Tuesday, July 28, 2020

Mini Note

👉ಈ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ಚಿನ್ನ ಗೆದ್ದಿತ್ತು - 1964
👉ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಭಾರತದ ಎಷ್ಟನೇ ರಾಷ್ಟ್ರಪತಿಯಾಗಿದ್ದರು? - 11
👉 ಭಾರತಕ್ಕೆ ಮೊದಲ ಹಂತದಲ್ಲಿ ಫ್ರಾನ್ಸ್‌ನಿಂದ ಎಷ್ಟು ರಫೇಲ್ ವಿಮಾನ ಬರಲಿವೆ? - 5 
👉 ಮನುಷ್ಯ ಒಬ್ಬ ರಾಜಕೀಯ ಪ್ರಾಣಿ ಎಂದು ಹೇಳಿದವರು ಯಾರು? - ಅರಿಸ್ಟಾಟಲ್
👉 ಮಧ್ಯರಾತ್ರಿ ಸೂರ್ಯ ಇರುವ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ? - ನಾರ್ವೆ
👉 ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಒಟ್ಟು ಎಷ್ಟು ದ್ವೀಪಗಳಿವೆ? - 36
👉 ದಲಾಲ್ ಸ್ಟ್ರೀಟ್ ಎಲ್ಲಿದೆ? - ಮುಂಬೈ
==================================ಜಗತ್ತಿನ ಹುಲಿಗಳ ಪೈಕಿ ಶೇ. 70ರಷ್ಟು ಹುಲಿಗಳು ಭಾರತದಲ್ಲಿದೆ: ಸಚಿವ ಜಾವಡೇಕರ್
===
> ವಿಶ್ವದ ಒಟ್ಟು ಹುಲಿಗಳ ಪೈಕಿ 70% ಭಾರತದಲ್ಲಿದೆ
>  30,000 ಆನೆಗಳು, 3000  ಏಕಕೊಂಬಿನ ಖಡ್ಗಮೃಗಗಳು ಮತ್ತು 500 ಕ್ಕೂ ಹೆಚ್ಚು ಸಿಂಹಗಳಿವೆ.
> 1973ರಲ್ಲಿ ಕೇವಲ 9 ಇದ್ದ ಹುಲಿ ಸಂರಕ್ಷಿತ ಪ್ರದೇಶಗಳ ಸಂಖ್ಯೆ ಈಗ 50ಕ್ಕೆ ಏರಿಕೆಯಾಗಿದೆ.
> ಜಾಗತಿಕ ಭೂಪ್ರದೇಶದ ಶೇಕಡಾ 2.5ರಷ್ಟು ಭೂಮಿ, ನಾಲ್ಕು ಶೇಕಡಾ ಮಳೆ ಮತ್ತು ವಿಶ್ವದ ಮಾನವ ಜನಸಂಖ್ಯೆಯ ಶೇಕಡಾ 16ರಷ್ಟನ್ನು ಹೊಂದಿರುವ ಬಾರತ ವಿಶ್ವದ ಹುಲಿಗಳ ಪೈಕಿ  70 ಪ್ರತಿಶತವನ್ನು ಒಳಗೊಂಡಿದೆ.
> ಜಗತ್ತಿನಲ್ಲಿ 13 ದೇಶಗಳಲ್ಲಿ ಹುಲಿ ವ್ಯಾಪ್ತಿ ಇದೆ. ಭಾರತ, ಬಾಂಗ್ಲಾದೇಶ, ಭೂತಾನ್, ಕಾಂಬೊಡಿಯಾ, ಚೀನಾ, ಇಂಡೊನೇಷ್ಯಾ, ಲಾವೊ, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ರಷ್ಯಾ, ಥಾ‌ಯ್ಲೆಂಡ್, ವಿಯಟ್ನಾಂ ದೇಶಗಳಲ್ಲಿ ಹುಲಿ ಸಂತತಿ ಇದೆ.
> ಅಂತರರಾಷ್ಟ್ರೀಯ 'ಹುಲಿ ದಿನ’ (ಜುಲೈ29)
> ವಿಶ್ವ ಜೀವವೈವಿಧ್ಯತೆಯಲ್ಲಿ ಜಾಗತಿಕವಾಗಿ ಶೇ 8ರಷ್ಟು ಪಾಲು ಹೊಂದಿರುವ ದೇಶದ ಸಾಧನೆ
> 2019ರ ದತ್ತಾಂಶಗಳ ಪ್ರಕಾರ, ದೇಶದಲ್ಲಿ 2,967 ಹುಲಿಗಳಿವೆ. 2006ರಲ್ಲಿ 1,411 ಹುಲಿಗಳಿದ್ದವು.
==

No comments:

Post a Comment