Friday, September 4, 2020

Mini Notes

💎ಕೋಹಿನೂರ್‌ ವಜ್ರ💎

ಕೋಹಿನೂರ್‌ ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ವಜ್ರವಾಗಿದ್ದ 105 ಕ್ಯಾರಟ್ (6 ಗ್ರಾಂ) ವಜ್ರವಾಗಿದೆ. ಇದಕ್ಕೆ ಪರ್ಷಿ ಯನ್‌ನಲ್ಲಿ “ಬೆಟ್ಟದಷ್ಟು ಬೆಳಕು”[Mountain Of Light] ಎಂಬರ್ಥವಿದೆ. ಕೋಹಿನೂರ್‌ ಭಾರತದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಮೊದಲು ಕಂಡು ಬಂದಿತು. ಈ ವಜ್ರಕ್ಕಾಗಿ ಇತಿಹಾಸದಲ್ಲಿ ಅನೇಕ ಹಿಂದು, ಮೊಘಲ್, ಪರ್ಷಿಯನ್, ಅಫ್ಘನ್, ಸಿಖ್ ಮತ್ತು ಬ್ರಿಟಿಷ್ ಆಡಳಿತಗಾರರು ತೀವ್ರವಾಗಿ ಕಾದಾಡಿದ್ದಾರೆ. ಅಲ್ಲದೇ ಯುದ್ಧದ ಸಂದರ್ಭದಲ್ಲಿ ಲೂಟಿ ಮಾಡಿದ್ದಾರೆ. ಇದು ಅಂತಿಮವಾಗಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಸೂರೆಮಾಡಲ್ಪಟ್ಟಿತು. ಅದಲ್ಲದೇ ರಾಣಿ ವಿಕ್ಟೋರಿಯಾಳು 1877ರಲ್ಲಿ ಭಾರತದ ಸರ್ವಾಧಿಕಾರಿಣಿ ಎಂಬುದಾಗಿ ಘೋಷಿಸಲ್ಪಟ್ಟಾಗ ಬ್ರಿಟಿಷ್ ರಾಜಪ್ರಭುತ್ವದ ಆಭರಣಗಳ ಭಾಗವಾಯಿತು.

☘ಕೊಹಿನೂರ್‍ ವಜ್ರದ ಮೂಲ ಈಗಿನ ಆಂದ್ರಪ್ರದೇಶ. ಅದು ಸುಮಾರು 5 ಸಾವಿರ ವರ್ಷಗಳ ಹಿಂದಿಮದ್ದೆಂಬ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಜಾಂಬವಂತನಿಂದ ಈ ವಜ್ರವನ್ನು ಪಡೆದ ಎಂದು ಅನೇಕ ಕಥೆಗಳಲ್ಲಿ ಉಲ್ಲೇಖವಿದೆ.

☘ಇತಿಹಾಸಕಾರರ ಪ್ರಕಾರ ಕೊಹಿನೂರ್‍ ವಜ್ರ ಸುಮಾರು 3000 ವರ್ಷಗಳ ಹಿಂದಿನದ್ದು. ಅಂದರೆ ಮಹಾಭಾರತದ ಕಾಲಘಟ್ಟದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

☘ಈ ವಜ್ರ ಪ್ರಸಿದ್ದಿಗೆ ಬಂದದ್ದು 14ನೇ ಶತಮಾನದಲ್ಲಿ,ಮೂಲದಲ್ಲಿ ಕೊಹಿನೂರ್‍ ವಜ್ರ ಕಾಕತೀಯ ಅರಸರ ಸೊತ್ತಾಗಿತ್ತು. 1320ರಲ್ಲಿ ಕಾಕತೀಯ ಅರಸರನ್ನು ಸೋಲಿಸಿದ ದೆಹಲಿ ಸುಲ್ತಾನರು ವಜ್ರವನ್ನು ದೆಹಲಿಗೆ ಕೊಂಡ್ಯೋಯ್ದರು. ಕಾಲ ಕ್ರಮೇಣ ಅದು ಮೊಘಲ್ ಚಕ್ರವರ್ತಿ ಬಾಬರ್‍ ನ ಕೈ ಸೇರಿತು ಎಂದು ಬಾಬರ್‍ ನಾಮಾ ದಲ್ಲಿ ಉಲ್ಲೇಖವಿದೆ.

☘ಕೊಹಿನೂರ್ ವಜ್ರದ ನಿಖರ ಮೌಲ್ಯ ಗೊತ್ತಿಲ್ಲವಾದರೂ, ದಿನವೊಂದರಲ್ಲಿ ವಿಶ್ವದ ಒಟ್ಟಾರೆ ಉತ್ಪಾದನಾ ವೆಚ್ಚಗಳ ಸುಮಾರು ಅರ್ಧದಷ್ಟು ಭಾಗಕ್ಕೆ ಈ ವಜ್ರದ ಬೆಲೆ ಸಮ ಎಂದು 1500ರ ಅವಧಿಯಲ್ಲಿ ಬಾಬರ್ ಇದರ ಮೌಲ್ಯ ನಿರ್ಣಯಿಸಿದ್ದನಂತೆ

☘ಕೊಹಿನೂರ್ ವಜ್ರದ ಬೆಲೆನಿಗದಿಯ ಕುರಿತು ಮತ್ತೊಂದು ದಂತಕಥೆಯೂ ಚಾಲ್ತಿಯಲ್ಲಿದೆ. 
—ಈ ವಜ್ರ ಪರ್ಷಿಯಾದ ನಾದಿರ್ ಷಾ ಬಳಿಯಿದ್ದಾಗ ಅವನ ಹೆಂಡತಿಯರಲ್ಲೊಬ್ಬಳು ‘ದೃಢಕಾಯನಾದ ವ್ಯಕ್ತಿಯೊಬ್ಬ ಐದು ಕಲ್ಲುಗಳನ್ನು ತೆಗೆದು ಕೊಂಡು ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ದಿಕ್ಕುಗಳಿಗೆ ಮತ್ತು ಕೊನೆಯದನ್ನು ತಲೆಯ ಮೇಲ್ಭಾಗದಲ್ಲಿ ನೇರವಾಗಿ ಎತ್ತರಕ್ಕೆ ಎಸೆದರೆ ಅವುಗಳ ನಡುವಿನ ಸ್ಥಳಾವಕಾಶದಲ್ಲಿ ಬಂಗಾರ ಮತ್ತು ರತ್ನಗಳನ್ನು ತುಂಬಿಸಿದರೆ ಎಷ್ಟು ಮೌಲ್ಯ ಬರುತ್ತದೆಯೋ ಅದು ಕೊಹಿನೂರ್ ವಜ್ರದ ನಿಜವಾದ ಮೌಲ್ಯ’ ಎಂದಳಂತೆ!.

☘ನಂತರದಲ್ಲಿ ವಜ್ರ ಮೊಘಲ್ ದೊರೆ ಔರಂಗಜೇಬನ ಸುಪರ್ದಿಗೆ ಸೇರುತ್ತದೆ. ಆತ ನಂತರ ಕೊಹಿನೂ‍ರನ್ನು ಲಾಹೋರ್ ದೊರೆಯಾದ ರಣಜಿತ್ ಸಿಂಗ್ ನಿಗೆ ಕಾಣಿಕೆಯಾಗಿ ನೀಡುತ್ತಾನೆ.

☘ಕೊಹಿನರ್‍ ಪರಂಪರೆಯ ಗೌರವಾರ್ಥವಾಗಿ ತನ್ನ ಕಾಲಾನಂತರದಲ್ಲಿ ವಜ್ರವನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ಉಯಿಲು ಬರೆದಿಡುತ್ತಾನೆ ಆದರೆ 1839ರಲ್ಲಿ ನಡೆದ ಎರಡನೇ ಆಂಗ್ಲೋ ಸಿಖ್ ಯುದ್ದದ ನಂತರ ಲಾರ್ಡ್ ಡಾಲ್ ಹೌಸಿಯು ಮೋಸದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಪಡೆದುಕೊಳ್ಳುತ್ತಾನೆ. ಈ ಒಪ್ಪಂದದ ಪ್ರಕಾರ ಕೊಹಿನೂರ್‍ ವಜ್ರವನ್ನು ಬ್ರಿಟನ್ ಅರಸೊತ್ತಿಗೆಗೆ ಕಾಣಿಕೆಯಾಗಿ ನೀಡುವುದಾಗಿ ಲಾಹೋರ್‍ ಒಪ್ಪಂದದ 3ನೇಯ ವಿಧಿಯಲ್ಲಿ ಮೋಸದಿಂದ ಸೇರಿಸಲಾಗುತ್ತದೆ ಈಗೆ ವಜ್ರ ಬ್ರಿಟೀಷರ ಪಾಲಾಯಿತು.
==================================
👉 ಕರ್ನಾಟಕದ ಬಗ್ಗೆ ಕಿರು ಮಾಹಿತಿ.

# ಸ್ಥಾಪನೆ  =1956 ನವೆಂಬರ್ 1
# ರಾಜಧಾನಿ = ಬೆಂಗಳೂರು 
# ದೊಡ್ಡ ನಗರ = ಬೆಂಗಳೂರು
# ಜಿಲ್ಲೆಗಳು = 30
# ವಿಸ್ತಿರ್ಣ = 191791 ಕಿ. ಮೀ 
# ಭಾಷೆ = ಕನ್ನಡ 
# ಜನಸಂಖ್ಯೆ = 61130704
# ಜನಸಾಂದ್ರತೆ = 319
# ನೃತ್ಯ = ಯಕ್ಷಗಾನ, ಡೊಳ್ಳುಕುಣಿತ 
# ವಿಧಾನ ಸಭೆ ಸದಸ್ಯರು = 224+1
# ಪ್ರಸ್ತುತ ರಾಜ್ಯಪಾಲರು = ವಜುಭಾಯಿ ರೂಡಭಾಯಿ ವಾಲ
# ಪ್ರಸ್ತುತ ಮುಖ್ಯಮಂತ್ರಿ = B.S.ಯಡಿಯೂರಪ್ಪ.
==================================
👉 ಕರ್ನಾಟಕದಲ್ಲಿ 'ನೀನಾಸಂ' ಯಾವ ಊರಿನಲ್ಲಿದೆ.? - "ಹೆಗ್ಗೋಡು"
👉 ಖ್ಯಾತ ರಂಗಕರ್ಮಿ ಕೆ.ವಿ. ಸುಬ್ಬಣ್ಣನವರ ಹೆಸರು ಕೆಳಗಿನ ಯಾವ ಸಂಸ್ಥೆಯ ಜೊತೆ ಹೊಂದಿಕೊಂಡಿದೆ.? - "ನೀನಾಸಂ"
👉 ನಾಟಕೀಯ ಶೈಲಿಯಲ್ಲಿ ರಚಿತವಾಗಿರುವ ಕೃತಿ - "ಹರಿಶ್ಚಂದ್ರ ಕಾವ್ಯ"
👉 "ಕೊಡೆಗಳು" ನಾಟಕ ಬರೆದವರು - "ಚಂದ್ರಶೇಖರ ಪಾಟೀಲ"
👉 "Broken Image" ಎಂಬ ನಾಟಕವನ್ನು ರಚಿಸಿದವರು - "ಗಿರೀಶ್ ಕಾರ್ನಾಡ್"
👉 ಕರ್ನಾಟಕದ ಕೆಳಕಂಡ ಯಾವ ಸ್ಥಳದಲ್ಲಿ ಅಶೋಕನ ಶಾಸನ ದೊರೆಯುವುದಿಲ್ಲ.? 
- "ಉಡಿಗೋಲಂ"
👉 ತಾಳಗುಂದ ಶಾಸನದಲ್ಲಿ, ಯಾರನ್ನು "ಕದಂಬ ಕುಟುಂಬದ ಭೂಷಣ" ಎಂದು ಕರೆಯಲಾಗಿದೆ - "ಕಾಕುಸ್ಥ ವರ್ಮ"
👉 ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು.? - "ಹೆಬ್ರೂ"
👉 ಕರ್ನಾಟಕದಲ್ಲಿ 14 ಸಂಖ್ಯೆಯ ಅಶೋಕನ ಶಿಲಾಶಾಸನಗಳು ದೊರೆತಿವೆ
👉 ಕನ್ನಡದ ಮೊದಲ ಶಾಸನ ಯಾವುದು ಇದನ್ನು ಕರೆಯುತ್ತಾರೆ - "ಹಲ್ಮಿಡಿ ಶಾಸನ"
==================================
👉 ಜುಲೈ 5, 2020 ರಂದು ಬುಬೊನಿಕ್ ಪ್ಲೇಗ್‌ನ ಶಂಕಿತ ಪ್ರಕರಣವನ್ನು ಯಾವ ದೇಶ ವರದಿ ಮಾಡಿದೆ?
- ಚೀನಾ

👉 ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾದವರು? 
- ಜೀನ್ ಕ್ಯಾಸ್ಟೆಕ್ಸ್

👉 2020 ರ ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು? 
- ಜಾವೇದ್ ಅಖ್ತರ್

👉 ಭಾರತೀಯರನ್ನು ವಿದೇಶದಿಂದ ವಾಪಸ್ ಕರೆತರಲು ನೌಕಾಪಡೆ ಪ್ರಾರಂಭಿಸಿದ ಕಾರ್ಯಾಚರಣೆಯ ಹೆಸರೇನು?
- ಸಮುದ್ರ ಸೇತು

👉 ಪ್ಲಾಸ್ಟಿಕ್ ಮುಕ್ತವಾಗಿರುವ ಮೊದಲ ಬಾಲಿವುಡ್ ಚಿತ್ರ? 
- ಕೂಲಿ ನಂ. 1

👉 ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಇಂಗ್ಲಿಷ್ ಭಾಷೆ ದಿನಪತ್ರಿಕೆ ಯಾವುದು?
- ದಿ ಟೈಮ್ಸ್ ಆಫ್ ಇಂಡಿಯಾ

👉 2019-20ರ ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ಯಾವ ದಿನಾಂಕದವರೆಗೆ ವಿಸ್ತರಿಸಲಾಗಿದೆ?
- ನವೆಂಬರ್ 30

👉 ಬಿಸಿಸಿಐ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಯಾರು?
- ರಾಹುಲ್ ಜೊಹ್ರಿ

👉 ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ?
- ಇಮ್ರಾನ್ ಖ್ವಾಜಾ

==================================
👉 ಜುಲೈ 11ರ ದಿನವನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ? 
- ವಿಶ್ವ ಜನಸಂಖ್ಯಾ ದಿನ
👉 ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಜಗದೀಪ್ ಯಾವ ಚಿತ್ರದ ಮೂಲಕ ಖ್ಯಾತಿ ಪಡೆದವರು?
- ಶೋಲೆ
👉 ಭಾರತೀಯ ರಿಸರ್ವ್ ಬ್ಯಾಂಕಿನ ಈಗಿನ ಗವರ್ನರ್ ಯಾರು?
- ಶಕ್ತಿಕಾಂತ್ ದಾಸ್
👉 ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿಭಾಯಿಸುತ್ತಿರುವ ಖಾತೆ ಯಾವುದು?
- ಸಂಸದೀಯ ವ್ಯವಹಾರ
👉 ಪ್ರಸಿದ್ದ ಹಾಜೀ ಆಲಿ ದರ್ಗಾ, ಭಾರತದ ಯಾವ ನಗರದಲ್ಲಿದೆ?
-ಮುಂಬೈ
👉 ಇಥಿಯೋಪಿಯಾ ದೇಶದ ರಾಜಧಾನಿ ಯಾವುದು?
- ಅಡಿಸ್ ಅಬಾಬಾ
☘☘
==================================
👉 2018ರ ಫೀಫಾ ವಿಶ್ವಕಪ್ ಫುಟ್ಬಾಲ್ ವಿಜೇತ ತಂಡ ಯಾವುದು?
- ಫ್ರಾನ್ಸ್
👉 ಕರ್ನಾಟಕದ ಡಿಜಿ, ಐಜಿಪಿ ಯಾರು?
- ಪ್ರವೀಣ್ ಸೂದ್
👉 ಕಳೆದ ವಿಶ್ವಕಪ್ ಕ್ರಿಕೆಟಿನ ರನ್ನರ್ ಅಪ್ ತಂಡ ಯಾವುದು?
- ನ್ಯೂಜಿಲ್ಯಾಂಡ್
👉 ದಕ್ಷಿಣ ಆಫ್ರಿಕಾದ ಕರೆನ್ಸಿ ಯಾವುದು?
- ರ‍್ಯಾಂಡ್
👉 ಶ್ರೀರಂಗಪಟ್ಟಣ ಒಪ್ಪಂದ ಟಿಪ್ಪು ಸುಲ್ತಾನ್ ಮತ್ತು ಯಾರ ನಡುವೆ ನಡೆಯಿತು?
- ಕಾರ್ನ್ ವಾಲೀಸ್
===============

No comments:

Post a Comment