Monday, May 11, 2020

ರಾಷ್ಟ್ರೀಯ ತಂತ್ರಜ್ಞಾನ ದಿನ

🌎ದೇಶದ 2ನೇ ಅಣು ಪರೀಕ್ಷೆ
ಪೋಖ್ರಾಣ್–2 ಅಥವಾ ಆಪರೇಷನ್ ಶಕ್ತಿ ನಡೆದು ಇಂದಿಗೆ (ಮೇ 11) 22 ವರ್ಷ ತುಂಬಿದೆ. ಮೇ 11,13 1998 ರಂದು ನಡೆದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿದ್ದವು.

🌏ಭಾರತದ ಮಿಸೈಲ್‌ಮ್ಯಾನ್ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಆಪರೇಷನ್ ಶಕ್ತಿ ನಡೆದಿತ್ತು. ಈ ಪರೀಕ್ಷೆಯ ಸ್ಮರಣಾರ್ಥ ಮೇ 11 ಅನ್ನು ಭಾರತದ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

☄ಅಣು ಪರೀಕ್ಷೆ ನಡೆಸಿದ ಕಾರಣಕ್ಕೆ ಅಮೆರಿಕವು ಭಾರತದ ಮೇಲೆ ನಿರ್ಬಂಧ ಹೇರಿತ್ತು.

🌎 2ನೇ ಹಂತದ ಪರೀಕ್ಷೆಯ ವಿವರ ಬಹಿರಂಗವಾಗುತ್ತಿದ್ದಂತೆ ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿತ್ತು.

⚙ವಿಜ್ಞಾನಿಗಳು ಸೈನಿಕರ ಸಮವಸ್ತ್ರದಲ್ಲಿ ಕಾರ್ಯನಿರ್ವಹಿಸಿದ್ದ ಕಾರಣ ಮತ್ತು ಬಹುತೇಕ ಕಾರ್ಯಾಚರಣೆ ರಾತ್ರಿ ವೇಳೆ ನಡೆದಿದ್ದರಿಂದ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎನ ಉಪಗ್ರಹಗಳ ಕಣ್ತಪ್ಪಿಸಲು ಭಾರತಕ್ಕೆ ಸಾಧ್ಯವಾಗಿತ್ತು. ಈ ಪರೀಕ್ಷೆಯನ್ನು ಪತ್ತೆ ಮಾಡುವಲ್ಲಿ ತಾನು ವಿಫಲವಾಗಿದ್ದಾಗಿ ಸಿಐಎ ಹೇಳಿಕೆ ನೀಡಿತ್ತು.

😇.ಸ್ಮೈಲಿಂಗ್ ಬುದ್ಧ😇
ಇದು ಭಾರತದ ಮೊದಲ (1974) ಅಣು ಪರೀಕ್ಷೆ ಕಾರ್ಯಾಚರಣೆಗೆ ಇರಿಸಿದ್ದ ಹೆಸರು. ರಾಜಸ್ಥಾನದ ಪೋಖ್ರಾಣ್‌ನಲ್ಲಿ ನಡೆದಿದ್ದರಿಂದ ಇದನ್ನು ಪೋಖ್ರಾಣ್–1 ಎಂದೂ ಕರೆಯಲಾಗುತ್ತದೆ.

No comments:

Post a Comment