Friday, May 8, 2020

ವಿಶ್ವ ಅಸ್ತಮಾ ದಿನ

★★ ವಿಶ್ವ ಅಸ್ತಮಾ ದಿನ - ಮೇ 5

# ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ.
* 2020ರಲ್ಲಿ ವಿಶ್ವ ಅಸ್ತಮಾ ದಿನವನ್ನು ಮೇ 5 ರಂದು ಆಚರಿಸಲಾಗುತ್ತದೆ.

★ 2020 ನೇ ಸಾಲಿನ ವಿಶ್ವ ಅಸ್ತಮಾ ದಿನದ ವಿಷಯ (Theme) - "'Enough Asthma Deaths'”

★ ಹಿನ್ನೆಲೆ

* 1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. 
* ಬಾರ್ಸಿಲೋನಾದಲ್ಲಿ ನಡೆದ ಮೊದಲ "ವಿಶ್ವ ಅಸ್ತಮಾ ಸಮಾವೇಶ"ದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 
* "ಮಕ್ಕಳಿಗೆ ಉಸಿರಾಡಲು ನೆರವಾಗಿ" ಎಂಬ ಧ್ಯೇಯ ವಾಕ್ಯದೊಂದಿಗೆ 1998ರಲ್ಲಿ ಈ ದಿನವನ್ನು ಆಚರಿಸಲಾಯಿತು.
* ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ 2010ರಲ್ಲಿ ಸುಮಾರು 300 ಮಿಲಿಯನ್ ಮಂದಿ ಈ ಅಸ್ತಮಾದಿಂದ ಬಳಲುತ್ತಿದ್ದು, ಸರಿ ಸುಮಾರು 2,50,000 ಮಂದಿ ವರ್ಷವೊಂದರಲ್ಲಿ ಸಾವನ್ನಪ್ಪುತ್ತಾರೆ ಎಂದು ತಿಳಿದು ಬಂದಿದೆ. 
* ಈ ಕಾರಣದಿಂದಲೇ ಇಡೀ ಮೇ ತಿಂಗಳಲ್ಲಿ ಅಸ್ತಮಾ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿ, ಅಸ್ತಮಾ ರೋಗವನ್ನು ತಡೆಗಟ್ಟುವ ಮತ್ತು ಹತೋಟಿಯಲ್ಲಿಡುವ ವಿವಿಧ ಶಿಬಿರಗಳನ್ನು ಏರ್ಪಡಿಸಿ, ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮೇ ತಿಂಗಳನ್ನು "ಅಸ್ತಮಾ ತಿಳುವಳಿಕೆ ತಿಂಗಳು" ಎಂದು ಆಚರಿಸಲಾಗುತ್ತಿದೆ.

★ ಅಸ್ತಮಾ ರೋಗ

* ಅಸ್ತಮಾ ಎನ್ನುವುದು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಕಾಯಿಲೆಯಾಗಿದೆ.
* ಅಸ್ತಮಾ ರೋಗದ ಲಕ್ಷಣಗಳು
1.ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದುಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು.
2.ಎದೆ ಬಿಗಿಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು
3.ವಿಪರೀತವಾದ ದೀರ್ಘಕಾಲಿಕ ಕೆಮ್ಮು
4.ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ ಮತ್ತು ಅಸಹನೆ ನಿರುತ್ಸಾಹ... ಆಟೋಟ ಮತ್ತು ಇತರ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.

No comments:

Post a Comment