Saturday, May 16, 2020

ಬಾಗಲಕೋಟ




ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು.

ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. * ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. 

ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ.

ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. 

ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ,ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.

1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು.

ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ.ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯಿ ಚೌಕ ಕಟ್ಟಲಾಗಿದೆ,ಇದೂ ಎರಡನೆಯ ಹಂತದಲ್ಲಿ ಕೃಷ್ಣಾರ್ಪಣವಾಗಲಿದೆ.ಇವತ್ತು ಹಳೆ ಬಾಗಲಕೋಟ-ವಿದ್ಯಾಗಿರಿ-ನವನಗರವನ್ನು ಒಂದುಗೂಡಿಸುವ ಬೃಹತ್ತ ಸೇತುವೆ ಮತ್ತು ರಸ್ತೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಸುಂದರಗೊಳಿಸಲಾಗಿದೆ.

ನದಿಗಳು

 ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ.

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪(884) ಮೀಟರ ಎತ್ತರದಲ್ಲಿ ಜನಿಸುತ್ತದೆ.

283 ಕಿಮೀ ದೂರದಷ್ಟು ಹರಿದ ಬಳಿಕಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ 35 ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ.

ಉಪನದಿಗಳು

ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಆಣೆಕಟ್ಟುಗಳು

ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭(1897) ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ

ಜಲಪಾತ

ಗೋಕಾಕ ಪಟ್ಟಣದಿಂದ ೧೦ ಕಿ.ಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ. 

 ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.

ಮೊದಲ ಸಂಶೋಧನೆಗಳು

ಬಾಗಲಕೋಟ ಜಿಲ್ಲೆಯು ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿದೆ

ಕನ್ನಡದ ಹರಿದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೇಲೆ ಮೊದಲ ಪಿ.ಎಚ್.ಡಿ. ಪ್ರಬಂಧಗಳು ಈ ಜಿಲ್ಲೆಯಿಂದ ಹೊರಬಂದಿರುವುದು ಒಂದು ದಾಖಲೆಯೇ ಸರಿ

ಡಾ. ಅನಂತರಾಯ ಟಿ. ಪಾಟೀಲ ಅವರು ಬಾಗಲಕೋಟ ಜಿಲ್ಲೆಯಲ್ಲಿ ಪಿಎಚ್.ಡಿ. ಪದವಿ ಪಡೆದ ಮೊಟ್ಟ ಮೊದಲ ಸಂಶೋಧನ ಪ್ರಬಂಧಕಾರರು

ಕನ್ನಡ ಹರಿದಾಸ ಸಾಹಿತ್ಯದಲ್ಲಿ ಇದು ಮೊದಲ ಪಿಎಚ್.ಡಿ. ಪ್ರಬಂಧವಾಗಿ 1956 ರಲ್ಲಿ ಮಿಂಚಿನಬಳ್ಳಿ ಪ್ರಕಾಶನದಿಂದ ಪ್ರಕಟವಾಯಿತು.

No comments:

Post a Comment