Wednesday, April 10, 2019

ಎಸ್ಬಿಐನಿಂದ ಗುಡ್ ನ್ಯೂಸ್!


ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2019 ಸಾಲಿನ ಮೊದಲ ಹಣಕಾಸು ನೀತಿ ಪರಾಮರ್ಶೆ ಸಂದರ್ಭದಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಗೃಹ ಸಾಲದ ಮೇಲಿನ ಬಡ್ಡಿದರ 5 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಎಂಸಿಎಲ್ಆರ್ ದರವನ್ನು ಶೇ. 8.55 ರಿಂದ ಶೇ. 8.50 ಕ್ಕೆ ಇಳಿಕೆ ಮಾಡಿದೆ. ರೂ. 30 ಲಕ್ಷ ಒಳಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಎಸ್ಬಿಐ ಗೃಹ ಸಾಲದ ಬಡ್ಡಿ ದರ ಕಡಿತಗೊಳಿಸಿದ್ದು, ಏಪ್ರಿಲ್ 10 ರಿಂದ ಹೊಸ ದರ ಜಾರಿಯಾಗುತ್ತದೆ. ಎಸ್ಬಿಐ ಬಡ್ಡಿದರ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ದೇಶದ ಇನ್ನಿತರ ಬ್ಯಾಂಕ್ ಗಳು ಕೂಡ ಗೃಹ ಸಾಲದ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಇದೆ.No comments:

Post a Comment