Wednesday, August 19, 2020

ಪ್ರಚಲಿತ ಘಟನೆಗಳು

ದೇಶದಲ್ಲಿ ಈ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಅಂದಾಜು 13.9 ಲಕ್ಷ ಹಾಗೂ 2025ಕ್ಕೆ ಪ್ರಕರಣಗಳ ಸಂಖ್ಯೆ 15.7 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ಐಸಿಎಂಆರ್‌ ವರದಿ ಮೂಲಕ ತಿಳಿದು ಬಂದಿದೆ.

ಬೆಂಗಳೂರು ಮೂಲದ ರಾಷ್ಟ್ರೀಯ ರೋಗ ಸೂಚನಾ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎನ್‌ಸಿಡಿಐಆರ್‌) ಮತ್ತು ಐಸಿಎಂಆರ್‌ ಕ್ಯಾನ್ಸರ್‌ ಪ್ರಕರಣಗಳ ಅಂದಾಜು ನಡೆಸಿದೆ

> 2.12 ಮೀಟರ್‌: ಗಂಡು ಡಾಲ್ಫಿನ್‌ಗಳ ಅಂದಾಜು ಉದ್ದ
> 2.67 ಮೀಟರ್: ಹೆಣ್ಣು ಡಾಲ್ಫಿನ್‌ಗಳ ಅಂದಾಜು ಉದ್ದ

ಗಂಗಾನದಿಯಲ್ಲಿ ಡಾಲ್ಫಿನ್‌ಗಳು ಇರುವುದನ್ನು 1801ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಈ ಜಾತಿಯ ಡಾಲ್ಫಿನ್‌ಗಳು ಸಿಹಿ ನೀರಿನಲ್ಲಿ ಮಾತ್ರ ನೆಲೆಸುತ್ತವೆ
=========
👉 ಅಯೋಧ್ಯೆಯ ಅಖಂಡ ಜ್ಯೋತಿಗೆ ಕರ್ನಾಟಕದ ಕೆಎಂಎಫ್‌ ತುಪ್ಪ
==============
ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಅಖಂಡ ಜ್ಯೋತಿಗೆ ಕರ್ನಾಟಕದ ನಂದಿನಿ ತುಪ್ಪ ನೀಡಲಾಗುತ್ತಿರುವುದಾಗಿ ಕೆಎಂಎಫ್‌ ಮಾಹಿತಿ ನೀಡಿದೆ

ರಾಮ ಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ಅಯೋಧ್ಯೆಗೆ 1.5 ಲಕ್ಷ ಲಡ್ಡು ತಯಾರಿಕೆಗೂ ಕೆಎಂಎಫ್‌ನ ತುಪ್ಪ ಬಳಸಲಾಗಿತ್ತು. ಇದೀಗ ಅಖಂಡ ಜ್ಯೋತಿಗೆ ತುಪ್ಪ ನೀಡುವ ಮೂಲಕ ಮತ್ತೊಮ್ಮೆ ರಾಜ್ಯ ಹೆಮ್ಮೆ ಪಡುವಂತಾಗಿದೆ.
======
👉 ಗಲಭೆಕೋರರಿಂದಲೇ ನಷ್ಟ ಭರಿಸಲು ಎರಡು ನ್ಯಾಯಮಂಡಳಿ ಸ್ಥಾಪಿಸಿದ ಯೋಗಿ ಸರ್ಕಾರ
================
ಪ್ರತಿಭಟನೆ ಮತ್ತು ಗಲಭೆಗಳನ್ನು ನಡೆಸುವ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವ ಘಟನೆಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎರಡು ನ್ಯಾಯಮಂಡಳಿಗಳನ್ನು ಸ್ಥಾಪನೆ ಮಾಡಿದೆ. ಒಂದು ಲಕ್ನೋದಲ್ಲಿ ಮತ್ತು ಇನ್ನೊಂದು ಮೀರತ್‌ನಲ್ಲಿ ನ್ಯಾಯಮಂಡಳಿ ಸ್ಥಾಪನೆಯಾಗಿದೆ.
======
ಈ ವರ್ಷದ ಮಾರ್ಚ್ ತಿಂಗಳಲ್ಲಿ ಯೋಗಿ ಸರ್ಕಾರವು ‘ಉತ್ತರಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಷ್ಟ ವಸೂಲಿ ಸುಗ್ರೀವಾಜ್ಞೆ 2020’ ಅನ್ನು ಜಾರಿಗೊಳಿಸಿದೆ
==========

No comments:

Post a Comment