Friday, May 8, 2020

ರೆಡ್ ಕ್ರಾಸ್ ಸಂಸ್ಥೆ

★★ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ - ಹೆನ್ರಿ ಡ್ಯೂನಾಂಟ್

★ ಹೆನ್ರಿ ಡ್ಯೂನಾಂಟ್

# ಹೆನ್ರಿ, ಸ್ವಿಟ್ಜಲೆಂಡ್‌ನ ಜಿನಿವಾದಲ್ಲಿ 1828ರ ಮೇ 8ರಂದು ಜನಿಸಿದ.
* ತಂದೆ ಜೀನ್ ಜ್ಯಾಕ್ ಡ್ಯೂನಾಂಟ್ ವ್ಯಾಪಾರಿ ಮತ್ತು ಸಮಾಜ ಸೇವಕ, ತಾಯಿ ಧಾರ್ಮಿಕ ಭಕ್ತೆ.
* ಇವರಿಬ್ಬರ ಗುಣ ಮೇಳೈಸಿ ಹೆನ್ರಿ ಡ್ಯೂನಾಂಟ್ ವ್ಯಾಪಾರದ ಜತೆಗೆ ಮಾನವೀಯತೆ ಹಚ್ಚಿಕೊಂಡ.

# ಎಳೆ ಪ್ರಾಯದಲ್ಲೇ ಬಡವರಿಗೆ, ರೋಗಿಗಳಿಗೆ, ವೃದ್ಧರಿಗೆ ಔಷಧ, ಸಹಾಯ, ಆಹಾರ ನೀಡುವುದನ್ನು ರೂಢಿ ಮಾಡಿಕೊಂಡಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಡ್ಯೂನಾಂಟ್ ಪ್ರತಿಭಾವಂತ. ಜೊತೆಗೆ ಮಾನವೀಯ ಕಳಕಳಿ ಮತ್ತು ಧಾರ್ಮಿಕ ಚರ್ಚೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ.

# 1844ರಲ್ಲಿ ವೈ.ಎಂ. ಸಿ.ಎ. ಎಂಬ ಧರ್ಮ ಸಂಸ್ಥೆ ಹುಟ್ಟಿಹಾಕಿ ಬಡವರಿಗೆ, ರೋಗಿಗಳಿಗೆ, ನೊಂದವರಿಗೆ, ಸಾಂತ್ವನ ಹೇಳುವಲ್ಲಿ ಹೆಚ್ಚು ಆಸಕ್ತನಾಗಿದ್ದ. ತನ್ನ ಜೀವನದ ಹೆಚ್ಚಿನ ಸಮಯವನ್ನು ಯುದ್ಧ ಕೈದಿಗಳ ಕಲ್ಯಾಣಕ್ಕಾಗಿ, ಸಮುದ್ರದಲ್ಲಿ ಗಾಯಗೊಂಡ ಜನರ ಸೇವೆ ಮಾಡುವುದಕ್ಕೆ ಮುಡಿಪಾಗಿರಿಸಿದ್ದ.

# 1859ರ ‘ಸಲ್ರೆರಿನೋ ಯುದ್ಧ’ ಡ್ಯೂನಾಂಟ್‌ ಜೀವನ ಧ್ಯೇಯ ಬದಲಾಯಿಸಿತು. ಮೂಲತಃ ವ್ಯಾಪಾರಿಯಾಗಿದ್ದರೂ, ವ್ಯವಹಾರಕ್ಕಿಂತ ಮಾನವೀಯತೆಗೆ ಹೆಚ್ಚು ಒತ್ತು ನೀಡಿದ್ದರಿಂದ ‘ರೆಡ್ ಕ್ರಾಸ್’ ಸಂಸ್ಥೆ ಉಗಮಕ್ಕೆ ಪರೋಕ್ಷ ಕಾರಣೀಭೂತನಾದ.
★ 1901ರಲ್ಲಿ ಹೆನ್ರಿ ಡ್ಯೂನಾಂಟ್‌ಗೆ ವಿಶ್ವದ ಅತ್ಯುನ್ನತ ಗೌರವ ‘ನೊಬೆಲ್ ಶಾಂತಿ ಪುರಸ್ಕಾರ’ ದೊರಕಿತು.

# ರೆಡ್ ಕ್ರಾಸ್ ಸಂಸ್ಥೆಯ ಅಂತರರಾಷ್ಟ್ರೀಯ ಸಮಿತಿಯು ಹೆನ್ರಿ ಡ್ಯೂನಾಂಟ್ ಬಗ್ಗೆ ಜಿನಿವಾದಿಂದಲೇ ಕಳಿಸಿದ ಸಂದೇಶ ಈ ರೀತಿಯಾಗಿತ್ತು. ‘ಇಂಥ ಘನತ್ತರವಾದ ಗೌರವಕ್ಕೆ ನಿಮ್ಮಂತೆ ಪಾತ್ರರಾದವರು ಬೇರೆ ಯಾರೊಬ್ಬರೂ ಇಲ್ಲ.

# 40 ವರ್ಷಗಳ ಸತತ ಪರಿಶ್ರಮದಿಂದ ಈ ಅಂತರರಾಷ್ಟ್ರೀಯ ಸಂಘಟನೆ ಯುದ್ಧರಂಗದಲ್ಲಿನ ಗಾಯಾಳುಗಳ ಪರಿಹಾರಕ್ಕಾಗಿ ನೀವು ಆರಂಭಿಸಿದಿರಿ. ನೀವಿಲ್ಲದಿದ್ದರೆ 19ನೇ ಶತಮಾನದ ಸರ್ವೋಚ್ಚ ಮಾನವೀಯ ಸಾಧನೆ ರೆಡ್ ಕ್ರಾಸ್ ಸಂಸ್ಥೆ ಉದಯಿಸುತ್ತಿರಲಿಲ್ಲ’.

# ತನ್ನ ಜೀವನದ ಕೊನೆ ಕ್ಷಣದಲ್ಲಿ ಕೂಡ ಹೆನ್ರಿ ಡ್ಯೂನಾಂಟ್ ಬಡರೋಗಿಗಳ ಸೇವೆ ಮಾಡುತ್ತಾ ಆಸ್ಪತ್ರೆಯಲ್ಲಿಯೇ ಇದ್ದ ಶ್ರೀಮಂತನಾದರೂ ಬಡವರ ಜತೆಗೆ ಬದುಕಿದ, ರೆಡ್ ಕ್ರಾಸ್ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ 30ನೇ ಅಕ್ಟೋಬರ್ 1910ರಂದು ಹ್ರೆಡನ್ ನಗರದಲ್ಲಿ ಮರಣ ಹೊಂದಿದ.

★ ಹೆನ್ರಿ ಜನ್ಮದಿನವಾದ ಮೇ 8 ಪ್ರತಿ ವರ್ಷ - ‘ವಿಶ್ವ ರೆಡ್ ಕ್ರಾಸ್’ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಹೆನ್ರಿ ತನ್ನ ಜೀವನದ ಉದ್ದೇಶವನ್ನು ತುಂಬಾ ಸರಳವಾದ ಶಬ್ದಗಳಲ್ಲಿ ಬರೆದಿದ್ದಾನೆ. ‘ಜನತೆಯಿಂದ, ಜನತೆಗೆ ನೆರವು’ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯಗಳನ್ನು ಈ ಶಬ್ದಗಳೇ ವಿವರಿಸುತ್ತದೆ.

# ಒಟ್ಟಿನಲ್ಲಿ ‘ರೆಡ್ ಕ್ರಾಸ್’ ಸಂಸ್ಥೆ ತನ್ನ ಸೇವಾ ಕಾರ್ಯಗಳಿಂದ ಜಾಗತಿಕ ಆಶಾಕಿರಣವಾಗಿ ಹೊರಹೊಮ್ಮಿತು. ರೆಡ್ ಕ್ರಾಸ್ ಸಂಸ್ಥೆ ಸಾರ್ವಕಾಲಿಕ ಸೇವಾ ಸಂಸ್ಥೆ ಯಾಗಿ ಹೊರಹೊಮ್ಮಿ, ಯುದ್ಧಕಾಲದಲ್ಲಿ ಮತ್ತು ಶಾಂತಿಕಾಲದಲ್ಲಿ ನಿರಂತರವಾಗಿ ಶಾಂತಿ ಪ್ರಕ್ರಿಯೆಗಳನ್ನು ನಡೆಸುತ್ತಲೇ ಇದ್ದು ವಿಶ್ವ ಶಾಂತಿಗೆ ಮುನ್ನುಡಿ ಬರೆಯುತ್ತಿದೆ.

No comments:

Post a Comment