Monday, September 21, 2020

ಪ್ರಚಲಿತ ಘಟನೆಗಳು

ಯುದ್ಧನೌಕೆಗೆ ಮಹಿಳೆಯರ ನಿಯೋಜನೆ: ನೌಕಾಪಡೆಯಿಂದ ಐತಿಹಾಸಿಕ ಕ್ರಮ
======================
ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್‌ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳು ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದರೂ, ಯುದ್ಧನೌಕೆಯಲ್ಲಿ ಕಾರ್ಯಾಚರಣೆ ಕರ್ತವ್ಯಕ್ಕೆ ಮಹಿಳೆಯರನ್ನು ನಿಯೋಜಿಸುತ್ತಿರುವುದು ಇದೇ ಮೊದಲು.
===========
ಯುದ್ಧನೌಕೆಯಲ್ಲಿರುವ ಹಲವು ಸೆನ್ಸಾರ್‌ಗಳ ಬಳಕೆ ಬಗ್ಗೆ ಇವರಿಬ್ಬರೂ ತರಬೇತಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನೌಕಾಪಡೆಯ ಭಾಗವಾಗಲಿರುವ ಅತ್ಯಾಧುನಿಕ ಎಂಎಚ್-60 ಆರ್‌ ಹೆಲಿಕಾಪ್ಟರ್‌ಗಳನ್ನೂ ಈ ಮಹಿಳಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಕ್ಷಿಪಣಿ ಮತ್ತು ಟಾರ್ಪೆಡೊಗಳ ಮೂಲಕ ಶತ್ರುದೇಶದ ಯುದ್ಧನೌಕೆ, ಜಲಾಂತರ್ಗಾಮಿಗಳನ್ನೂ ನಾಶಪಡಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್‌ಗೆ ಇದೆ.

No comments:

Post a Comment