Monday, May 11, 2020

ಅಂತರರಾಷ್ಟ್ರೀಯ ದಾದಿಯರ ದಿನ - ಮೇ 12

# ಪ್ರತಿ ವರ್ಷ ಮೇ 12 ಅನ್ನು ಅಂತರರಾಷ್ಟ್ರೀಯ ದಾದಿಯರ ದಿನವೆಂದು ಆಚರಿಸಲಾಗುತ್ತದೆ.
* ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನಾಚರಣೆಯನ್ನು ಅಂತರರಾಷ್ಟ್ರೀಯ ದಾದಿಯರ ದಿನವಾಗಿ ಆಚರಿಸಲಾಗುತ್ತದೆ.
* ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ 1971 ರಿಂದ ಆಯೋಜಿಸುತ್ತಿದೆ.

●● 2020 ರ ಅಂತರರಾಷ್ಟ್ರೀಯ ದಾದಿಯರ ದಿನ ವಿಷಯ ( theme ) - Nurses: A Voice to lead-Nursing the World to Health

# ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ದಾದಿಯರ ಒಕ್ಕೂಟ ನಡೆಸುತ್ತದೆ.

★ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ದಾದಿಯರ ಒಕ್ಕೂಟ

# ಇದು 130 ಕ್ಕೂ ಹೆಚ್ಚು ದಾದಿಯರ ಸಂಘಗಳನ್ನು ಹೊಂದಿರುವ ಒಕ್ಕೂಟವಾಗಿದ್ದು, ಇದು ವಿಶ್ವದಾದ್ಯಂತ 20 ದಶಲಕ್ಷಕ್ಕೂ ಹೆಚ್ಚು ದಾದಿಯರನ್ನು ಪ್ರತಿನಿಧಿಸುತ್ತದೆ.
* ಇದನ್ನು 1899 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ವ್ಯಾಪಕವಾದ ಸಂಸ್ಥೆಯಾಗಿದೆ.
* ಇದು ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದೆ.

★ ಅಂತರರಾಷ್ಟ್ರೀಯ ದಾದಿಯರ ಮತ್ತು ಸೂಲಗಿತ್ತಿಯರ ವರ್ಷ

# 2020 ನೇ ವರ್ಷವನ್ನು ಅಂತರರಾಷ್ಟ್ರೀಯ ದಾದಿಯರು ಮತ್ತು ಸೂಲಗಿತ್ತಿಯರ ವರ್ಷವೆಂದು ಘೋಷಿಸಲಾಗಿದೆ.
* ಫ್ಲಾರೆನ್ಸ್ ನೈಟಿಂಗೇಲ್‌ನ 200 ನೇ ಜನ್ಮದಿನದ ಅಂಗವಾಗಿ 2020 ನೇ ವರ್ಷವನ್ನು ಅಂತರರಾಷ್ಟ್ರೀಯ ದಾದಿಯರ ಮತ್ತು ಸೂಲಗಿತ್ತಿಯರ ವರ್ಷವನ್ನು ಆಚರಿಸಲಾಗುತ್ತಿದೆ.

★ ಫ್ಲಾರೆನ್ಸ್ ನೈಟಿಂಗೇಲ್

# 1820ರ ಮೇ 12ರಂದು ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಇವರನ್ನು ‘ಆಧುನಿಕ ನರ್ಸಿಂಗ್‍ನ ರೂವಾರಿ’ ಎಂದು ಕರೆಯುತ್ತಾರೆ.
* ಮೂಲತಃ ಇಟಲಿ ದೇಶದಲ್ಲಿ ಜನಿಸಿ ಬಳಿಕ ಬ್ರಿಟಿಷ್ ದೇಶದ ಸಂಜಾತೆಯಾದ ಈಕೆ 13 ಆಗಸ್ಟ್ 1910ರಲ್ಲಿ ಇಹಲೋಕ ತ್ಯಜಿಸಿದರು.
* ಸುಮಾರು 90 ವರ್ಷಗಳ ಪರಿಪೂರ್ಣ ಬದುಕು ಸವೆಸಿದ ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದಳು.
* ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಈಕೆ ವೃತ್ತಿಯಲ್ಲಿ ಅಂಕಿ ಅಂಶ ತಜ್ಞೆಯಾಗಿದ್ದಳು. ಆದರೆ ನೊಂದವರ ದೀನ ದಲಿತರ ಸಾಲಿಗೆ ಈಕೆ ಸಾಕ್ಷಾತ್ ದೇವತೆಯಾಗಿದ್ದಳು.
* ಕ್ರಿಮಿನ್ ಯುದ್ಧದ ಸಮಯದಲ್ಲಿ ನುರಿತ ದಾದಿಯರ ತಂಡದ ನಾಯಕಿಯಾಗಿ ಈಕೆ, ಗಾಯಗೊಂಡ ಸೈನಿಕರ ಸೇವೆಯನ್ನು ಹಗಲು ರಾತ್ರಿ ಮಾಡಿ ಹಲವಾರು ಸೈನಿಕರು ಜೀವ ಉಳಿಸಿದ್ದಳು.
* ರಾತ್ರಿ ಹೊತ್ತು ಯುದ್ಧ ಭೂಮಿಯಲ್ಲಿ ಕತ್ತಲಿನ ನಡುವೆ ದೀಪವನ್ನು ಹಿಡಿದುಕೊಂಡು ನೊಂದ ಮತ್ತು ಗಾಯಗೊಂಡ ಸೈನಿಕರ ಸೇವೆ ಮಾಡಿ ‘ಲೇಡಿ ಆಫ್ ಲ್ಯಾಂಪ್’ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದ್ದರು.

No comments:

Post a Comment