Wednesday, April 10, 2019

'ವಾಯುದಾಳಿ ಯೋಧರಿಗೆ' ನಿಮ್ಮ ಮೊದಲ ಮತ: ಮೋದಿ ಮನವಿ


ಲಾತೂರ್‌ (ಮಹಾರಾಷ್ಟ್ರ): ಮೊದಲ ಬಾರಿ ಮತದಾನ ಮಾಡುತ್ತಿರುವ 1.5 ಕೋಟಿ ಮತದಾರರಿಗೆ ತಮ್ಮ ಮತವನ್ನು ಬಾಲಾಕೋಟ್ವಾಯು ದಾಳಿಯಲ್ಲಿ ಭಾಗಿಯಾದವರಿಗೆ ಸಮರ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಲಾತೂರ್ಜಿಲ್ಲೆಯಲ್ಲಿ ಚುನಾವಣಾ ್ಯಾಲಿಯೊಂದರಲ್ಲಿ ಮೊದಲ ಬಾರಿಯ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರು ಮತ್ತು ವಾಯು ದಾಳಿ ನಡೆಸಿದವರಿಗೆ ನಿಮ್ಮ ಮೊದಲ ಮತವನ್ನು ಸಮರ್ಪಿಸಬಹುದಾ? ಬಡವರಿಗೆ ಶಾಶ್ವತ ಮನೆ ನಿರ್ಮಿಸುವುದಕ್ಕಾಗಿ ಮೊದಲ ಮತವನ್ನು ಸಮರ್ಪಿಸುವಿರಾ? ರೈತರ ಹೊಲಗಳಿಗೆ ನೀರು ಒದಗಿಸುವುದಕ್ಕಾಗಿ ನೀವು ಮತದಾನಮಾಡುವುದಿಲ್ಲವೇ? ಆಯುಷ್ಮಾನ್ಭಾರತ ಯೋಜನೆಗಾಗಿ ನೀವು ಮತದಾನ ಮಾಡುವುದಿಲ್ಲವೇ' ಎಂದ  ಕೇಳಿದರು. 
ಪ್ರಧಾನಿ ಮೋದಿಗೆ ಧನ್ಯವಾದಗಳು ಎಂದ ಸುಮಲತಾ! 'ನೀವು ಮೊದಲ ಮತಹಾಕಿದ್ದು ಜೀವನದುದ್ದಕ್ಕೂ ನೆನಪಿನಲ್ಲಿ ಇಟ್ಟುಕೊಳ್ಳುವಂತಾಗಲಿ. ಪ್ರತಿ ಬಾರಿ ಚುನಾವಣೆಯಲ್ಲಿ ಮತಹಾಕಿದಾಗಲೂ ಅದು ನೆನಪಿನಲ್ಲಿ ಇರಬೇಕು' ಎಂದು ಹೇಳಿದರು. ನಡುವೆ, 'ನಮ್ಮನ್ನು ಕಾಂಗ್ರೆಸ್ಪಕ್ಷ ಚೌಕೀದಾರ ಚೋರ ಎನ್ನುತ್ತದೆ. ಆದರೆ ಕಾಂಗ್ರೆಸ್ಸಿಗರ ಮನೆಗಳಲ್ಲಿ ಐಟಿ ದಾಳಿಯ ವೇಳೆ ಬಗೆದಷ್ಟು ಹಣ ಸಿಗುತ್ತಿದೆ' ಎಂದು ಮಧ್ಯಪ್ರದೇಶದ ಸಿಎಂ ಆಪ್ತರ 281 ಕೋಟಿ ರು. ಹವಾಲಾ ಜಾಲದ ಬಗ್ಗೆ ಮೋದಿ ಟೀಕಿಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
ದೇಶದಲ್ಲಿ .11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ .18 ಹಾಗೂ .23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

No comments:

Post a Comment