Tuesday, July 28, 2020

ಅವ್ನಿ ದೋಶಿ

ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಭಾರತೀಯ ಮೂಲದ ಲೇಖಕಿ ಅವ್ನಿ ದೋಶಿ ಕಾದಂಬರಿ
======================
ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಬೂಕರ್‌ ಪ್ರಶಸ್ತಿ‘ಗೆ ಆಯ್ಕೆಯಾಗಬಹುದಾದ ಹದಿಮೂರು ಕೃತಿಗಳ ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಅದರಲ್ಲಿ ದುಬೈನಲ್ಲಿರುವ ಭಾರತೀಯ ಮೂಲದ ಲೇಖಕಿ ಅವ್ನಿ ದೋಶಿ ಅವರ ಚೊಚ್ಚಲ ಕಾದಂಬರಿ ‘ಬರ್ನ್ಟ್‌ ಸುಗರ್’ ಕಾದಂಬರಿಯೂ ಸ್ಥಾನ ಪಡೆದಿದೆ.
=========
ಬ್ರಿಟನ್ ಅಥವಾ ಐರ್ಲೆಂಡ್‌ನಲ್ಲಿ 2019 ಅಕ್ಟೋಬರ್‌ನಿಂದ 2020 ಸೆಪ್ಟೆಂಬರ್ ಅವಧಿಯಲ್ಲಿ ಪ್ರಕಟಗೊಂಡ ಸುಮಾರು 162 ಕಾದಂಬರಿಗಳನ್ನು ಪರಿಶೀಲಿಸಿದ ತೀರ್ಪುಗಾರರು, 13 ಲೇಖಕರ ಕೃತಿಗಳನ್ನೊಳಗೊಂಡ ಪ್ರಾಥಮಿಕ ಹಂತದ ಆಯ್ಕೆ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿ ಅವ್ನಿ ದೋಶಿಯವರ ಕಾದಂಬರಿಯೂ ಸೇರಿದೆ. ಜತೆಗೆ, ಎರಡು ಬಾರಿ ‘ಬೂಕರ್ ಪ್ರಶಸ್ತಿ‘ ಪಡೆದಿರುವ ಹಿಲರಿ ಮಂಟೇಲ್ ಅವರ ‘ದಿ ಮಿರರ್ ಅಂಡ್ ದಿ ಲೈಟ್‌‘ ಕೃತಿಯೂ ಸೇರಿದೆ
=================
ಅವ್ನಿ ದೋಶಿ ಅಮೆರಿಕದಲ್ಲಿ ಹುಟ್ಟಿದ್ದು, ದುಬೈನಲ್ಲಿ ನೆಲಸಿದ್ದಾರೆ. ಇವರ ಚೊಚ್ಚಲ ಕಾದಂಬರಿ ‘ಬರ್ನ್ಟ್‌ ಸುಗರ್‘ ಈ ಮೊದಲು ಭಾರತೀಯ ಓದುಗರಿಗಾಗಿ ‘ಗರ್ಲ್ ಇನ ವೈಟ್ ಕಾಟನ್‌‘ ಹೆಸರಲ್ಲಿ ಪ್ರಕಟವಾಗಿತ್ತು. ಇದು 2019ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು. ಕಳೆದ ಗುರುವಾರ ‘ಬರ್ನ್ಟ್‌ ಸುಗರ್‘ ಹೆಸರಿನಲ್ಲಿ ಈ ಕೃತಿ ಬ್ರಿಟನ್‌ನಲ್ಲಿ ಬಿಡುಗಡೆಯಾಗಿದೆ.
====================
🌷 ಮ್ಯಾನ್ ಬೂಕರ್ ಪ್ರಶಸ್ತಿ ಬಗ್ಗೆ
===================
ಮ್ಯಾನ್-ಬೂಕರ್ ಪ್ರಶಸ್ತಿ ಇದು ಕಾಮನ್ವೆಲ್ತ ರಾಷ್ಟ್ರಗಳ ಅಥವಾ ಐರ್ಲ್ಯಾಂಡ್ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ ಪ್ರಶಸ್ತಿ. ಇದನ್ನು ಬೂಕರ್ ಪ್ರಶಸ್ತಿಯೆಂತಲೂ ಕರೆಯುತ್ತಾರೆ
===================
> ಸ್ಥಾಪನೆ: 1969
> ಇವರು ಪ್ರಸ್ತುತಪಡಿಸಿದ್ದಾರೆ: Man Group Ltd
> ಸಂಬಂಧಿತ ಪ್ರಶಸ್ತಿ : The Golden Man Booker
> ಸಮಾರಂಭದ ದಿನಾಂಕ : ಅಕ್ಟೋಬರ್ 27, 2020
> ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ :- 1969 ಪಿ. ಎಚ್. ನ್ಯೂಬಿ - ಯುನೈಟೆಡ್ ಕಿಂಗ್‌ಡಮ್ - "Something to Answer For"

No comments:

Post a Comment