Thursday, April 11, 2019

ಇಂದಿನ ಗೂಗಲ್ 'ಡೂಡಲ್' ಕ್ಲಿಕ್ ಮಾಡಿ ನೋಡಲೇಬೇಕು!..ಏಕೆ ಗೊತ್ತಾ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ 17ನೇ ಲೋಕಸಭೆ ಚುನಾವಣೆ ಇಂದು ಆರಂಭಗೊಂಡಿರುವುವ ಹಿನ್ನಲೆಯಲ್ಲಿ ಪ್ರಖ್ಯಾತ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆ ತನ್ನ ಡೂಡಲ್ ಮೂಲಕ ಜಾಗೃತಿ ಮೂಡಿಸಿದೆ. ಪ್ರಪಂಚ ಸೇರಿದಂತೆ ದೇಶದಲ್ಲೇ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸರ್ಚ್ ಇಂಜಿನ್ ದೈತ್ಯ ಮತದಾರರಲ್ಲಿ ಮತದಾನದ ಅಗತ್ಯತೆಯನ್ನು ತಿಳಿದಿದೆ.

ಹೌದು, 2019 ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಗೂಗಲ್ಡೂಡಲ್ನಲ್ಲಿ ರಚಿಸಿರುವ ಕೈ ಚಿತ್ರದಲ್ಲಿ ತೋರು ಬೆರಳಿಗೆ ಶಾಯಿ ಹಾಕಿರುವ ಚಿತ್ರದ ಮೂಲಕ ಮತದಾನದ ಜಾಗೃತಿ ಮೂಡಿಸಲು ಗೂಗಲ್ ಮುಂದಾಗಿದೆ. ತೋರು ಬೆರಳನ್ನು ಕ್ಲಿಕ್ಮಾಡಿದರೆ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಲಭ್ಯ ಇವೆ.

ಗೂಗಲ್ ತನ್ನ ಡೂಡಲ್ ಮೂಲಕ ಹೇಗೆ ಮತದಾನ ಮಾಡಬೇಕು, ವೋಟಿಂಗ್ ಬೂತ್ನಲ್ಲಿ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುವುದು, ನಮ್ಮ ಮತದಾನದ ಬೂತ್ಯಾವುದೆಂದು ಕಂಡುಹಿಡಿಯುವುದು ಹೇಗೆ, ಇವಿಎಂಅನ್ನು ಬಳಕೆ ಮಾಡುವುದು ಹೇಗೆ ಮತ್ತು ಯಾವಾಗೆಲ್ಲ ಚುನಾವಣೆ ನಡೆಯಲಿದೆ ಎಂಬೆಲ್ಲಾ ಮಾಹಿತಿಗಳನ್ನು ನೀಡಿದೆ.

ಏಪ್ರಿಲ್ 11ರಿಂದ ಆರಂಭವಾಗಿರುವ 2019 ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 18, ಏಪ್ರಿಲ್ 23, ಎಪ್ರಿಲ್ 29, ಮೇ 6, ಮೇ 12 ಮತ್ತು ಮೇ 19 ಹೀಗೆ ಏಳು ಹಂತಗಳಲ್ಲಿ ಮತದಾನವಾಗಲಿದ್ದು, ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನದ ಒಟ್ಟು ಫಲಿತಾಂಶ ಮೇ 23 ರಂದು ಮತಎಣಿಕೆಯಲ್ಲಿ ಬಹಿರಂಗವಾಗಲಿದೆ.

     



No comments:

Post a Comment