Thursday, October 15, 2020

ಪ್ರಚಲಿತ ಘಟನೆಗಳು

ಭಾರತದ ಮೊದಲ ಆಸ್ಕರ್ ಪ್ರಶಸ್ತಿ ವಿಜೇತ ವಸ್ತ್ರವಿನ್ಯಾಸಕಿ ಭಾನು ಅಥೈಯಾ ನಿಧನ
===================
ಖ್ಯಾತ ವಸ್ತ್ರವಿನ್ಯಾಸಕಿ ಮತ್ತು ಭಾರತದ ಮೊಟ್ಟ ಮೊದಲ ಆಸ್ಕರ್ ಪ್ರಶಸ್ತಿ ವಿಜೇತೆ ಭಾನು ಅಥೈಯಾ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾನು ಅಥೈಯಾ ಅವರು ಗುರುವಾರ ತಮ್ಮ ಮನೆಯಲ್ಲಿ ಮಲಗಿದ್ದಾಗಲೇ ನಿಧನರಾದರು
================
1983 ರ ಚಲನಚಿತ್ರ ಗಾಂಧಿ ಚಿತ್ರದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಭಾನು ಅವರಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿತ್ತು. ಕೊಲ್ಹಾಪುರದಲ್ಲಿ ಜನಿಸಿದ ಭಾನು ಅಥೈಯಾ, ಗುರು ದತ್ ಅವರ 1956 ರ ಸೂಪರ್ ಹಿಟ್ "ಸಿ.ಐ.ಡಿ." ಯೊಂದಿಗೆ ಹಿಂದಿ ಚಿತ್ರರಂಗದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ವೃತ್ತಿಜೀವನವನ್ನು  ಪ್ರಾರಂಭಿಸಿದರು. ಜಾನ್ ಮೊಲ್ಲೊ ಅವರೊಂದಿಗೆ ರಿಚರ್ಡ್ ಅಟೆನ್‌ಬರೋ ಅವರ 'ಗಾಂಧಿ' ಚಿತ್ರದಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
============
2012 ರಲ್ಲಿ, ಅಥೈಯಾ ತಮ್ಮ ಆಸ್ಕರ್ ಪ್ರಶಸ್ತಿಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಗೆ ಸುರಕ್ಷಿತವಾಗಿಡಲು ಹಿಂದಿರುಗಿಸಿದರು. ಐದು ದಶಕಗಳ ವೃತ್ತಿ ಜೀವನದಲ್ಲಿ ಭಾನು ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗುಲ್ಜಾರ್ ಅವರ ಲೆಕಿನ್" (1990) ಮತ್ತು ಅಶುತೋಷ್ ಗೋವಾರಿಕರ್ (2001) ನಿರ್ದೇಶಿಸಿದ "ಲಗಾನ್" ಚಿತ್ರಕ್ಕಾಗಿ ಅವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ.
=======
💐 Bhanu Athaiya
======
> Born :- 28 April 1929
> Died :- 15 October 2020 (aged 91)
===========
👉 Award
==========
> 1983 (55th) :- Academy Award for Best Costume Design
> 1983 (36th):- BAFTA Award for Best Costume Design
> 1991 (38th) :- National Film Award for Best Costume Design
> 2002 (49th) :- National Film Award for Best Costume Design
> 2009 (54th) :- Filmfare Lifetime Achievement Award
> 2013 (4th) :- Laadli Lifetime Achievement Award
👆👆

No comments:

Post a Comment