Thursday, November 5, 2020

ಬೃಹತ್ ಔಷಧ ಪಾರ್ಕ್

• ಬೃಹತ್ ಔಷಧ ಪಾರ್ಕ್ ಎಂದರೇನು ಮತ್ತು ಹಿಮಾಚಲ ಪ್ರದೇಶಕ್ಕೆ ಯಾಕೆ ಬೇಕಾಗಿದೆ?
 

ಸಂದರ್ಭ:

ಹಿಮಾಚಲ ಪ್ರದೇಶ ರಾಜ್ಯವು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಬೃಹತ್ ಔಷಧ ಉದ್ಯಾನವನ ನಿರ್ಮಾಣದ ಹಂಚಿಕೆಗಾಗಿ ಸ್ಪರ್ಧಿಸುತ್ತಿದೆ.
 

ಅಂತಹ ಮೂರು ಉದ್ಯಾನವನಗಳನ್ನು ದೇಶಾದ್ಯಂತ ಸ್ಥಾಪಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ.

 
ಬೃಹತ್ ಔಷಧಗಳು ಅಥವಾ API ಗಳು ಎಂದರೇನು?


ಬೃಹತ್ ಔಷಧವನ್ನು ಕ್ರಿಯಾಶೀಲ ಔಷಧೀಯ ಘಟಕಾಂಶ(active pharmaceutical ingredients) ಎಂದು ಕರೆಯುತ್ತಾರೆ


ಇದು ಔಷಧದ ಒಂದು ಪ್ರಮುಖ ಘಟಕಾಂಶವಾಗಿದೆ, ಇದು ಅಪೇಕ್ಷಿತ ಚಿಕಿತ್ಸೆಯನ್ನು ನೀಡುತ್ತದೆ ಅಥವಾ ಔಷಧಿಯ ಉದ್ದೇಶಿತ ಚಟುವಟಿಕೆಯನ್ನು ಪೂರೈಸುತ್ತದೆ.
 

1) ಉದಾಹರಣೆಗೆ: ಪ್ಯಾರಸಿಟಮಾಲ್,- ಇದು ಒಂದು ಬೃಹತ್ ಔಷಧ ವಾಗಿದೆ, ಇದು ನೋವಿನ ವಿರುದ್ಧ ಕಾರ್ಯನಿರ್ವಹಿಸುತ್ತದೆ. ಸಿದ್ಧಪಡಿಸಿದ ಔಷಧದ ಉತ್ಪನ್ನವನ್ನು ತಯಾರಿಸಲು ಬೈಂಡಿಂಗ್ ಏಜೆಂಟ್ ಗಳೊಂದಿಗೆ ಅಥವಾ ದ್ರಾವಕಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ.
 

API ಗಳನ್ನು ಹೇಗೆ ತಯಾರಿಸಲಾಗುತ್ತದೆ?

ರಾಸಾಯನಿಕಗಳು ಮತ್ತು ದ್ರಾವಕಗಳನ್ನು ಒಳಗೊಂಡ ಅನೇಕ ಪ್ರತಿಕ್ರಿಯೆಗಳಿಂದ ಅವುಗಳನ್ನು ತಯಾರಿಸಲಾಗುತ್ತದೆ.
 

1) ಒಂದು API ನ್ನು ರೂಪಿಸಲು ಅದರ ಪ್ರತಿಕ್ರಿಯೆಗೆ ಬೇಕಾದ ಪ್ರಾಥಮಿಕ ರಾಸಾಯನಿಕ ಅಥವಾ ಮೂಲ ಕಚ್ಚಾ ವಸ್ತು ಗಳನ್ನು ಪ್ರಮುಖ ಆರಂಭಿಕ ವಸ್ತು(key starting material) ಎಂದು ಕರೆಯುತ್ತಾರೆ.ksm

 
2)ಈ ಪ್ರತಿಕ್ರಿಯೆಗಳ ಸಮಯದಲ್ಲಿ ಮಧ್ಯಂತರ ಹಂತದಲ್ಲಿ ರೂಪುಗೊಂಡ ರಾಸಾಯನಿಕ ಸಂಯುಕ್ತಗಳನ್ನು ಔಷಧದ ಮಧ್ಯವರ್ತಿಗಳು ಅಥವಾ DI (DRUG INTERMEDIATES) ಎಂದು ಕರೆಯುತ್ತಾರೆ.


ಭಾರತವು ಬೃಹತ್ ಔಷಧೀಯ ಉದ್ಯಾನವನಗಳನ್ನು ಏಕೆ ಪ್ರಚಾರ ಮಾಡುತ್ತಿದೆ?
 

ಭಾರತವು ವಿಶ್ವದ ಅತಿ ದೊಡ್ಡ ಔಷಧೀಯ ಉದ್ಯಮಗಳ ದೇಶದಲ್ಲಿ ಒಂದಾಗಿದೆ.( ಪರಿಮಾಣದ ಪ್ರಕಾರ ಮೂರನೆಯ ಅತಿ ದೊಡ್ಡ ದೇಶ).


ಆದರೆ ಈ ಉದ್ಯಮಗಳು API ಗಳು,DI ಗಳನ್ನು ಮತ್ತುKSM ಗಳನ್ನು ಆಮದು ಮಾಡಿಕೊಳ್ಳಲು ಇತರ ದೇಶಗಳ ಮೇಲೆ,ವಿಶೇಷವಾಗಿ ಚೀನಾವನ್ನು ಅವಲಂಬಿಸಿರುತ್ತದೆ.


ಆದ್ದರಿಂದ, ಆ ದೇಶಗಳಲ್ಲಿ ಆಗುವ ಯಾವುದೇ ಅಡೆತಡೆಗಳು ಭಾರತದಲ್ಲಿನ ಔಷಧೀಯ ಉದ್ಯಮಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತವೆ.
 

1) ಉದಾಹರಣೆಗೆ, ಈ ವರ್ಷ, covid-19ರ ಕಾರಣದಿಂದಾಗಿ ಅವುಗಳಲ್ಲಿನ  ಅಡೆತಡೆಯಿಂದ ಆಗಿ ಭಾರತದಲ್ಲಿ ಔಷಧ ತಯಾರಕರು ಮತ್ತೆ ಮತ್ತೆ ಹಿನ್ನಡೆಯನ್ನು ಅನುಭವಿಸಿದರು.
 

2) ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷವು ಈ ಪರಿಸ್ಥಿತಿಯನ್ನು ಮತ್ತಷ್ಟು ಬಲಗೊಳಿಸಿತು.


 ಹಾಗಾದರೆ,ಭಾರತ ಏನು ಮಾಡುತ್ತಿದೆ?

ಹೆಚ್ಚಿನ ಸ್ವಾವಲಂಬನೆಗಾಗಿ ಕರೆ: ಈ ಬಾರಿ ಜೂನ್ ನಲ್ಲಿ, ದೇಶದಲ್ಲಿ ಮೂರು ಬೃಹತ್ ಔಷಧೀಯ ಉದ್ಯಾನವನಗಳನ್ನು ಪ್ರಚಾರಕ್ಕಾಗಿ ಔಷಧೀಯ ಇಲಾಖೆಯು ಯೋಜನೆಯನ್ನು ಘೋಷಿಸಿತು.


1) ಬೃಹತ್ ಔಷಧೀಯ ಉದ್ಯಾನವನಗಳು API ಗಳು,DI ಗಳು ಅಥವಾKSM ಗಳ ವಿಶೇಷ ತಯಾರಿಕೆಗಾಗಿ ಸಾಮಾನ್ಯ ಮೂಲ ಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ಒಂದು ಗೊತ್ತುಪಡಿಸಿದ ಭೂಪ್ರದೇಶವನ್ನು ಹೊಂದಿರುತ್ತವೆ ಮತ್ತು ಸಾಮಾನ್ಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಹ ಹೊಂದಿರುತ್ತವೆ.
 

2) ಈ ಉದ್ಯಾನವನಗಳು ದೇಶದಲ್ಲಿ ಬೃಹತ್ ಔಷಧಿಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಮತ್ತು ದೇಶಿಯ ಬೃಹತ್ ಔಷಧ ಉದ್ಯಮದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
 

ಬೃಹತ್ ಔಷಧ ಉದ್ಯಾನವನಗಳ ಪ್ರಚಾರಕ್ಕಾಗಿ ಯೋಜನೆಯ ಪ್ರಮುಖ ಲಕ್ಷಣಗಳು:

1) ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳ  ಸೃಷ್ಟಿಗೆ ಒಂದು-ಬಾರಿ -ಅನುದಾನ ನೀಡುವ ಮೂಲಕ ಯೋಜನೆಯು ದೇಶದ ಆರಿಸಿದ ಮೂರು ಉದ್ಯಾನವನಗಳನ್ನು ಬೆಂಬಲಿಸುತ್ತದೆ.

2) ಅನುದಾನ ಸಹಾಯಧನವು ಸಾಮಾನ್ಯ ಸೌಲಭ್ಯಗಳ ವೆಚ್ಚದ ಶೇಕಡ 70ರಷ್ಟು ಆಗಿರುತ್ತದೆ. ಆದರೆ ಹಿಮಾಚಲ ಪ್ರದೇಶ ಹಾಗೂ ಇತರೆ ಪರ್ವತ ರಾಜ್ಯಗಳ ಸಂದರ್ಭದಲ್ಲಿ, ಶೇಕಡ 90ರಷ್ಟು ಆಗಿರುತ್ತದೆ.

3) ಕೇಂದ್ರವು ಪ್ರತಿ ಉದ್ಯಾನವನಕ್ಕೆ ಗರಿಷ್ಠ ಒಂದು ಸಾವಿರ ಕೋಟಿ ರೂಪಾಯಿಗಳನ್ನು ನೀಡುತ್ತದೆ

4) ಒಂದು ರಾಜ್ಯ ಒಂದು ಸೈಟನ್ನು ಮಾತ್ರ ಪ್ರಸ್ತಾಪಿಸಬಹುದು, ಅದು 1000 ಎಕರೆಗಿಂತ ಕಡಿಮೆ ಇರಬಾರದು ಅಥವಾ ಬೆಟ್ಟದ ರಾಜ್ಯಗಳ ಪ್ರದೇಶದಲ್ಲಿ 700 ಎಕರೆಗಿಂತ ಕಡಿಮೆ ಇರಬಾರದು. 

No comments:

Post a Comment