Wednesday, September 23, 2020

ನಮ್ಮ ಮೆದುಳಿನ ಬಗ್ಗೆ ಸ್ವಲ್ಪ ಮಾಹಿತಿ

ಮಿದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣ ಭಾಗ. ಮಾನವನ ಮೆದುಳಿನ ಹೊರ ನೋಟದಲ್ಲಿ ಮೂರು ನಿರ್ದಿಷ್ಟ ಭಾಗಗಳನ್ನು ಕಾಣಬಹುದು. ಅವು

1)ಮುಮ್ಮೆದುಳು

2) ಮಧ್ಯ ಮೆದುಳು

3) ಹಿಮ್ಮೆದುಳು

*ಮಿದುಳಿನ ಹೊರನೋಟದ ಭಾಗಗಳು :-*

1) *ಮುಮ್ಮೆದುಳು (fore brain) :-*

ಮುಮ್ಮೆದುಳು ಮಿದುಳಿನ ಅತಿ ಸಂಕೀರ್ಣ ಭಾಗ. ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್‌ಸೆಫೆಲಾನ್ ಎಂಬ ಎರಡು ಪ್ರಮುಖ ಭಾಗಗಳಿವೆ.

a) *ಮಹಾಮಸ್ತಿಷ್ಕ (cerebrum) :-*

# ಮಿದುಳಿನ ಅತ್ಯಂತ ದೊಡ್ಡ ಭಾಗ. ಇದು ಹೆಚ್ಚು ಅಭಿವೃದ್ಧಿ ಹೊಂದಿದೆ.

# ಮೆದುಳಿನ ಒಟ್ಟು ತೂಕದ ಸುಮಾರು ಶೇ.80 ರಷ್ಟು ತೂಕ ಇದರದು. 

# ಇದರ ಮೇಲ್ಮೈಯು ವಕ್ರವಾಗಿ ಅನೇಕ ಮಡಿಕೆಗಳಿಂದ ಕೂಡಿದೆ.

# ಮಹಾಮಸ್ತಿಷ್ಕದಲ್ಲಿ ಎರಡು ಅರ್ಧ ಸಮಗೋಳಗಳಿವೆ, - ಅವು ಬಲ ಗೋಳಾರ್ಧ ಮತ್ತು ಎಡ ಗೋಳಾರ್ಧ. 

# ಎರಡು ಗೋಳಾರ್ಧಗಳು ಒಂದು ಎಳೆಯಿಂದ ಬೇರ್ಪಟ್ಟಿದ್ದರೂ, ಒಳಗೆ ಒಂದಕ್ಕೊಂದು *"ಕಾರ್ಪಸ್ ಕಲೋಸಮ್"* ಎಂಬ ನರಗಳ ಎಳೆಯಿಂದ ಸೇರ್ಪಡೆಯಾಗಿದೆ.

# ದೇಹದ ಎಡಭಾಗದಿಂದ ಬರುವ ನರಗಳು ಮಹಾಮಸ್ತಿಷ್ಕದ ಬಲಗೋಳಾರ್ಧಕ್ಕೆ ಸಂಪರ್ಕ ಹೊಂದಿವೆ.

# ದೇಹದ ಬಲ ಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡಗೋಳಾರರ್ಧಕ್ಕೆ ಸಂಪರ್ಕಗೊಂಡಿವೆ.

# ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್ (ನರಕೋಶಗಳಿಂದ ಕೂಡಿದ ಬೂದು ಬಣ್ಣದ ವಸ್ತುವಿನಿಂದಾಗಿದೆ)

# ಮಹಾಮಸ್ತಿಷ್ಕದ ಒಳಗಿನ ಮೆಡುಲ್ಲಾ ಭಾಗವು (ಆಕ್ಸಾನ್ ಮತ್ತು ಡೆಂಡ್ರೈಟ್ ಗಳು ಸೇರಿದ ಬಿಳಿಯ ವಸ್ತುವಿನಿಂದಾಗಿದೆ)

# ಮಾನವನ ಉನ್ನತವಾದ ಬುದ್ದಿವಂತಿಕೆಗೆ, ಹೆಚ್ಚಿನ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್ ನ ವಿಸ್ತೃತ ಬೆಳವಣಿಗೆಯೇ ಕಾರಣ.

 

b) *ಡೈಎನ್‌ಸೆಫೆಲಾನ್ :-*

# ಡೈಎನ್‌ಸೆಫೆಲಾನ್ ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಚಿಕ್ಕ ಭಾಗ. 

# ಡೈಎನ್‌ಸೆಫೆಲಾನ್ ನಲ್ಲಿ "ಥಲಾಮಸ್ ಮತ್ತು ಹೈಪೋಥಲಾಮಸ್ ಎಂಬ ಎರಡು ಭಾಗಗಳಿವೆ.

# *ಥಲಾಮಸ್ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್ ಗೆ ಕಳುಹಿಸುತ್ತದೆ.*

# *ಹೈಪೋಥಲಾಮಸ್ ದೇಹದ ಉಷ್ಣತೆ, ದೇಹದ ಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಿಸುತ್ತದೆ.*

 

2) *ಮಧ್ಯ ಮಿದುಳು (Mid brain) :-*

# ನರತಂತುಗಳಿಂದ ಕೂಡಿದ ಮಿದುಳಿನ ಒಂದು ಚಿಕ್ಕ ಭಾಗ.

# ಮಧ್ಯಮಿದುಳು ಮುಮ್ಮೆದಳು ಮತ್ತು ಹಿಮ್ಮೆದುಳಿಗೆ ಸಂಬಂಧ ಕಲ್ಪಿಸುತ್ತದೆ. ಜೊತೆಗೆ ಸಂದೇಶಗಳನ್ನು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಾಗಿಸುತ್ತದೆ.

# ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತ ಚಲನೆಗಳಿಗೆ ಇದು ಕಾರಣ.

 

3) *ಹಿಮ್ಮೆದುಳು (Hind brain) :-*

# ಹಿಮ್ಮೆದುಳಲ್ಲಿ ಅನುಮಸ್ತಿಷ್ಕ, ಪಾನ್ಸ್ ಮತ್ತು ಮೆಡುಲ್ಲಾ ಅಬ್ಲಾಂಗೇಟ್ ಎಂಬ ಮೂರು ಭಾಗಗಳಿವೆ.

 

a) *ಅನುಮಸ್ತಿಷ್ಕ (Cerebellum) :-*

# ಅನುಮಸ್ತಿಷ್ಕ ಮೆದುಳಿನ ಎರಡನೇ ದೊಡ್ಡ ಭಾಗ.

# ಅನುಮಸ್ತಿಷ್ಕ ಮಹಾಮಸ್ತಿಷ್ಕದ ಕೆಳಗೆ ಮತ್ತು ಹಿಂಭಾಗದಲ್ಲಿದೆ. ಮತ್ತು ದೇಹದ ಸಮತೋಲನವನ್ನು ಕಾಪಾಡುತ್ತದೆ.

 

b) *ಪಾನ್ಸ್ (Pons) :-*

# ಪಾನ್ಸ್ ಅನುಮಸ್ತಿಷ್ಕದ ಮುಂದೆ ಮಧ್ಯಮಿದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಾಂಗೇಟದ ಮೇಲೆ ಇದೆ.

# ಪಾನ್ಸ್ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. 

 

c) *ಮೆಡುಲ್ಲಾ ಅಬ್ಲಾಂಗೇಟ್ (Medulla oblongata) :-*

# ಮೆಡುಲ್ಲಾ ಅಬ್ಲಾಂಗೇಟ್ ಮೆದುಳಿನ ಅತಿ ಹಿಂದಿನ ಭಾಗವಾಗಿದ್ದು ,ಮುಂಡದ ಭಾಗದಲ್ಲಿ ಮಿದುಳು ಬಳ್ಳಿಯಾಗಿ ಮುಂದುವರಿಯುತ್ತದೆ. 

# ದೇಹದ ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ, ಹೃದಯ ಬಡಿತ, ಜೀರ್ಣನಾಳದ ಚಲನೆಗಳನ್ನು ನಿಯಂತ್ರಿಸುತ್ತದೆ ಜೊತೆಗೆ ಸ್ರವಿಕೆ ಮತ್ತು ರಕ್ತದ ಒತ್ತಡದ ನಿಯಂತ್ರಣ ಮುಂತಾದ ಕ್ರಿಯೆಗಳನ್ನು ಸಂಬಂಧಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

 

ನೆನಪಿರಲಿ :-

# ವಯಸ್ಕ ಮಾನವನ ಮಿದುಳಿನ ಸರಾಸರಿ ತೂಕ ಸುಮಾರು 1200 ರಿಂದ 1400ಗ್ರಾಂಗಳು.

# ಮಾನವನ ಮಿದುಳು ಆತನ ದೇಹದ ತೂಕದ ಶೇ.1.9ರಷ್ಟು ಇರುತ್ತದೆ.

No comments:

Post a Comment