Tuesday, June 9, 2020

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ -1857

★ ಘಟನೆ ಸ್ಥಳ: ಮೀರತ್‌ನಲ್ಲಿ ಪ್ರಾರಂಭ, ದೆಹಲಿ, ಝಾನ್ಸಿ, ಲಕ್ನೋ, ಬಿಹಾರ್, ಕಾನ್ಪುರಗಳಿಗೆ ವಿಸ್ತರಣೆ 

★ ಪ್ರಮುಖ ಪಾತ್ರವಹಿಸಿದವರು:  2ನೇ ಬಹದ್ದೂರ್‌ಷಾ, ಮಂಗಲ ಪಾಂಡೆ, ನಾನಾಸಾಹೇಬ್, ಲಕ್ಷ್ಮಿ ಬಾಯಿ, ತಾತ್ಯಾಟೋಪಿ. 

★ ಘಟನೆಯ ಕಾರಣಗಳು:~
>ಹೊಸದಾಗಿ ಜಾರಿಗೆ ಬಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆ. 
>ಇನಾಂ ಕಮಿಷನ್ 
>ಮತಾಂತರ ಹಾಗೂ ಕೈಗಾರೀಕರಣ 
>ಬಂದೂಕುಗಳಿಗೆ ಕೊಬ್ಬು ಸವರಿದ್ದು ದಂಗೆಗೆ ಪ್ರಮುಖ ಕಾರಣವಾಯಿತು.

★ ಘಟನೆಯ ಸ್ವರೂಪ: ಮೇ 10 ರಂದು ಸಿಟ್ಟಿಗೆದ್ದ ಸೈನಿಕರು ಬಂಧಿತರನ್ನು ಬಿಡುಗಡೆ ಮಾಡಿಸಿಕೊಂಡು ದೆಹಲಿ ವಶಪಡಿಸಿಕೊಂಡು, ಬಹದ್ದೂರಷಾನನ್ನು ಸುಲ್ತಾನನ್ನಾಗಿ ಮಾಡಿದರು. ಕಾನ್ಪುರದಲ್ಲಿ ದಂಗೆ ನಡೆಯಿತು. ಬ್ರಿಟಿಷರನ್ನು ಗುಂಡುಹಾರಿಸಿ ಕೊಲ್ಲಲಾಯಿತು. ಝಾನ್ಸಿಯಲ್ಲಿ ಬ್ರಿಟಿಷರಿಗೆ ಸೋಲುಂಟಾಯಿತು. 

★ ಘಟನೆಯ ಅಂತಿಮ ರೂಪ: ಇಂತಿಮವಾಗಿ ಬ್ರಿಟಿಷರು ಎಲ್ಲಾ ಸೈನಿಕರನ್ನು ಒಗ್ಗೂಡಿಸಿದರು. ಬ್ರಿಟಿಷರಿಗೆ ನಿಜಾಮ ಮತ್ತು ಸಿಂಧಿಯಾ ಸಹಾಯಕ್ಕೆ ಬಂದರು. ಈ ಸಂಗ್ರಾಮದಲ್ಲಿ ನಾನಾ ಸಾಹೇಬ್ ಪರಾರಿಯಾಗಿ ಓಡಿ ಹೋದನು. ಬಹದ್ದೂರ್‌ ಷಾನನ್ನು ರಂಗೂನ್ ಕಾರಾಗೃಹಕ್ಕೆ ರವಾನಿಸಲಾಯಿತು. ಲಕ್ಷ್ಮೀಬಾಯಿ ವೀರ ಮರಣವನ್ನಪ್ಪಿದಳು. ತಾತ್ಯಾಟೋಪಿಯನ್ನು ಗಲ್ಲಿಗೇರಿಸಲಾಯಿತು. 

★ ವಿಶೇಷತೆ: ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಅತಿ ದೊಡ್ಡ ಬಂಡಾಯ. ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿತು. ಕಂಪನಿಯಿಂದ ಬ್ರಿಟಿಷ್ ರಾಣಿ ಅಧಿಕಾರವಹಿಸಿಕೊಂಡರು. ಬ್ರಿಟಿಷರಿಗೆ ವೈಯಕ್ತಿಕವಾಗಿ ಭಯದ ವಾತಾವರಣ ನೀಡಿತು. ಮುಂದಿನ ಹೋರಾಟಕ್ಕೆ ಸ್ಫೂರ್ತಿಯಾಯಿತು. 

★ ಪರಿಣಾಮಗಳು: ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಯಾಗಿ, ಭಾರತದ ಆಡಳಿತ ನಿರ್ವಹಣೆ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಒಳಪಡುವಂತಾಯಿತು.

No comments:

Post a Comment