Wednesday, July 1, 2020

ಏಕದಿನದಲ್ಲಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಟಾಪ್ 5 ಆಟಗಾರರು

👉 ತಂಡದ ಬ್ಯಾಟ್ಸ್‌ಮನ್ ಅಥವಾ ಬೌಲರ್ ಒಬ್ಬ ತನ್ನ ಅವಿರತ ಶ್ರಮದ ಮೂಲಕ ತಂಡದ ಗೆಲುವನ್ನು ಬರೆಯುತ್ತಾನಲ್ಲ? ಆತನಿಗೆ ಪಂದ್ಯಶ್ರೇಷ್ಠ ಅನ್ನೋ ವಿಶೇಷ ಗೌರವ ಸಲ್ಲುತ್ತದೆ.

♦️ 1. ಸಚಿನ್ ತೆಂಡೂಲ್ಕರ್ (ಭಾರತ):-
'ಕ್ರಿಕೆಟ್ ದೇವರು' ಅಂತ ಕರೆಯಲ್ಪಡುವ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತನ್ನ 23 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ 463 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 18,426 ರನ್ ವಿಶ್ವ ದಾಖಲೆಯೂ ಸಚಿನ್ ಹೆಸರಿನಲ್ಲಿದೆ. ಒಡಿಐ 49 ಶತಕಗಳ ದಾಖಲೆ ಹೊಂದಿರುವ ತೆಂಡೂಲ್ಕರ್ ಒಟ್ಟು 62 ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆಲ್ಲುವ ಮೂಲಕ ಇಲ್ಲೂ ದಾಖಲೆ ನಿರ್ಮಿಸಿದ್ದಾರೆ.

♦️ 2. ಸನತ್ ಜಯಸೂರ್ಯ (ಶ್ರೀಲಂಕಾ):-
ಶ್ರೀಲಂಕಾದ ಕ್ರಿಕೆಟ್ ದಂತಕತೆ ಸನತ್ ಜಯಸೂರ್ಯ ಅವರು ತನ್ನ 22 ವರ್ಷಗಳ ಏಕದಿನ ವೃತ್ತಿ ಜೀವನದಲ್ಲಿ 445 ಪಂದ್ಯಗಳನ್ನಾಡಿದ್ದಾರೆ. 13430 ಏಕದಿನ ರನ್ ಗಳಿಸಿರುವ ಜಯಸೂರ್ಯ 28 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಒಡಿಐನಲ್ಲಿ 48 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

♦️ 3. ವಿರಾಟ್ ಕೊಹ್ಲಿ (ಭಾರತ):-
ಈ ವರೆಗೆ 12 ವರ್ಷಗಳ ವೃತ್ತಿ ಜೀವನ ಕಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಟ್ಟಿಗೆ 248 ಪಂದ್ಯಗಳಲ್ಲಿ 11867 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ. ಇನ್ನು ಒಟ್ಟಿಗೆ 36 ಬಾರಿ ಏಕದಿನದಲ್ಲಿ ಮ್ಯಾನ್ ಆಫ್ ದ ಮಾಚ್‌ ಎನಿಸಿದ್ದಾರೆ.

♦️ 4. ಕ್ಯಾಲೀಸ್, ಪಾಂಟಿಂಗ್, ಅಫ್ರಿದಿ:-
ಏಕದಿನದಲ್ಲಿ ಅತೀ ಹೆಚ್ಚು ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆದ್ದವರ ನಾಲ್ಕನೇ ಸ್ಥಾನದಲ್ಲಿ ಒಟ್ಟಿಗೆ ಮೂವರು ಕ್ರಿಕೆಟಿಗರಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲೀಸ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಶಾಹಿದ್ ಅಫ್ರಿದ್ ಈ ಸಾಧನೆ ಮಾಡಿದ್ದಾರೆ. ಕ್ಯಾಲೀಸ್, ಪಾಂಟಿಂಗ್ ಮತ್ತು ಅಫ್ರಿದಿ ಈ ಮೂವರೂ 32 ಬಾರಿ ಪಂದ್ಯಶ್ರೇಷ್ಠರೆನಿಸಿದ್ದರು.

♦️ 5. ವಿವ್ ರಿಚರ್ಡ್ಸ್, ಗಂಗೂಲಿ, ಸಂಗಕ್ಕಾರ:-
ಒಡಿಐ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದವರಲ್ಲಿ 5ನೇ ಸ್ಥಾನದಲ್ಲೂ ಮೂವರಿದ್ದಾರೆ. ವೆಸ್ಟ್ ಇಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್, ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಮತ್ತು ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಈ ದಾಖಲೆ ನಿರ್ಮಿಸಿದ್ದಾರೆ. ಮೂವರೂ 31 ಬಾರಿ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ.
🔹🔹🔹🔹🔹🔹🔹🔹🔹🔹🔹

No comments:

Post a Comment