Monday, May 18, 2020

ಬಜೆಟ್​ ಬ್ರೀಫ್​ಕೇಸ್​ ಸಂಸ್ಕೃತಿ

 ಪೂರ್ಣಕಾಲಿಕ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಇಷ್ಟು ವರ್ಷದ ಹಣಕಾಸು ಸಚಿವರು ಬಜೆಟ್​ ದಾಖಲೆಗಳಿರುವ ಕಪ್ಪು, ಕಂದು ಬಣ್ಣಗಳ ಮೃದು ಲೆದರ್​ ಹೊದಿಕೆ ಇರುವ ಬ್ರೀಫ್​ಕೇಸ್​ ಹಿಡಿದು ಸಂಸತ್ತಿಗೆ ಆಗಮಿಸುತ್ತಿದ್ದರು. ಆದರೆ, ನಿರ್ಮಲಾ ಸೀತಾರಾಮನ್​ ಬ್ರೀಫ್​ಕೇಸ್​ ಸಂಸ್ಕೃತಿಗೆ ತೆರೆನೀಡಿದ್ದು ದಾಖಲೆಗಳನ್ನೆಲ್ಲ ಕೆಂಪು ಬಟ್ಟೆಯಲ್ಲಿ ಸುತ್ತಿಕೊಂಡು ಸಂಸತ್ತಿಗೆ ತೆಗೆದುಕೊಂಡು ಬಂದಿದ್ದಾರೆ.

ಕೆಂಪುಬಟ್ಟೆಯಲ್ಲಿ ಬಜೆಟ್​ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್​ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದ್ದು, ಆಕರ್ಷಣೀಯವಾಗಿದೆ.

ಬಜೆಟ್​ ಎಂಬುದು ಮೂಲತಃ ಫ್ರೆಂಚ್​ನ ಬಾಗಟ್​ ಎಂಬ ಶಬ್ದದಿಂದ ಬಂದಿದೆ. ಅದರ ಅರ್ಥ ಲೆದರ್​ ಚೀಲ​ ಎಂಬುದಾಗಿದೆ. ಹಾಗಾಗಿ ಬಜೆಟ್​ ದಾಖಲೆಗಳನ್ನು ಲೆದರ್​ ಬ್ರೀಫ್​ಕೇಸ್​ನಲ್ಲಿ ತರುವುದು ಬ್ರಿಟಿಷ್​ ಕಾಲದಿಂದಲೂ ನಡೆದುಕೊಂಡು ಬಂದಿತ್ತು.

[18/05, 12:19] 🐅B̵̫̘͓̗̲͙̮̙͙̃̅̏̉͆̍🅾$҉$҉🐅: 

🌹ಚೀಲದಿಂದ ಬಟ್ಟೆಯವರೆಗೆ…

👉ಸ್ವತಂತ್ರ ಭಾರತದ ಮೊದಲ ಬಜೆಟ್​ ಮಂಡನೆಯಾಗಿದ್ದು 1947ರಲ್ಲಿ. ಅಂದು ಆಯವ್ಯಯ ಮಂಡಿಸಿದ್ದ ಸರ್​ ಎಂ.ಕೆ.ಷಣ್ಮುಖಂ ಚೆಟ್ಟಿ ಅವರು ದಾಖಲೆಗಳನ್ನು ಲೆದರ್​ ಚೀಲದಲ್ಲಿ ಕೊಂಡೊಯ್ದಿದ್ದರು.

👉ಅದಾದ 10 ವರ್ಷಗಳ ಬಳಿಕ ಅಂದರೆ 1957ರಲ್ಲಿ ವಿತ್ತೀಯ ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರು ತಮ್ಮ ಮುಂಗಡ ಪತ್ರಗಳ ದಾಖಲೆಗಳನ್ನು ಫೈಲ್​ ಬ್ಯಾಗ್​ನಲ್ಲಿ ತೆಗೆದುಕೊಂಡು ಹೋಗಿದ್ದರು. ಹಾಗೇ ಜವಾಹರ್​ಲಾಲು ಅವರು ಕಪ್ಪು ಬ್ರೀಫ್​ಕೇಸ್​ ಬಳಸಿದ್ದರು.

👉1991ರಲ್ಲಿ ಬಜೆಟ್​ ಮಂಡನೆ ಮಾಡಿದ್ದ ಮನಮೋಹನ್​ ಸಿಂಗ್​ ತಮ್ಮ ಆಯವ್ಯಯ ದಾಖಲೆಗಳನ್ನು ಕಪ್ಪು ಬಣ್ಣದ ಚೀಲದಲ್ಲಿ ಕೊಂಡೊಯ್ದಿದ್ದರೆ,

👉 ಅವರು ಪ್ರಧಾನಿಯಾಗಿದ್ದಾಗ ವಿತ್ತೀಯ ಸಚಿವರಾಗಿದ್ದ ಪ್ರಣಬ್​ ಮುಖರ್ಜಿ ಕೆಂಪು ಬಣ್ಣದ ಸೂಟ್​ಕೇಸ್ ಹಿಡಿದು ಸಂಸತ್ತು ಪ್ರವೇಶಿಸಿದ್ದರು.

👉ಕಳೆದ ಎನ್​ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್​ಜೇಟ್ಲಿ ಕಂದು ಬಣ್ಣದ ಬ್ರೀಫ್​ಕೇಸ್​ ಬಳಸಿದ್ದರೆ, 

👉ಅವರ ಅನಾರೋಗ್ಯದ ನಿಮಿತ್ತ ಸರ್ಕಾರದ ಕೊನೇ ಮಧ್ಯಂತರ ಬಜೆಟ್​ ಮಂಡಿಸಿದ್ದ ಪಿಯುಷ್​ ಗೋಯೆಲ್​ ಕೆಂಪು ಬಣ್ಣದ ಬ್ರೀಫ್​ಕೇಸ್​ ಹಿಡಿದಿದ್ದರು.

👉ಆದರೆ, ಒಂದು ಬಟ್ಟೆಯಲ್ಲಿ ಬಜೆಟ್​ ದಾಖಲೆಗಳನ್ನು ದಾಖಲೆಗಳನ್ನು ಗಂಟುಕಟ್ಟಿ ಸಂಸತ್ತು ಪ್ರವೇಶಿಸಿದ್ದು ಇದೇ ಮೊದಲು ಎನ್ನಲಾಗಿದೆ

No comments:

Post a Comment