Friday, August 14, 2020

ಅಮೋನಿಯಂ ನೈಟ್ರೇಟ್‌

"ಪ್ರಚಲಿತ"
=======
👉 ಅಮೋನಿಯಂ ನೈಟ್ರೇಟ್‌ನಿಂದ ಭೀಕರ ಸ್ಪೋಟ ಸಂಭವಿಸುತ್ತಾ? ಬೈರೂತ್‌ ಬ್ಲಾಸ್ಟ್‌ ಸುತ್ತಾ ಒಂದು ನೋಟ!
==================
ಅಮೋನಿಯಂ ನೈಟ್ರೇಡ್‌ ಬ್ಲಾಸ್ಟ್‌!
=================
ಅಮೋನಿಯಂ ನೈಟ್ರೇಟ್ ಬಿಳಿ ಸ್ಫಟಿಕದ ಉಪ್ಪಾಗಿದೆ . ಇದನ್ನು ಅಮೋನಿಯಾ ಮತ್ತು ನೈಟ್ರಿಕ್ ಆಮ್ಲದಿಂದ ಅಗ್ಗವಾಗಿ ಉತ್ಪಾದಿಸಬಹುದಾಗಿದೆ ಇದನ್ನ ಬಾಂಬ್‌ ತಯಾರಿಕೆ ಹಾಗೂ ಗೊಬ್ಬರಕ್ಕೆ ಬಳಸಲಾಗುತ್ತದೆ  ಆರೋಗ್ಯಕರ ಸಸ್ಯ ಅಭಿವೃದ್ಧಿಗೆ ಸಾರಜನಕ ಅಗತ್ಯವಾಗಿರುವುದರಿಂದ ಇದನ್ನ ಉಪಯೋಗಿಸಲಾಗುತ್ತದೆ.
==================
ಅಮೋನಿಯಂ ನೈಟ್ರೇಟ್ ಅದರ ನೈಜ ರೂಪದಲ್ಲಿ ಅಪಾಯಕಾರಿ ಅಲ್ಲ. ಆದರೆ ಇದು ಶಾಖ ಸೂಕ್ಷ್ಮವಾಗಿರುವುದರಿಂದ ಹವಾಮಾನ ಬದಲಾದರೆ ಡೇಂಜರಸ್‌ ಎನ್ನುತ್ತಾರೆ ಪರಿಣಿತರು. 32.2 ಡಿಗ್ರಿ ಸೆಲ್ಸಿಯಸ್ ನಲ್ಲಿ ಅಮೋನಿಯಂ ನೈಟ್ರೇಟ್ ಅದರ ಪರಮಾಣು ರಚನೆಯನ್ನು ಬದಲಾಯಿಸುತ್ತದೆ. ಇದರಿಂದಾಗಿ ಅದರ ರಾಸಾಯನಿಕ ಗುಣಲಕ್ಷಣಗಳು ಬದಲಾಗುತ್ತದೆ.
==========
ದೊಡ್ಡ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿದಾಗ, ಶಾಖವು ಉತ್ಪತ್ತಿಯಾಗುತ್ತದೆ.  ಪ್ರಮಾಣವು ಸಾಕಷ್ಟು ವಿಸ್ತಾರವಾಗಿದ್ದರೆ, ಅದರ ರಾಸಾಯನಿಕದಿಂದ ಬೆಂಕಿ ಆರಂಭವಾಗಲು ಕಾರಣವಾಗಬಹುದು ಎಂದು ಪರಿಣಿತರು ಹೇಳಿದ್ದಾರೆ. ಇನ್ನು ಇದು 170 ಸೆಲ್ಸಿಯಸ್‌ ತಾಪಮಾನವನ್ನು ತಲುಪಿದ ನಂತರ, ಅಮೋನಿಯಂ ನೈಟ್ರೇಟ್ ಒಡೆಯಲು ಆರಂಭವಾಗುತ್ತದೆ, ನೈಟ್ರಸ್ ಆಕ್ಸೈಡ್ ಅನ್ನು ಹೊರಸೂಸುತ್ತದೆ.
====
ಹೀಗೆ ನೈಟ್ರಸ್‌ ಆಕ್ಸೈಡ್‌ ಹೊರ ಸೂಸಿದಾಗ ಸಾರಜನಕ ಮತ್ತು ಆಮ್ಲಜನಕಗಳು ವಿಭಜನೆಯಾಗಗುವ ಮೂಲಕ ಭಾರೀ ಪ್ರಮಾಣದ ಸ್ಫೋಟವಾಗಬಹುದು
======
ಬೈರೂತ್‌ ನಲ್ಲಿ ಭಾರೀ ಪ್ರಮಾಣ ಅಂದರೆ ಸುಮಾರು 2750 ಟನ್‌ನಷ್ಟು ಅಮೋನಿಯಂ ನೈಟ್ರೇಟನ್ನ ಶೇಖರಿಸಿಟ್ಟಿದ್ದರಿಂದ ಸ್ಪೋಟದ ಪರಿಣಾಮ ನಿಜಕ್ಕೂ ಭೀಕರಗೊಳಿಸಿತ್ತು
====
ಇದನ್ನ ಸ್ಪೋಟಕಕ್ಕೆ ಬಳಸುವುದರಿಂದ ಇದು ಉಗ್ರರ ಫೆವರೀಟ್‌ ಆಗಿದೆ ಅಗ್ಗದಲ್ಲಿ ಅಮೋನಿಯಂ ನೈಟ್ರೇಟ್‌ ಸಿಗುವುದರಿಂದ ಇದನ್ನೇ ಹೆಚ್ಚಾಗಿ ಬಳಸುತ್ತಾರೆ. ಇದರ ಬಳಕೆ ಹಾಗೂ ಮಾರಾಟವನ್ನ "ಜರ್ಮನಿ" ನಿಷೇಧಿಸಿದೆ ಉಗ್ರರು ಸಣ್ಣ ಪುಟ್ಟ ಸ್ಪೋಟಕ್ಕೆ ಇದನ್ನೆ ಬಳಸುತ್ತಾರೆ.

No comments:

Post a Comment