Friday, September 4, 2020

Current Affairs

2022ರ ಫಿಫಾ ವಿಶ್ಕಕಪ್ ವೇಳಾಪಟ್ಟಿ ಬಿಡುಗಡೆ
2022 FIFA Wishka Cup Schedule Release
=============
> ಕತಾರ್‌ನಲ್ಲಿ 2022ರಲ್ಲಿ ಫಿಫಾ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಅದರಲ್ಲಿ ಪ್ರತಿದಿನ ನಾಲ್ಕು ಪಂದ್ಯಗಳನ್ನು ನಡೆಸಲು ಯೋಜಿಸಲಾಗಿದೆ.
> ಕೊಲ್ಲಿರಾಷ್ಟ್ರದಲ್ಲಿ ನಡೆಯಲಿರುವ ಮೊದಲ ಫಿಫಾ ವಿಶ್ವಕಪ್ ಟೂರ್ನಿ ಇದಾಗಲಿದೆ. ಅಲ್ ಬೈತ್ ಕ್ರೀಡಾಂಗಣದಲ್ಲಿ ನವೆಂಬರ್ 21 ರಂದು ಟೂರ್ನಿಯ ಉದ್ಘಾಟನೆಯಾಗಲಿದೆ. ಈ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ 60 ಸಾವಿರ ಜನರಿಗೆ ಅವಕಾಶವಿದೆ.
> 32 ರಾಷ್ಟ್ರಗಳ ತಂಡಗಳು ಸ್ಪರ್ಧಿಸುವ ಕೊನೆಯ ವಿಶ್ವಕಪ್ ಇದಾಗಲಿದೆ. 2026ರಿಂದ 48 ತಂಡಗಳು ಆಡಲಿವೆ. ಆ ವರ್ಷದ ಟೂರ್ನಿಯು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
> ಅಂತಿಮ ಪಂದ್ಯವನ್ನು ಡಿಸೆಂಬರ್ 18,2022 ರಂದು ನಡೆಸಲಾಗುವುದು,ಇದು ಕತಾರ್ ರಾಷ್ಟ್ರೀಯ ದಿನವೂ ಆಗಿದೆ.
=================
👉 FIFA World Cup
====================
> Founded :- 1930
> Number of teams :- 32 (tournament phase)
> Current champions :-  France (2nd title)
> Most successful team(s) :- Brazil (5 titles)
=========
> Hassan Al Thawadi - Chief Executive Officer - 2022 FIFA World Cup Qatar

♻️ "Note"
======
> ಜಗತ್ತಿನ ಅತ್ಯಂತ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್ ( 8,848 ಮೀಟರ್ ಎತ್ತರ) ನೇಪಾಳದಲ್ಲಿದೆ
> ಮೌಂಟ್ ಎವರೆಸ್ಟ್ ಅನ್ನು ಟಿಬೆಟಿಯನ್ ಭಾಷೆಯಲ್ಲಿ ಚೊಮೊಲುಂಗ್ಮ ( ದೇವಿಯ ಭೂಮಾತೆ ) ಎಂದು ಕರೆಯುತ್ತಾರೆ

♻️ "Note"
=====
ಭಾರತದಲ್ಲಿ ಕಲ್ಲಿದ್ದಲಿನ ಒಟ್ಟು ನಿಕ್ಷೇಪಗಳಲ್ಲಿ 6 ರಾಜ್ಯಗಳಾದ ಜಾರ್ಖಂಡ್, ಓಡಿಸ್ಸ, ಛತ್ತಿಸ್ಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ತೆಲಂಗಾಣಗಳಲ್ಲಿ ಶೇಕಡ 96ರಷ್ಟು ಕಂಡುಬರುತ್ತದೆ. ಆದ್ದರಿಂದ ಈ 6 ರಾಜ್ಯಗಳ ವಲಯವನ್ನು "ಭಾರತದ ಸುವರ್ಣ ತಿಕೋನ" ಎನ್ನುವರು

♻️ "Note"
======
> ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ರಾಜ್ಯ - 'ಜಾರ್ಖಂಡ್'
> ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಗಣಿ - 'ಝರಿಯಾ' ( ಜಾರ್ಖಂಡ್)
> ಭಾರತದಲ್ಲಿ ಮೊದಲ ಕಲ್ಲಿದ್ದಲು ಉತ್ಪಾದನೆ ಆರಂಭವಾದ ಸ್ಥಳ - ರಾಣಿಗಂಜ್ ( ಪಶ್ಚಿಮ ಬಂಗಾಳ )

♻️ "Note"
=====
> 2014 ರ ಮಾರ್ಚ್ 27ರಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು "ಪೋಲಿಯೋ ಮುಕ್ತ ರಾಷ್ಟ್ರ"ವೆಂದು ಘೋಷಣೆ ಮಾಡಿತ್ತು
> 2025 ರ ವೇಳೆಗೆ ಭಾರತವನ್ನು "ಕ್ಷಯರೋಗ ಮುಕ್ತ" ದೇಶವನ್ನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ

♻️ "Note"
=======
"ಶ್ರೀರಾಮಾಯಣ ಮಹಾನ್ವೇಷಣಂ" ಕೃತಿ ಬರೆದವರು - ವೀರಪ್ಪ ಮೊಯ್ಲಿ
> "ಶ್ರೀರಾಮಾಯಣ ಮಹಾನ್ವೇಷಣಂ" ಕೃತಿಗೆ 2014 ರಲ್ಲಿ "ಸರಸ್ವತಿ ಸಮ್ಮನ್" ಪ್ರಶಸ್ತಿ ಲಭಿಸಿತ್ತು

♻️ "ನಿಮಗಿದು ತಿಳಿದಿರಲಿ"
       =============
🌷 ಐ ಎಂ ಎಫ್ ಹಾಗೂ ವಿಶ್ವ ಬ್ಯಾಂಕ್ ನಡುವಿನ ವ್ಯತ್ಯಾಸವೇನು?
=====================
ಜಾಗತಿಕ ಮಟ್ಟದ ಎರಡು ಹಣಕಾಸುಸಂಸ್ಥೆಗಳು - 'ವರ್ಲ್ಡ್ ಬ್ಯಾಂಕ್' ಮತ್ತು 'ಐ ಎಂ ಎಫ್'

ನಮಗೆಲ್ಲಾ ಗೊತ್ತಿರುವಂತೆ ಜಗತ್ತಿನಲ್ಲಿ ಎರಡು ದೊಡ್ಡ ಹಣಕಾಸು ಸಂಸ್ಥೆಗಳಿವೆ. ಒಂದು ವರ್ಲ್ಡ್ ಬ್ಯಾಂಕ್ ಎರಡು ಐ ಎಂ ಎಫ್ . ಇವೆರಡರ ನಡುವೆ ಜನರಿಗೆ ಬಳಷ್ಟು ಗೊಂದಲವಿದೆ. ನಾವು ಇವೆರಡನ್ನೂ ಒಂದೇ ಎನ್ನುವಷ್ಟು ಇದನ್ನ ಅದಲುಬದಲಾಗಿ ಬಳಸುತ್ತೇವೆ. ಆದರೆ ಇವೆರಡು ಬೇರೆ ಬೇರೆ ಸಂಸ್ಥೆಗಳು. ಜಾನ್ ಮಯ್ನಾರ್ಡ್ ಕೇನ್ಸ್ ಇವೆರಡು ಸಂಸ್ಥೆಗಳ ಸ್ಥಾಪಕ ಸದಸ್ಯ. ಇಪ್ಪತ್ತನೇ ಶತಮಾನ ಕಂಡ ಮಹಾನ್ ಆರ್ಥಿಕ ತಜ್ಞ. ಐ ಎಂ ಎಫ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕೂಡ ವರ್ಲ್ಡ್ ಬ್ಯಾಂಕ್ ಮತ್ತು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಸಂಸ್ಥೆಗಳ ನಡುವೆ ಗೊಂದಲ ಉಂಟಾಗಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಎನ್ನುವುದರ ಬದಲು ಇಂಟರ್ನ್ಯಾಷನಲ್ ಮಾನಿಟರಿ ಬ್ಯಾಂಕ್ ಎಂದು ಹೆಸರಿಸಿದ ಘಟನೆ ಚರಿತ್ರೆಯಲ್ಲಿ ದಾಖಲಾಗಿದೆ. ಹೀಗೆ ತಿಳಿದವರ ವರ್ಗದಲ್ಲೆ ಇಂತಹ ಆಭಾಸಗಳು ಉಂಟಾಗುತ್ತದೆ ಎನ್ನುವುದಾದರೆ ಇನ್ನು ಜನ ಸಮಾನ್ಯನ ಕಥೆಯೇನು? ಈ ರೀತಿಯ ಒಂದು ಗೊಂದಲ ಉಂಟಾಗಲು ಕಾರಣ ಈ ಎರಡು ಸಂಸ್ಥೆಗಳು ನಡೆಸುವ ಕಾರ್ಯಗಳು ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಇವುಗಳ ನಡುವಿನ ಅಂತರಕ್ಕಿಂತ ಇವುಗಳ ನಡುವಿನ ಸಾಮ್ಯತೆ ಹೆಚ್ಚಿದೆ. ಹೀಗಾಗಿ ಇವೆರಡು ಅಂಗ ಸಂಸ್ಥೆಗಳೇನೋ ಎನ್ನುವಷ್ಟು ಸಂಶಯ ಜನರ ಮನದಲ್ಲಿದೆ.
==============
🌷 ಮೊದಲಿಗೆ ವರ್ಲ್ಡ್ ಬ್ಯಾಂಕ್ 
ಬಗ್ಗೆ ಒಂದಷ್ಟು ಮಾಹಿತಿ :
================
ಇದು ಒಂದು ಇನ್ವೆಸ್ಟ್ಮೆಂಟ್ ಬ್ಯಾಂಕ್. ಅಂದರೆ ಠೇವಣಿದಾರರಿಂದ ಹಣ ಪಡೆದು ಬೇಕಾದವರಿಗೆ ಸಾಲ ನೀಡುವುದು ಇದರ ಮುಖ್ಯ ಕೆಲಸ. ಜಗತ್ತಿನ ೧೮೦ ದೇಶಗಳು ಇಲ್ಲಿ ಖಾತೆ ಹೊಂದಿದ್ದಾವೆ. ಯಾವ ದೇಶ ಬೇಕಾದರೂ ಇಲ್ಲಿ ತಮ್ಮ ಹಣವನ್ನ ಠೇವಣಿ ಇರಿಸಬಹುದು. ಹೀಗೆ ಸಂಗ್ರಹವಾದ ಹಣವನ್ನ ಇತರ ದೇಶಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲದ ರೂಪದಲ್ಲಿ ನೀಡಬಹುದು. ಮತ್ತು ಅವರಿಂದ ಅದಕ್ಕೆ ತಕ್ಕ ಬಡ್ಡಿಯನ್ನ ಸಹ ವಸೂಲಿ ಮಾಡಲಾಗುವುದು. ಗಮನಿಸಿ ನೋಡಿ ಇದು ಒಂದು ಸಾಮಾನ್ಯ ಬ್ಯಾಂಕಿನಂತೆ ಕಾರ್ಯ ನಿರ್ವಹಿಸುತ್ತದೆ. ವ್ಯತ್ಯಾಸವೆಂದರೆ ಇಲ್ಲಿ ಖಾತೆದಾರರು ಜನ ಸಾಮಾನ್ಯರ ಬದಲಿಗೆ ದೇಶಗಳು ಅಷ್ಟೇ. ಉಳಿದಂತೆ ಇಲ್ಲಿ ನಡೆಯುವ ವಹಿವಾಟು, ಕಾರ್ಯ ವೈಖರಿ ಎಲ್ಲಾ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಸಾಲ ಪಡೆಯುವರು ಕೂಡ ಜನ ಸಾಮಾನ್ಯರ ಬದಲಿಗೆ ಬೇರೆ ದೇಶಗಳು ಅಥವಾ ಅತ್ಯಂತ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಾಗಿರುತ್ತವೆ. ಇಲ್ಲಿ ಹಣ ಪಡೆಯುವರು ಮುಖ್ಯವಾಗಿ ಬಡ ಅಥವಾ ಮುಂದುವರಿಯುತ್ತಿರುವ ದೇಶಗಳು ಎಂದು ಹೇಳಬೇಕಾದ ಅವಶ್ಯಕತೆ ಇದೆಯೇ? ಅಂತೆಯೇ ಈ ಬ್ಯಾಂಕಿನ ಆಡಳಿತದಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾದ ಪಾರುಪತ್ಯ ಅತಿ ಹೆಚ್ಚು ಎನ್ನುವ ವಿಷಯ ಕೂಡ ಹೊಸದಾಗಿ ಹೇಳುವಂತಹುದಲ್ಲ.
===================
🌷 ಐ ಎಂ ಎಫ್ ಅಥವಾ ಇಂಟರ್ನಾಷನಲ್ ಮಾನಿಟರಿ ಫಂಡ್:
===================
ವರ್ಲ್ಡ್ ಬ್ಯಾಂಕ್ ಹೆಸರೇ ಹೇಳುವಂತೆ ಬ್ಯಾಂಕ್, ಅಲ್ಲಿ ನಡೆಯುವುದು ಬ್ಯಾಂಕಿಂಗ್. ಐ ಎಂ ಎಫ್ ಒಂದು ಸಹಕಾರಿ ಒಕ್ಕೂಟವಿದ್ದ ಹಾಗೆ! ಇಲ್ಲಿ ಜಗತ್ತಿನ ಸಕಲ ದೇಶಗಳೂ ತಮ್ಮ ಶಕ್ತಿಗನುಸಾರವಾಗಿ ಒಂದಷ್ಟು ಹಣವನ್ನ ಮೆಂಬರ್ ಶಿಪ್ ಹೆಸರಿನಲ್ಲಿ ಮತ್ತೊಂದಷ್ಟು ಹಣವನ್ನ ದೇಣಿಗೆ ರೂಪದಲ್ಲಿ ನೀಡುತ್ತವೆ. ಹೀಗೆ ಸಂಗ್ರಹವಾದ ಹಣವನ್ನ ಕಷ್ಟದಲ್ಲಿರುವ ದೇಶಕ್ಕೆ ನೀಡಲಾಗುತ್ತದೆ. ಇಲ್ಲಿ ಬಡ ಅಥವಾ ಶ್ರೀಮಂತ ದೇಶ ಎನ್ನುವ ಯಾವುದೇ ವ್ಯತ್ಯಾಸವಿಲ್ಲದೆ ಯಾವುದೇ ದೇಶ ಸಂಕಷ್ಟದಲ್ಲಿರಲಿ ಹಣವನ್ನ ಅವರಿಗೆ ಸಹಾಯವಾಗಿ ನೀಡಲಾಗುತ್ತದೆ. ಐ ಎಂ ಎಫ್ ನ ಪ್ರಮುಖ ಕಾರ್ಯಗಳನ್ನ ಹೀಗೆ ಪಟ್ಟಿ ಮಾಡಬಹುದು:
=================
೧) ಜಗತ್ತಿನ ಯಾವುದೇ ದೇಶವಿರಲಿ ಅವರ ತಕ್ಷಣದ ಆರ್ಥಿಕ ಸಂಕಷ್ಟಕ್ಕೆ ನೆರವಾಗುವುದು.
೨) ದೇಶ ದೇಶಗಳ ನಡುವೆ ಇರುವ ಅಂತರ ಕಡಿಮೆ ಮಾಡಲು ಶ್ರಮಿಸುವುದು, ಆಮೂಲಾಗ್ರವಾಗಿ ಜಗತ್ತಿನ ಬಡತನ ಹೋಗಲಾಡಿಸುವುದು.
೩) ದೇಶ ದೇಶಗಳ ನಡುವೆ ವಿನಿಮಯ ದರ ಹೆಚ್ಚು ಏರುಪೇರಾದಾಗ ಮಧ್ಯ ಪ್ರವೇಶಿಸಿ ಸಮತೋಲನ ಕಾಪಾಡುವುದು .
೪) ಜಗತ್ತಿನ ಆರ್ಥಿಕತೆ ಜಾರದಂತೆ ಅದನ್ನ ಕಣ್ಣಿಟ್ಟು ಕಾಯುವುದು
=============
👉 ಹೆಚ್ಚು ಕಡಿಮೆ ಎರಡು ಸಂಸ್ಥೆಗಳ ಉದ್ದೇಶ ಸೇಮ್ ಆದರೂ ಐ ಎಂ ಎಫ್ ಸಹಕಾರಿ ಅಥವಾ ಸೇವಾ ಭಾವಕ್ಕೆ ಹೆಚ್ಚು ಒತ್ತು ನೀಡುತ್ತದೆ. ಹೀಗಾಗಿ ವರ್ಲ್ಡ್ ಬ್ಯಾಂಕಿಗಿಂತ ಭಿನ್ನ ಎಂದು ಹೇಳಬಹುದು.
================
🌸  ವಿಶ್ವ ಬ್ಯಾಂಕ್ / World Bank
=================
> Formation :- July 1944
> Headquarters :- Washington, D.C., U.S
> Membership :-
* 189 countries (IBRD)
* 173 countries (IDA)
> President :- David Malpass
> Anshula Kant :- 
(MD and CFO)
==≠=========
🌸 ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ / International Monetary Fund
========================
> Formation :- 27 December 1945
> Headquarters :- Washington, D.C. U.S.
> Membership :- 189 countries
> Managing Director :- Kristalina Georgieva
> Chief Economist :- Gita Gopinath

🔆🔆🔆🔆🔆🔆🔆🔆🔆🔆🔆

👆👆👆👆👆👆👆👆👆👆👆👆
👉 Anji Khad bridge: India’s 1st cable-stayed rail bridge by Indian Railways to connect Katra and Reasi in J&K
=========================
👉 About Konkan Railway Corporation Limited (KRCL):
================
> Chairman & Managing Director (CMD)–  Sanjay Gupta
> Headquarter– Navi Mumbai, Maharashtra
=======

👆👆👆👆👆👆👆👆👆👆👆👆
🌷 Tata’s N Chandrasekaran and Lockheed Martin’s Jim Taiclet Receives USIBC Global Leadership Award 2020
====================
♻️ About USIBC Global Leadership Award
=================
The USIBC Global Leadership Award has been presented annually since 2007.
========
♻️ About USIBC:
===========
> Headquarters- Washington, D.C., United States
> President– Nisha Biswal
> Managing Director for India– Ambika Sharma
===================

No comments:

Post a Comment