Wednesday, September 23, 2020

ಜೈವಿಕ ಸಂರಕ್ಷಣಾ ಪ್ರದೇಶಗಳು

ಜೈವಿಕ ಸಂರಕ್ಷಣಾ ಪ್ರದೇಶಗಳು ಪ್ರತಿಯೊಂದು ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಅವುಗಳಿರುವ ನೈಸರ್ಗಿಕ ಪ್ರದೇಶಗಳಲ್ಲೇ ರಕ್ಷಣೆ ನೀಡುತ್ತದೆ. 
* ಇದರಿಂದ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬಹುದು. 
* ಈ ಜೈವಿಕ ಸಂರಕ್ಷಣಾ ಪ್ರದೇಶಗಳ ಸುತ್ತಲಿನ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳಿಗೆ ಮತ್ತು ಅರಣ್ಯ ಉತ್ಪನ್ನಗಳಿಗಾಗಿ ಅರಣ್ಯಗಳನ್ನು ಬೆಳೆಸಲಾಗುತ್ತದೆ. 

★ ಜೀವ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಯೋಗ್ಯ ಬಳಕೆಯಲ್ಲಿ , ನಿರ್ವಹಣೆಯ ಮೂಲಕ ಆಂತರಿಕ ಹೊಂದಾಣಿಕೆಯನ್ನು ಹೆಚ್ಚಿಸುವುದು , ಸಂಶೋಧನೆ ಮತ್ತು ಶಿಕ್ಷಣ ನೀಡಲು ಯುನೆಸ್ಕೊ 1971 ರಲ್ಲಿ ಮಾನವ ಮತ್ತು ಜೈವಿಕ ಸಂರಕ್ಷಣಾ ಕಾರ್ಯಕ್ರಮಗಳನ್ನು ( MAB ) ಪ್ರಾರಂಭಿಸಿತು. 

★ ಭಾರತ ಸರ್ಕಾರವು 18 ಜೈವಿಕ ಸಂರಕ್ಷಣಾವಲಯಗಳನ್ನು ಸ್ಥಾಪಿಸಿದೆ. ಇವು ವಿಶಾಲವಾದ ಪ್ರದೇಶವನ್ನು ( ರಾಷ್ಟ್ರೀಯ ಉದ್ಯಾನವನಗಳು ಅಥವಾ ವನ್ಯಜೀವಿಧಾಮಗಳು ) ಸಂರಕ್ಷಿಸುತ್ತವೆ ಮತ್ತು ಇವು ಒಂದು ಅಥವಾ ಒಂದಕ್ಕಿಂತ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳ ಜೊತೆಗೆ ಮಧ್ಯವರ್ತಿ ವಲಯಗಳನ್ನು ( Buffer Zones ) ಒಳಗೊಂಡಿದ್ದು , ಕೆಲವು ಆರ್ಥಿಕ ಬಳಕೆಗೆ ಉಪಯುಕ್ತವಾಗಿವೆ. 
* ಇವು ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಮಾತ್ರ ಸಂರಕ್ಷಿಸುವ ಪ್ರದೇಶಗಳಾಗಿರದೆ , ಅಂತಹ ಪ್ರದೇಶಗಳಲ್ಲಿರುವ ಮಾನವ ಸಮುದಾಯಗಳು ಮತ್ತು ಜೀವನದ ರೀತಿಯನ್ನು ಸಹ ರಕ್ಷಿಸುವುವು. 

★ ಯುನೆಸ್ಕೋ ಮಾನವ ಮತ್ತು ಜೈವಿಕ ಸಂರಕ್ಷಣಾ ( MAB ) ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ ಭಾರತದ 18 ರಲ್ಲಿ 8 ಜೈವಿಕ ಸಂರಕ್ಷಣಾ ವಲಯಗಳು , ಪ್ರಪಂಚದ ಜೈವಿಕ ಸಂರಕ್ಷಣಾವಲಯ ಜಾಲಗಳ ಭಾಗಗಳಾಗಿವೆ. 
ಅವುಗಳೆಂದರೆ :- 

1.ನೀಲಗಿರಿ ಜೈವಿಕ ಸಂರಕ್ಷಣಾವಲಯ - ತಮಿಳುನಾಡ, ಕೇರಳ, ಕರ್ನಾಟಕ - 2000  
2.ಮನ್ನಾರ ಖಾರಿ ಜೈವಿಕ ಸಂರಕ್ಷಣಾವಲಯ - ತಮಿಳುನಾಡು - 2001 
3.ಸುಂದರಬನ ಜೈವಿಕ ಸಂರಕ್ಷಣಾವಲಯ - ಪಶ್ಚಿಮ ಬಂಗಾಳ - 2001 
4.ನಂದಾದೇವಿ ಜೈವಿಕ ಸಂರಕ್ಷಣಾವಲಯ - ಉತ್ತರಖಂಡ - 2004 
5.ನೊಕ್ರೆಕ್ ಜೈವಿಕ ಸಂರಕ್ಷಣಾವಲಯ - ಮೇಘಾಲಯ - 2009 
6.ಪಚಮಾರಿ ಜೈವಿಕ ಸಂರಕ್ಷಣಾವಲಯ - ಮಧ್ಯಪ್ರದೇಶ - 2009
7.ಸಿಂಪ್ಲಿಪಾಲ ಜೈವಿಕ ಸಂರಕ್ಷಣಾವಲಯ - ಓಡಿಶಾ - 2008 
8 .ಅಚಾನ್‌ಕಾರ್ ಅಮರಕಂಟಕ ಜೈವಿಕ ಸಂರಕ್ಷಣಾವಲಯ - ಛತ್ತಿಸ್‌ಗಡ್ , ಝಾರ್ಖಂಡ - 2012 

★ ದೇಶದ ಇತರೆ ಜೈವಿಕ ಸಂರಕ್ಷಣಾ ವಲಯಗಳೆಂದರೆ :- 

* ರಾಣಾ ಆಫ್ ಕಚ್ ( ಗುಜರಾತ್ ) , 
* ಶೀತ ಮರುಭೂಮಿ ( ಕೋಲ್ಡ ಡೆಸರ್ಟ್ ) ( ಹಿಮಾಚಲಪ್ರದೇಶ ) , 
* ದಿಹಾಂಗ್ - ದಿಬಾಂಗ್ ( ಅರುಣಾಚಲ ಪ್ರದೇಶ ) , 
* ಶೇಷಾಚಲಂ ಬೆಟ್ಟಗಳು ( ಆಂಧ್ರಪ್ರದೇಶ ) , 
* ಮಾನಸ್ ( ಅಸ್ಸಾಂ ) , 
* ಕಾಂಚನಜುಂಗಾ ( ಸಿಕ್ಕಿಂ ) , 
* ಅಗಸ್ಯಮಲೈ ( ಕೇರಳ ) , 
* ಗ್ರೇಟ್ ನಿಕೋಬಾರ ( ಅಂಡಮಾನ ಮತ್ತು ನಿಕೋಬಾರ ದ್ವೀಪಗಳು ) , 
* ದಿಬ್ರು - ಸೈಬೋವಾ ( ಅಸ್ಸಾಂ ) ಮತ್ತು 
* ಪನ್ನಾ ( ಮಧ್ಯಪ್ರದೇಶ ).

No comments:

Post a Comment