Saturday, May 23, 2020

ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ


ಪ್ರತಿವರ್ಷ ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ (ಐಎಂಡಿ) ಎಂದು ಆಚರಿಸಲಾಗುತ್ತದೆ. 1977ರಿಂದ ಶುರುವಾದ ಈ ಆಚರಣೆಯ ಪ್ರಮುಖ ಉದ್ದೇಶವೆಂದರೆ ಸಂಸ್ಕೃತಿ ಪರಿಚಯ ಹಾಗೂ ವಿನಿಮಯ, ಜನರು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಆ ಮೂಲಕ ಸಹಕಾರ ಹಾಗೂ ಶಾಂತಿ ಸ್ಥಾಪನೆ ಮತ್ತು ವಿಶ್ವಾದ್ಯಂತ ಅಹಿಂಸಾತ್ಮಕ ಅಭಿವೃದ್ಧಿ. ಇಂಟರ್‌ನ್ಯಾಷನಲ್‌ ಕೌನ್ಸಿಲ್‌ ಆಫ್‌ ಮ್ಯೂಸಿಯಮ್ಸ್‌ (ಐಸಿಒಎಂ) ನೇತೃತ್ವದಲ್ಲಿ ಐಎಂಡಿ ಆಚರಣೆ ನಡೆಯುತ್ತದೆ. ಇತಿಹಾಸ / ಚರಿತ್ರೆ , ಕಲೆ ಮತ್ತು ಸಾಹಿತ್ಯ, ವಿಜ್ಞಾನ ಹಾಗೂ ತಂತ್ರಜ್ಞಾನ, ಸಾಮಾನ್ಯ/ ಪ್ರಾದೇಶಿಕ, ವರ್ಚುಯೆಲ್‌/ಡಿಜಿಟಲ್‌ ಈ ಐದು ಮಾನದಂಡಗಳನ್ನು ಇಟ್ಟುಕೊಂಡು ಮ್ಯೂಸಿಯಂಗಳನ್ನು ವರ್ಗೀಕರಿಸಲಾಗುತ್ತದೆ.

ಐಸಿಒಎಂ ಬದ್ಧತೆ

1. ಸಂಶೋಧನೆ
2. ಸಂರಕ್ಷಣೆ
3. ಜಗತ್ತಿನ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಮಾಜಕ್ಕೆ ತಿಳಿಸುವುದು, ಮುಂದುವರಿಸಲು ಪ್ರೇರೇಪಿಸುವುದು (ಸ್ಪರ್ಶದಿಂದ ಅರಿಯುವಂತಹದ್ದು ಮತ್ತು ನಾಟಕ, ಸಂಗೀತ ಮಾದರಿ ಅನುಭವಿಸಿ ಅರಿಯುವಂತಹದ್ದು)
4. ಭವಿಷ್ಯದ ವಿಸ್ಮಯಗಳ ಬಗ್ಗೆಯೂ ಮಾಹಿತಿ ನೀಡುವುದು.

ಸಮಾನತೆಗಾಗಿ ಮ್ಯೂಸಿಯಂಗಳು

# ಐಸಿಒಎಂ ಸದಸ್ಯರು - 138 ರಾಷ್ಟ್ರಗಳು
# ಭಾರತದಲ್ಲಿ ಸಂಸ್ಕೃತಿ ಸಚಿವಾಲಯ ನಿರ್ವಹಿಸುವ ಪ್ರಮುಖ
# ಮ್ಯೂಸಿಯಂಗಳು - 10
# ವೈವಿಧ್ಯತೆ ಮತ್ತು ಸೇರ್ಪಡೆ - ಈ ವರ್ಷದ ಐಎಂಡಿ ಘೋಷವಾಕ್ಯ

ಇಂಡಿಯನ್‌ ಮ್ಯೂಸಿಯಂ ಅಥವಾ ಇಂಪೀರಿಯಲ್‌ ಮ್ಯೂಸಿಯಂ, ಕೋಲ್ಕೊತಾ (1814ರಲ್ಲಿಸ್ಥಾಪನೆ): ದೇಶದ ಅತಿದೊಡ್ಡ ಹಾಗೂ ಪುರಾತನ ಮ್ಯೂಸಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಜತೆಗೆ ವಿಶ್ವದಲ್ಲೇ ಒಂಬತ್ತನೇ ಪುರಾತನ ಮ್ಯೂಸಿಯಂ ಕೂಡ.

ದೇಶದ ಟಾಪ್‌ 10 ಮ್ಯೂಸಿಯಂಗಳು

- ನ್ಯಾಷನಲ್‌ ಮ್ಯೂಸಿಯಂ, ಹೊಸದಿಲ್ಲಿ
- ಇಂಡಿಯನ್‌ ಮ್ಯೂಸಿಯಂ , ಕೋಲ್ಕತ
- ಅಲಹಾಬಾದ್‌ ಮ್ಯೂಸಿಯಂ, ಅಲಹಾಬಾದ್‌
- ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಹೊಸದಿಲ್ಲಿ
- ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಮುಂಬಯಿ
- ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಬೆಂಗಳೂರು
- ವಿಕ್ಟೊರಿಯಾ ಮೆಮೊರಿಯಲ್‌ ಹಾಲ್‌, ಕೋಲ್ಕತ
- ಆರ್ಕಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ಗೋವಾ
- ಆರ್ಕಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ನಾಗಾರ್ಜುನಕೊಂಡ
- ಸಲಾರ್‌ ಜಂಗ್‌ ಮ್ಯೂಸಿಯಂ, ಹೈದರಾಬಾದ್‌

No comments:

Post a Comment