Thursday, October 8, 2020

ಅಟಲ್ ಜೀ ಸುರಂಗ ಮಾರ್ಗ

ಅಟಲ್ ಜೀ ಸುರಂಗ ಮಾರ್ಗ:~

ಅಟಲ್ ಹೆಸರಿನ ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗವನ್ನು ಶನಿವಾರ (ಅಕ್ಟೋಬರ್ 3) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಹಿಮಾಚಲಪ್ರದೇಶದ ಮನಾಲಿ ಹಾಗೂ ಲಡಾಕ್ ನ ಲೇಹ್ ನಡುವಿನ ಪ್ರಯಾಣದ ಅವಧಿಯನ್ನು ಈ ಮಾರ್ಗವು 4-5 ಗಂಟೆ ಕಡಿಮೆಗೊಳಿಸಲಿದೆ. ತುರ್ತು ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಚೀನಾ ಗಡಿಭಾಗಕ್ಕೆ ಕ್ಷಿಪ್ರವಾಗಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲೂ ಈ ಸುರಂಗ ಮಾರ್ಗ ಪ್ರಮುಖವಾಗಲಿದೆ. ಈ ಸುರಂಗದ ಮುಖಾಂತರ ಗಡಿ ಭಾಗಕ್ಕೆ ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿ ತಲುಪಲು ಸಾಧ್ಯವಾಗಲಿದೆ. ಇದರ ವೈಶಿಷ್ಟ್ಯಗಳು ಹೀಗಿವೆ...

# 10,000 ಅಡಿ : ಸಮುದ್ರಮಟ್ಟದಿಂದ ಸುರಂಗ ಇರುವ ಮಾರ್ಗ

# 9.02 ಕಿ.ಮೀ : ಸುರಂಗದ ಉದ್ದ

# 10.5 ಕಿ.ಮೀ : ಸುರಂಗದ ಅಗಲ

# 5,525 ಮೀ : ಸುರಂಗದ ಎತ್ತರ

# 80 ಕಿ.ಮೀ/ಗಂಟೆ : ವಾಹನಗಳ ವೇಗ ಮಿತಿ

# 46 ಕಿ.ಮೀ : ಮನಾಲಿ ಹಾಗೂ ಲೇಹ್ ನಡುವೆ ಕಡಿಮೆಯಾಗುವ ಪ್ರಯಾಣ ದೂರ

# 1500 : ಪ್ರತಿ ನಿತ್ಯ ಟ್ರಕ್ ಗಳ ಸಂಚಾರ ಸಾಮರ್ಥ್ಯ

# 3,000 : ಪ್ರತಿ ನಿತ್ಯ ಕಾರುಗಳು ಸಂಚರಿಸುವಂತೆ ಸುರಂಗದ ವಿನ್ಯಾಸ

 

ಸುರಂಗ ಮಾರ್ಗದ ಹಾದಿ

# ರೊಹ್ ತಾಂಗ್ ಪಾಸ್ ನಲ್ಲಿ ಸುರಂಗ ನಿರ್ಮಾಣಕ್ಕೆ 2000 ನೇ ಇಸವಿಯ ಜೂನ್ 3 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರ್ಧಾರ

# 2002 ರ ಮೇ 26 ರಂದು ಸುರಂಗದ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ

# ಗಡಿ ರಸ್ತೆ ನಿರ್ಮಾಣ ಸಂಸ್ಥೆಯಿಂದ(ಬಿಆರ್.ಒ) ಕಾಮಗಾರಿ

# 2017 ರ ಅಕ್ಟೋಬರ್ 15 ರಂದು ಸುರಂಗ ನಿರ್ಮಾಣ ಕಾಮಗಾರಿ ಪೂರ್ಣ

# ಮನಾಲಿ, ಲಾಹೋರ್-ಸ್ಈತಿ ಕಣಿವೆಗೆ ವರ್ಷಪೂರ್ತಿ ಸಂಪರ್ಕ

# ಹಿಮಪಾತದ ಕಾರಣ ಸಂಪರ್ಕ ಕಡಿದುಕೊಳ್ಳುತ್ತಿದ್ದ ಕಣಿವೆ

# ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ, ರೊಹ್ ತಾಂಗ್ ಸುರಂಗವನ್ನು "ಅಟಲ್" ಸುರಂಗ ಎಂದು ಮರುನಾಮಕರಣ ಮಾಡಲು 2019 ರ ಡಿಸೆಂಬರ್ 24 ರಂದು ಕೇಂದ್ರ ಸಚಿವ ಸಂಪುಟ ತೀರ್ಮಾನ

 

ಸುರಂಗದ ವೈಶಿಷ್ಟ್ಯಗಳು

# ಕುದುರೆ ಲಾಳದ ಆಕಾರದಲ್ಲಿ ನಿರ್ಮಾಣವಾಗಿರುವ ದ್ವಿಪಥ ರಸ್ತೆಯಿರುವ ಸುರಂಗ

# ಸುರಂಗದೊಳಗೆ ಸಮರ್ಪಕವಾಗಿ ಗಾಳಿಯಾಡಲು ಹಾಗೂ ವಾಹನಗಳ ವಿಷಕಾರಿ ಹೊಗೆ ತುಂಬದಂತೆ "ಸೆಮಿ ಟ್ರಾನ್ಸ್ ವರ್ಸ್ ವೆಂಟಿಲೇಷನ್" ವ್ಯವಸ್ಥೆ

# "ಸ್ಕಾಡಾ" ನಿಯಂತ್ರಿತ ಅಗ್ನಿಶಾಮಕ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾ

# ಪ್ರತಿ 1 ಕಿ.ಮೀ ಗೆ ವಾಯುಗುಣಮಟ್ಟ ಪರಿಶೀಲಿಸುವ ಸಾಧನ

No comments:

Post a Comment