರ್ಷ, ಇನ್ಸ್ಪೆಕ್ಟರ್ ಹುದ್ದೆಗಳಿಗೆ 18-30 ವರ್ಷ, ಪೋಸ್ಟ್ ಲೆವೆಲ್-5 ಹುದ್ದೆಗಳಿಗೆ 18-27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ ಹೇಗೆ?
SSC CGL ಪರೀಕ್ಷೆಯನ್ನು 4 ಹಂತಗಳಲ್ಲಿ ನಡೆಸಲಾಗುತ್ತದೆ. ಟೈಯರ್-1, ಟೈಯರ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಟೈಯರ್ -3 ಮತ್ತು ಟೈಯರ್-4 ವಿವರಣಾತ್ಮಕ ಪತ್ರಿಕೆಗಳಾಗಿವೆ. ಮತ್ತು ಕಂಪ್ಯೂಟರ್ ಜ್ಞಾನ, ಸ್ಕಿಲ್ ಟೆಸ್ಟ್ ನಡೆಸಿ ನೇಮಕಾತಿ ಮಾಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಅಂಗೀಕೃತ ವಿವಿಗಳಿಂದ ಯಾವುದೇ ಪದವಿ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
SSC CGL 2020 Notification - https://ssc.nic.in/SSCFileServer/PortalManagement/UploadedFiles/notice_CGLE_29122020.pdf
No comments:
Post a Comment