Friday, September 4, 2020

Mini Notes

ಭಾರತದಲ್ಲಿ ಕಲ್ಲಿದ್ದಲಿನ ಒಟ್ಟು ನಿಕ್ಷೇಪಗಳಲ್ಲಿ 6 ರಾಜ್ಯಗಳಾದ ಜಾರ್ಖಂಡ್, ಓಡಿಸ್ಸ, ಛತ್ತಿಸ್ಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ತೆಲಂಗಾಣಗಳಲ್ಲಿ ಶೇಕಡ 96ರಷ್ಟು ಕಂಡುಬರುತ್ತದೆ. ಆದ್ದರಿಂದ ಈ 6 ರಾಜ್ಯಗಳ ವಲಯವನ್ನು "ಭಾರತದ ಸುವರ್ಣ ತಿಕೋನ" ಎನ್ನುವರು
=================================
"ಶ್ರೀರಾಮಾಯಣ ಮಹಾನ್ವೇಷಣಂ" ಕೃತಿ ಬರೆದವರು - ವೀರಪ್ಪ ಮೊಯ್ಲಿ
> "ಶ್ರೀರಾಮಾಯಣ ಮಹಾನ್ವೇಷಣಂ" ಕೃತಿಗೆ 2014 ರಲ್ಲಿ "ಸರಸ್ವತಿ ಸಮ್ಮನ್" ಪ್ರಶಸ್ತಿ ಲಭಿಸಿತ್ತು
==================================
> ಯುದ್ಧ ಕಾಲದ ಸಾಹಸ ಪ್ರಶಸ್ತಿಗಳು :- ಪರಮವೀರ ಚಕ್ರ, ಮಹಾವೀರ ಚಕ್ರ, ವೀರಚಕ್ರ
> ಶಾಂತಿ ಕಾಲದಲ್ಲಿ ನೀಡುವ ಮಿಲಿಟರಿ ಪ್ರಶಸ್ತಿಗಳು :- ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ
==================================
> ಬ್ಲೂಬುಕ್ :- ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
> ವೈಟ್ ಬುಕ್ :- ಚೀನಾ, ಜರ್ಮನಿ ಮತ್ತು ಪೋರ್ಚುಗಲ್ ನ ಅಧಿಕೃತ ಪ್ರಕಟಣೆ ಪುಸ್ತಕ
> ಹಳದಿ ಪುಸ್ತಕ :- ಫ್ರಾನ್ಸ್ ಸರ್ಕಾರದ ಅಧಿಕೃತ ಪ್ರಕಟಣೆ
> ಗ್ರೀನ್ ಬುಕ್ :- ಇಟಲಿ ಮತ್ತು ಇರಾನ್ ದೇಶಗಳ ಅಧಿಕೃತ ಪುಸ್ತಕ
> ಆರೆಂಜ್ ಬುಕ್ :- ನೆದರ್ಲ್ಯಾಂಡ್ ಸರ್ಕಾರದ ಅಧಿಕೃತ ಪುಸ್ತಕ
=================================
ಕರ್ನಾಟಕ ರತ್ನ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಮೊಟ್ಟಮೊದಲ ಸಾಹಿತಿ :-  "ರಾಷ್ಟ್ರಕವಿ ಕುವೆಂಪು".
> ಇವರ ಆತ್ಮಚರಿತ್ರೆ :- ನೆನಪಿನ ದೋಣಿಯಲ್ಲಿ
> ಪ್ರಮುಖ ಕಾದಂಬರಿಗಳು :- ಕಾನೂನು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು
==================================
> ನೆಫೊಲಜಿ ( Nephology)- ಎಂಬುದು ಹವಾಮಾನ ಶಾಸ್ತ್ರದ ವಿಭಾಗವಾಗಿದ್ದು, ಮೋಡಗಳ ಅಧ್ಯಯನವಾಗಿದೆ
> ನೆಫ್ರಾಲಜಿ ( Nephrology) ಎಂಬುದು ಮೂತ್ರಪಿಂಡಗಳ ಬಗ್ಗೆ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆಯಾಗಿದೆ
==================================
𝐐𝐮𝐞𝐬𝐭𝐢𝐨𝐧: -   ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ ಸಾಧನದಿಂದ ಅಳೆಯಲಾಗಿದೆ? 
𝐀𝐧𝐬𝐰𝐞𝐫: -    ರಿಟ್ರೋ ರಿಫ್ಲೆಕ್ಟರ್.
 𝐐𝐮𝐞𝐬𝐭𝐢𝐨𝐧: -   ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ?
 𝐀𝐧𝐬𝐰𝐞𝐫: -    ಭಾರತದ ರಾಷ್ಟ್ರಪತಿಗಳು. 
𝐐𝐮𝐞𝐬𝐭𝐢𝐨𝐧: -    ಇರಾಕಿನ ಹಳೆಯ ಹೆಸರೇನು? 𝐀𝐧𝐬𝐰𝐞𝐫: -    ಮೆಸಪಟೋಮಿಯಾ. 𝐐𝐮𝐞𝐬𝐭𝐢𝐨𝐧: -   ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ____ 𝐀𝐧𝐬𝐰𝐞𝐫: -    ಗಡಸು ನೀರು
 𝐐𝐮𝐞𝐬𝐭𝐢𝐨𝐧: -    ರಾಮಾಯಣದ ರಾಮನ ತಾಯಿಯ ಹೆಸರೇನು?
 𝐀𝐧𝐬𝐰𝐞𝐫: -    ಕೌಸಲ್ಯೆ 
𝐐𝐮𝐞𝐬𝐭𝐢𝐨𝐧: -   ಹಳೆಶಿಲಾಯುಗದ ಜನರು ಮೊದಲು ಸಾಕಿದ್ದು ಯಾವ ಪ್ರಾಣಿಯನ್ನು?
 𝐀𝐧𝐬𝐰𝐞𝐫: -    ನಾಯಿ 
𝐐𝐮𝐞𝐬𝐭𝐢𝐨𝐧: -   ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
 𝐀𝐧𝐬𝐰𝐞𝐫: -    ಫಾರ್ಮಲ್ಡಿಹೈಡ. 
𝐐𝐮𝐞𝐬𝐭𝐢𝐨𝐧: -   ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ? 𝐀𝐧𝐬𝐰𝐞𝐫: -    ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು. 
ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ? - ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ. 
ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು? - ಶಾಖೋತ್ಪನ್ನ ವಿದ್ಯುತ
==================================
▪️'SPUTNIK' ಮಾನವನು ಮೊಟ್ಟ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಕಳುಹಿಸಿದ ಸ್ಯಾಟಲೈಟ್. ಅ. 4, 1957 ರಂದು ರಷ್ಯಾ ದೇಶ ಈ ಸ್ಯಾಟಲೈಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಕಳುಹಿಸಿದ ಮೊದಲ ದೇಶ ಎಂಬ ಕೀರ್ತಿಗೆ ಪಾತ್ರವಾಯಿತು. ಬಾಸ್ಕೆಟ್ ಬಾಲ್ ನಷ್ಟು ಇದ್ದ ಈ ಸ್ಯಾಟಲೈಟ್ ಗಂಟೆಗೆ 29000 ಕಿಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿತ್ತು. 96 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಈ ಸ್ಯಾಟಲೈಟ್ ಬ್ಯಾಟರಿ ವೈಫಲ್ಯದಿಂದ ಭೂ-ಕಕ್ಷೆಗೆ ಬರುತ್ತಿದ್ದಂತೆ ಸ್ಪೋಟವಾಗಿತ್ತು
================================
☘ ಮಾನವ ಅಭಿವೃದ್ಧಿ ಸೂಚ್ಯಂಕ ಎಂದರೇನು? ಇದನ್ನು ಹೇಗೆ ಲೆಕ್ಕ ಹಾಕುತ್ತಾರೆ?
ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಬಿಡುಗಡೆ ಮಾಡುವುದು UNDP (United Nation's Development Programme)
ಇದರ ಹಿಂದಿನ ಆಶಯವೇನೆಂದರೆ ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಆರ್ಥಿಕತೆಯಿಂದ ನಿಶ್ಚಯಿಸಲು ಸಾಧ್ಯವಿಲ್ಲ. ಆ ದೇಶದ ಜನರ ಜೀವನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ದೇಶದ ಅಭಿವೃದ್ಧಿಯನ್ನು ಲೆಕ್ಕ ಹಾಕಬೇಕೆನ್ನುವುದು ಇದರ ಉದ್ದೇಶ
☘ ಇದಕ್ಕಾಗಿ ಮೂರು ಮಾನದಂಡಗಳನ್ನು ಆಯ್ಕೆ ಮಾಡಲಾಗಿದೆ
👉 ಆರೋಗ್ಯವಂತ ಜೀವನ ಜನಿಸಿದ ವ್ಯಕ್ತಿ ಸರಾಸರಿ ಎಷ್ಟು ವರ್ಷ ಬದುಕುತ್ತಾನೆ?
👉 ಜ್ಞಾನ
> ವ್ಯಕ್ತಿಯೊಬ್ಬ ಎಷ್ಟು ವರ್ಷ ಶಾಲೆಗೆ ಹೋಗುತ್ತಾನೆ?
> ಸರಾಸರಿ ಶಾಲೆಗೆ ಹೋಗುವ ವರ್ಷಗಳು ಎಷ್ಟು?
👉 ಜೀವನ ಮಟ್ಟ
> ರಾಷ್ಟ್ರದ ತಲಾ ಆದಾಯ
================
ಈ ಮೂರು ಮಾನದಂಡಗಳನ್ನು ಉಪಯೋಗಿಸಿ ಪ್ರತೀ ರಾಷ್ಟ್ರದ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಣಯಿಸಲಾಗುತ್ತದೆ

ಪ್ರತೀ ರಾಷ್ಟ್ರದ ಅಂಕಗಳು ಸೊನ್ನೆಯಿಂದ ಒಂದರ ಒಳಗೆ ಇರುತ್ತದೆ
==================================
👉 ಜುಲೈ 5, 2020 ರಂದು ಬುಬೊನಿಕ್ ಪ್ಲೇಗ್‌ನ ಶಂಕಿತ ಪ್ರಕರಣವನ್ನು ಯಾವ ದೇಶ ವರದಿ ಮಾಡಿದೆ?
- ಚೀನಾ
👉 ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾದವರು? 
- ಜೀನ್ ಕ್ಯಾಸ್ಟೆಕ್ಸ್
👉 2020 ರ ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು? 
- ಜಾವೇದ್ ಅಖ್ತರ್
👉 ಭಾರತೀಯರನ್ನು ವಿದೇಶದಿಂದ ವಾಪಸ್ ಕರೆತರಲು ನೌಕಾಪಡೆ ಪ್ರಾರಂಭಿಸಿದ ಕಾರ್ಯಾಚರಣೆಯ ಹೆಸರೇನು?
- ಸಮುದ್ರ ಸೇತು
👉 ಪ್ಲಾಸ್ಟಿಕ್ ಮುಕ್ತವಾಗಿರುವ ಮೊದಲ ಬಾಲಿವುಡ್ ಚಿತ್ರ? 
- ಕೂಲಿ ನಂ. 1
👉 ವಿಶ್ವದಲ್ಲೇ ಹೆಚ್ಚು ಮಾರಾಟವಾಗುವ ಇಂಗ್ಲಿಷ್ ಭಾಷೆ ದಿನಪತ್ರಿಕೆ ಯಾವುದು?
- ದಿ ಟೈಮ್ಸ್ ಆಫ್ ಇಂಡಿಯಾ
👉 2019-20ರ ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ಯಾವ ದಿನಾಂಕದವರೆಗೆ ವಿಸ್ತರಿಸಲಾಗಿದೆ?
- ನವೆಂಬರ್ 30
👉 ಬಿಸಿಸಿಐ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಯಾರು?
- ರಾಹುಲ್ ಜೊಹ್ರಿ
👉 ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ?
- ಇಮ್ರಾನ್ ಖ್ವಾಜಾ

No comments:

Post a Comment