Friday, May 8, 2020

ದಿನ ವಿಶೇಷ:ಮೇ 8

*ಘಟನೆಗಳು:* ಆಧುನಿಕ ರಸಾಯನ ಶಾಸ್ತ್ರದ ಪಿತಾಮಹರೆಂದು ಖ್ಯಾತರಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸಿಯರ್ ಅವರನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಮರಣ ದಂಡನೆಗೆ ಗುರಿಪಡಿಸಲಾಯಿತು. ಔಷಧ ಮಾರಾಟಗಾರರಾದ ಜಾನ್ ಪೆಂಬರ್ಟನ್ ಅವರು ಮೊದಲ ಬಾರಿಗೆ ಕೋಕಾ-ಕೋಲಾವನ್ನು ಪೇಟೆಂಟ್ ಪಡೆದ ಔಷಧವನ್ನಾಗಿ ಮಾರಿದರು. ಇಟಾಲಿಯನ್ ಫುಟ್ಬಾಲ್ ಲೀಗ್ ವ್ಯವಸ್ಥೆಯ ಪ್ರಥಮ ಪಂದ್ಯವನ್ನು ಆಡಲಾಯಿತು. ಪ್ಯಾರಮೌಂಟ್ ಪಿಕ್ಚರ್ಸ್ ಸ್ಥಾಪನೆಗೊಂಡಿತು. ಮಹಾತ್ಮ ಗಾಂಧೀಜಿ ಅವರು ಸ್ವಯಂ ಶುದ್ಧೀಕರಣಕ್ಕಾಗಿ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಜೊತೆಗೆ ಹರಿಜನ ಉದ್ಧಾರದ ಕಾರ್ಯಕ್ರಮಗಳನ್ನೂ ಆರಂಭಿಸಿದರು. 

*ಘಟನೆಗಳು:*

1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹರೆಂದು ಖ್ಯಾತರಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸಿಯರ್ ಅವರನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಮರಣ ದಂಡನೆಗೆ ಗುರಿಪಡಿಸಲಾಯಿತು.

1856: ಔಷಧ ಮಾರಾಟಗಾರರಾದ ಜಾನ್ ಪೆಂಬರ್ಟನ್ ಅವರು ಮೊದಲ ಬಾರಿಗೆ ಕೋಕಾ-ಕೋಲಾವನ್ನು ಪೇಟೆಂಟ್ ಪಡೆದ ಔಷಧವನ್ನಾಗಿ ಮಾರಿದರು.

1898: ಇಟಾಲಿಯನ್ ಫುಟ್ಬಾಲ್ ಲೀಗ್ ವ್ಯವಸ್ಥೆಯ ಪ್ರಥಮ ಪಂದ್ಯವನ್ನು ಆಡಲಾಯಿತು

1912: ಪ್ಯಾರಮೌಂಟ್ ಪಿಕ್ಚರ್ಸ್ ಸ್ಥಾಪನೆಗೊಂಡಿತು

1933: ಮಹಾತ್ಮ ಗಾಂಧೀಜಿ ಅವರು ಸ್ವಯಂ ಶುದ್ಧೀಕರಣಕ್ಕಾಗಿ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಜೊತೆಗೆ ಹರಿಜನ ಉದ್ಧಾರದ ಕಾರ್ಯಕ್ರಮಗಳನ್ನೂ ಆರಂಭಿಸಿದರು.

1962: ರಬೀಂದ್ರ ಭಾರತಿ ವಿಶ್ವವಿದ್ಯಾಲಯವು ಸ್ಥಾಪನೆಗೊಂಡಿತು.

1978: ರೀಯಿನ್ ಹೋಲ್ಡ್ ಮೆಸ್ಸೆನೆರ್ ಮತ್ತು ಪೀಟರ್ ಹಬೇಲೆರ್ ಅವರು ಮೊಟ್ಟ ಮೊದಲ ಬಾರಿಗೆ ಪೂರಕ ಆಮ್ಲಜನಕದ ಸಹಾಯವಿಲ್ಲದೆ ಮೌಂಟ್ ಎವರೆಸ್ಟ್ ಆರೋಹಣ ಮಾಡಿದರು.

1980: ವಿಶ್ವ ಆರೋಗ್ಯ ಸಂಸ್ಥೆಯು ಸಿಡುಬು ಕಾಹಿಲೆ ಸಂಪೂರ್ಣವಾಗಿ ನಿರ್ಮೂಲನೆಗೊಂಡಿರುವುದಾಗಿ ದೃಢೀಕರಿಸಿತು

2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.

2008: ಒಲಿಂಪಿಕ್ ಜ್ಯೋತಿಯ ಯಶಸ್ವೀ ಮೌಂಟ್ ಎವರೆಸ್ಟ್ ಆರೋಹಣ

*ಜನನ:*

1828: ರೆಡ್ ಕ್ರಾಸ್ ಸಂಸ್ಥಾಪಕರಾದ ಹೆನ್ರಿ ಡ್ಯೂನಾಂಟ್ ಜನನ

1884: ಅಮೆರಿಕದ ಅಧ್ಯಕ್ಷರಾದ ಹ್ಯಾರಿ ಎಸ್. ಟ್ರೂಮನ್ ಜನನ

1899: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ಹಯೇಕ್ ಜನನ

1902: ನೊಬೆಲ್ ಪುರಸ್ಕೃತ ಜೀವವಿಜ್ಞಾನಿ ಆಂಡ್ರೆ ಮಿಚೆಲ್ ಲ್ವಾಫ್ ಜನನ

1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಜನನ

1917: ಅಮೆರಿಕದ ಬಾಕ್ಸಿಂಗ್ ಪಟು ‘ಸೋನ್ನಿ' ಲಿಸ್ಟನ್ ಜನನ

1925: ವಿದ್ವಾಂಸ, ವಿಮರ್ಶಕ ಜಿ. ಎಸ್. ಅಮೂರ ಜನನ

1928: ವಿದ್ವಾಂಸ, ಸಂಶೋಧಕ, ಸಾಹಿತಿ ಶಂಕರ ಮೊಕಾಶಿ ಪುಣೇಕರ ಜನನ

1947: ನೊಬೆಲ್ ಪುರಸ್ಕೃತ ಜೀವವಿಜ್ಞಾನಿ ಎಚ್. ರಾಬರ್ಟ್ ಹೋರ್ವಿಟ್ಜ್ ಜನನ

1953: ಹೃದಯರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಜನನ

*ನಿಧನ:*

1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ಮೇಡಂ ಹೆಲೆನಾ ಬ್ಲಾವಟ್ ಸ್ಕಿ ನಿಧನ

1971: ರೆವರೆಂಡ್ ಉತ್ತಂಗಿ ಚೆನ್ನಪ್ಪ ನಿಧನ

1972: ಭಾರತೀಯ ದರ್ಶನ ಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ಪಾಂಡುರಂಗ ವಾಮನ್ ಕಾನೆ ನಿಧನ

1984: ರೀಡರ್ಸ್ ಡೈಜೆಸ್ಟ್ ಸಹ ಸಂಸ್ಥಾಪಕಿ ಲೀಲಾ ಬೆಲ್ ವಾಲೇಸ್ ನಿಧನ

2014: ಜಿಪಿಎಸ್ ಸಹ-ಸಂಶೋಧಕ ರೋಜರ್ ಎಲ್. ಈಸ್ಟನ್ ನಿಧನ

No comments:

Post a Comment