Wednesday, June 24, 2020

ರಾಜ್ಯ ಮಾನವ ಹಕ್ಕುಗಳ ಆಯೋಗ*(ಕರ್ನಾಟಕ)

State Human Resource Commission

ಇದರ ರಚನೆ & ಕಾರ್ಯ ಹೆಚ್ಚು ಕಡಿಮೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಾಮ್ಯತೆ ಇರುತ್ತದೆ

ಸ್ಥಾಪನೆ- ೨೮-೬-೨೦೦೫

ಅಧ್ಯಕ್ಷ & ಸದಸ್ಯರ ನೇಮಕ- ರಾಜ್ಯಪಾಲ
ಅಧ್ಯಕ್ಷ & ಸದಸ್ಯರ ರಾಜೀನಾಮೆ- ರಾಜ್ಯಪಾಲ
ಪದಚ್ಯುತಿ- ರಾಷ್ಟ್ರಪತಿ

ಅವಧಿ- ೫ ವರ್ಷಗಳು / ೭೦ ವಯಸ್ಸಿನ ವರೆಗೆ
 
ಮರುನೇಮಕಕ್ಕೆ ಅರ್ಹರು( ೭೦ ವರ್ಷಗಳ ಒಳಗಿದ್ದರೆ)

ಅಧ್ಯಕ್ಷರು & ಸದಸ್ಯರು ಭಾರತದ ಯಾವುದೇ ಸರ್ಕಾರ ಹುದ್ದೆಗೆ ನೇಮಕ ಮಾಡುವಂತಿಲ್ಲ.

ರಾಜ್ಯ ಮಾನವ ಹಕ್ಕುಗಳ ಆಯೋಗವು ಸಂವಿಧಾನಾತ್ಮಕ ಆಯೋಗವಾಗಿರದೆ ಇದೊಂದು ಶಾಸನೀಯ ಆಯೋಗವಾಗಿದೆ.

ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ 1993ರ ಅಡಿಯಲ್ಲಿ ಸ್ಥಾಪಿಸಲಾಗಿದೆ. 

ಈ ಆಯೋಗವು ಕರ್ನಾಟಕದಲ್ಲಿ ಮಾನವ ಹಕ್ಕುಗಳ ಕಾವಲುಗಾರನಿದ್ದಂತೆ. 

ಈ ಆಯೋಗವು, ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ನೀಡಿರುವ 
ಜೀವಿಸುವ ಹಕ್ಕು, 
ಸ್ವಾತಂತ್ರದ ಹಕ್ಕು, 
ಸಮಾನತೆಯ ಹಕ್ಕು ಮುಂತಾದವುಗಳನ್ನು ರಕ್ಷಿಸುತ್ತದೆ.

ನೆನಪಿಡಿ- ಇದು ಸಂವಿಧಾನದ ೭ ನೇ ಅನುಸೂಚಿಯಲ್ಲಿ ಉಲ್ಲೇಖವಿರು ರಾಜ್ಯಪಟ್ಟಿ & ಸಹವರ್ತಿ ಪಟ್ಟಿಯಲ್ಲಿನ  ಸಂಬಂಧಿಸಿದ ವಿಷಯಗಳಲ್ಲಿ  ಮಾನವ ಹಕ್ಕು ಉಲ್ಲಂಘನೆಯಾದರೆ ಮಾತ್ರ ವಿಚಾರಣೆ ನೆಡೆಸುತ್ತದೆ. ಇಂತಹ ವಿಷಗಳು ಈಗಾಗಲೇ ರಾಷ್ಟ್ರೀಯ ಮಾನವ ಹಕ್ಕುಗಳು ವಿಚಾರಣೆ ನೆಡೆಸುತ್ತಿದ್ದರೆ ಅಂತಹ ಪ್ರಕರಣಗಳನ್ನು ಚರ್ಚಿಸುವುದಿಲ್ಲ.

ಅಲ್ಲದೇ ಈ ಆಯೋಗವು ಭಾರತದಲ್ಲಿ ಅಸ್ತಿತ್ವದಲ್ಲಿರುವ ನ್ಯಾಯಾಲಯಗಳ ಮೂಲಕ ಅನುಷ್ಟಾನಗೊಳಿಸಬಹುದಾದ ಹಕ್ಕುಗಳನ್ನು ಕೂಡ ರಕ್ಷಿಸುತ್ತದೆ

*ರಚನೆ* 1+2=3

ಒಬ್ಬ ಅಧ್ಯಕ್ಷ ಮತ್ತು ೨ ಜನ ಇತರೆ ಸದಸ್ಯರನ್ನು ಒಳಗೊಂಡಿದೆ

*ಅಧ್ಯಕ್ಷರು*- ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ

*ಸದಸ್ಯರು*-

೧-ಒಬ್ಬರು HC ಸೇವೆರಲ್ಲಿರುವ / ನಿವೃತ್ತಿ ನ್ಯಾಯಾದೀಶರಾಗಿರಬೇಕು / ೭ ವರ್ಷ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಾಹಿಸಿರಬೇಕು

೨-ಇನ್ನೊಬ್ಬರು ಮಾನವ ಹಕ್ಕುಗಳ ಬಗ್ಗೆ ಅನುಭವ & ಪ್ರಾಯೋಗಿಕ ಜ್ಞಾನ ಹೊಂದಿರಬೇಕು

*ನೇಮಕ*
 
ಮುಖ್ಯ ಮಂತ್ರಿ ಸಲಹಾ ಸಮಿತಿ ಅಧ್ಯಕ್ಷತೆಯಲ್ಲಿ  ಅಧ್ಯಕ್ಷರನ್ನು & ಸದಸ್ಯರನ್ನು ರಾಜ್ಯಪಾಲರು ನೇಮಕ ಮಾಡುತ್ತರೆ

*ಸಲಹಾ ಸಮಿತಿ ಎಂದರೆ*

ಸಲಹಾ ಸಮಿತಿಯ ಅಧ್ಯಕ್ಷ - CM

೧-ವಿಧಾ ಸಭೆ ಸಭಾಪತಿ
೨-ವಿದಾನ ಸಭೆ & ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರು
೩-ವಿಧಾನ ಪರಿಷತ್ ಸಭಾಪತಿ
೪-ರಾಜ್ಯ ಗೃಹ ಸಚಿವರು

( ಆ ರಾಜ್ಯದಲ್ಲಿ ವಿಧಾನ ಪರಿಷತ್ ಇದ್ದರೆ)

ಪದಚ್ಯುತಿ- ರಾಷ್ಟ್ರಪತಿ 
ವೇತನ- ರಾಜ್ಯ ಸರ್ಕಾರ
ಪ್ರಧಾನ ಕಚೇರಿ- ಬೆಂಗಳೂರು

*ನೆನಪಿಡಿ* - ಮಾನವ ಹಕ್ಕುಗಳನ್ನು ಉಲ್ಲಂಘಗಿಸಿದವರಿಗೆ ಶಿಕ್ಷೆ & ನೊಂದವರಿಗೆ ಪರಿಹಾರ ಕೊಡಿಸುವ ಅಧಿಕಾರ ಇದಕ್ಕೆ ಇಲ್ಲ. ಕೇವಲ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು. ಅದರೆ ಆಯೋಗ ಶಿಪಾರಸ್ಸುಗಳನ್ನು ಸರ್ಕಾರ ಬದ್ದವಾಗಿರಬೇಕೆಂದೇನು ಇಲ್ಲ ಆದರೆ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು.

ಆಯೋಗಕ್ಕೆ ಸಶಸ್ತ್ರ ಪಡೆಗಳ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಇದಕ್ಕೆ ಸೀಮಿತ ಅಧಿಕಾರವಿದೆ.

ಆಯೋಗ ವಾರ್ಷಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತದೆ. ಇದು ರಾಜ್ಯ ಶಾಸಕಾಂಗದ ಮುಂದೆ ಚರ್ಚಿಸುತ್ತದೆ 

ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ರಾಜ್ಯ ಸಿವಿಲ್ ಕೋರ್ಟಗಿರುವ ಎಲ್ಲ ಅಧಿಕಾರವನ್ನು ಆಯೋಗ ಹೊಂದಿರುತ್ತದೆ

— ಪ್ರಸ್ತುತ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ:
(1) ಮಾನ್ಯ ನ್ಯಾಯಮೂರ್ತಿ ಶ್ರೀ ಧಿರೇಂದ್ರ ಹೆಚ್. ವಘೇಲ, ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ, ಒಡಿಶಾ ಮತ್ತು ಮುಂಬೈ ಉಚ್ಚ ನ್ಯಾಯಾಲಯಗಳು– ಮಾನ್ಯ ಅಧ್ಯಕ್ಷರು (ದಿನಾಂಕ 12/3/2018ರಿಂದ)
(2) ಶ್ರೀ ರೂಪಕ್ ಕುಮಾರ್ ದತ್ತ, ಭಾ.ಪೊ.ಸೇ (ನಿವೃತ್ತ ಡಿಜಿ & ಐಜಿಪಿ) –ಮಾನ್ಯ ಸದಸ್ಯರು (ದಿನಾಂಕ 26/2/2018 ರಿಂದ)
(3) ಶ್ರೀ ಕೆ.ಬಿ. ಚಂಗಪ್ಪ, ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು –ಮಾನ್ಯ ಸದಸ್ಯರು (ದಿನಾಂಕ 19/2/2018 ರಿಂದ)

No comments:

Post a Comment