Tuesday, May 19, 2020

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ 

೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ 

೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ 

೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ 

೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್ 

೬."ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"
✅ಡೆಕಾರ್ತ 

೭.ಮುದ್ದಣನ ರತ್ನಾವಳಿ ಎನ್ನುವುದು
✅ಯಕ್ಷಗಾನ 

೮. ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
✅ಸುವರ್ಣ ಪುತ್ಥಳಿ

೯. 'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
✅ಮಲ್ಲಿನಾಥ ಪುರಾಣ 

೧೦. ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
✅ಕುಂಬಾರ ಗುಂಡಯ್ಯನ ರಗಳೆ 

೧೧. 'ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ 
ಕಬ್ಬ ಹೇಳಲೇ ಸರಸ್ವತಿಯೇ'ಈ ಪಾದದಲ್ಲಿರುವ ಛಂದೋಬಂಧ
✅ಸಾಂಗತ್ಯ 

೧೨. ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
✅ಸಿಮೋನ ದ ಬೋವಾ 

೧೩. ಇದೊಂದು ರೂಪಾಂತರಿತ ಕವಿತೆಯಾಗಿದೆ.
✅ಅಣ್ಣನ ವಿಲಾಪ

೧೪.ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
✅U_U 

೧೫. 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'
✅ಕಾಂತಿ 

೧೬. ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
✅ಮಣ್ಣಿನ ಹಾಡು

೧೭. "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ" ಈ ಕಾವ್ಯದ ಸಾಲು
✅ಕುಮಾರವ್ಯಾಸ ಭಾರತ

೧೮.'ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?
✅ಚಿಕ್ಕದೇವರಾಯ 

೧೯. ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
✅ಜೈಮಿನಿ ಭಾರತ 

೨೦.' ಸಂಕೋಲೆಯೊಳಗಿಂದ 'ಇದು ಇವರ ಕಾದಂಬರಿಯಾಗಿದೆ
✅ಅನುಪಮ ನಿರಂಜನ್ 

೨೧. ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
✅ಲಕ್ಕುಂಡಿ ಶಾಸನ 

೨೨. "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?
✅ನೇಮಿಚಂದ್ರ 

೨೩. "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು
✅ಪುರಂದರದಾಸರು 

೨ ೪."ಸಂಜೆಗಳಿಗೆ ಜಳಕ ಮಾಡಿಸೆ" ಇದು ಇವರ ಕವನ ಸಾಲು. ✅ಪುತಿನ 

೨೫. ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
✅ಚೆನ್ನಬಸವನಾಯಕ  

೨೬. ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
✅ಚಾವುಂಡರಾಯ ಪುರಾಣ 

೨೭.ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
✅ಅಪರಾಳ ತಮ್ಮಣ್ಣ 

೨೮.ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
✅ತೊಗಲುಗೊಂಬೆಯಾಟ 

೨೯."ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ
✅ತಿರುಮಲಾರ್ಯ 

೩೦.ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
✅ಭಟ್ಟಲೊಲ್ಲಟ

೩೧.ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
✅ಕೋಲ್ರಿಜ್ 

೩೨.ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
✅ಮಾನಸೀಕ ದೂರ 

೩೩.ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
✅ಚೆನ್ನಬಸವಣ್ಣ 

೩೪.ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
✅ಷಡಕ್ಷರ 

೩೫.ಗೋಡೆ ಬೇಕೆ ಗೋಡೆ ? ನಾಟಕದ ಕತೃ
✅ಎನ್ ರತ್ನ 

೩೬.ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
✅ಶೋಕಚಕ್ರ 

೩೭ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು?  
✅ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ 

೩೮.The heritage of karanataka ಈ ಕೃತಿಯ ಲೇಖಕರು ಯಾರು?
✅ರಂ.ಶ್ರೀ ಮುಗಳಿ 

೩೯.ಇಬ್ಸನ್ ನ 'ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ'ರ ಕನ್ನಡದಲ್ಲಿ ರೂಪಾಂತರಗೊಂಡು
✅ಆರ್ಯಕ 

೪೦.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
✅ಮಸ್ಕೀ 

೪೧.'ಅಭಿನವ ಶರ್ವ ವರ್ಮ' ಎಂಬ ಬಿರುದುಳ್ಳ ಕವಿ
✅೨ನೇ ನಾಗವರ್ಮ 

೪೨.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
✅ಸೋಮರಾಜ 

೪೩.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
✅ಸಮಾಜ ಶಾಸ್ತ್ರೀಯ ವಿಮರ್ಶೆ 

೪೪.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
✅ಡ್ರೈಡ್ರನ್ 

೪೫.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
✅ದ.ರಾ.ಬೇಂದ್ರೆ 

೪೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ 

೪೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ

೪೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್ 

೪೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ 

೫೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ 
 
 ೫೧.ಕಾಂಡಕ ಪ್ರಪಾತದ ಉಲ್ಲೇಖವಿರುವ ಕೃತಿ
✅ಆದಿಪುರಾಣ 

೫೨. "ಭಾಮಿನಿ ಷಟ್ಪದಿಗೆ ಕುಮಾರವ್ಯಾಸನು ಹೇಗೋ, ರಗಳೆಗಳಿಗೆ ಹರಿಹರನು ಹೇಗೋ,ಹಾಗೆ ಸಾಂಗತ್ಯಕ್ಕೆ ರತ್ನಾಕರನು" ಎಂದು ವಿಮರ್ಶಿಸಿದವರು.
✅ತ.ಸು.ಶಾಮರಾಯ 

೫೩.ಪ್ರಾಣೇಶಾಚಾರ್ಯನ ಕಥೆಯನ್ನೋಳಗೊಂಡ ಅನಂತಮೂರ್ತಿ ಯವರ ಕಾದಂಬರಿ
✅ಸಂಸ್ಕಾರ

೫೪.ಚಾಮರಸನ ಪ್ರಭುಲಿಂಗ ಲೀಲೆ ಈ ಷಟ್ಪದಿಯಲ್ಲಿದೆ.
✅ಭಾಮಿನಿ 

೫೫. ಮಟ್ಟ ರಗಳೆ ಎಂದು ಈ ಪ್ರಕಾರಕ್ಕೆ ಕರೆಯಲಾಗಿದೆ.
✅ಮಂದಾನಿಲ 

೫೬. "ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ಯಾವುದು ಸಂತೋಷಗೊಳಿಸುವುದೋಅದು ನಿಜವಾದ, ಉದಾತ್ತವಾದ,ಭವ್ಯವಾದ ಸಾಹಿತ್ಯ"ಎಂದು ಹೇಳಿದವರು ಯಾರು?
✅ಲಾಂಜಿನಸ್ 

೫೭. ಹಣೆಯ ಕಣ್ಣು ಹುರಿದ ಭಾವ ತಾನೇ ರಸವೇ ಆಯ್ದು ಸೋಕರ ಮೂಲರತಿಯ ತೇವಕಣ್ಣಿನಾ ರತಿಯನು ಎತ್ತಿ ಬಂತು ಜೀವ ಎಂದವರು
✅ದ.ರಾ.

No comments:

Post a Comment