Wednesday, April 10, 2019

ನಾಳೆ ಮೊದಲ ಹಂತದ ಮಹಾಸಮರ, ಎಲ್ಲೆಲ್ಲಿ ನಡೆಯಲಿದೆ ಮತದಾನ..?


ನವದೆಹಲಿ, .10- ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿರುವ ಭಾರತದಲ್ಲಿ ಹೈವೊಲ್ಟೇಜ್ ಲೋಕಸಭಾ ಸಮರದ ಮೊದಲಹಂತಕ್ಕೆ ನಾಳೆ ಮತದಾನ ನಡೆಯಲಿದೆ.
ಇದರೊಂದಿಗೆ ಒಟ್ಟು 7 ಹಂತಗಳ ಲೋಕಸಭಾ ಚುನಾವಣೆಗೆ ಚಾಲನೆ ದೊರೆಯಲಿದ್ದು, ಘಟಾನುಘಟಿಗಳ ಅದೃಷ್ಟ ಪರೀಕ್ಷೆಗೆ ವೇದಿಕೆ ಸಜ್ಜಾಗಿದೆ.
ನಾಳೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 91 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮೊದಲಹಂತದ ಚುನಾವಣೆಗೆ ಆಯೋಗ ಸಕಲ ರೀತಿಯಲ್ಲೂ ಸಿದ್ಧತೆಗಳನ್ನು ಕೈಗೊಂಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಮೊನ್ನೆ ಅಂತ್ಯಗೊಂಡಿತು. ರಾಜಕೀಯ ಮುಖಂಡರು ಎಲ್ಲ 91 ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರಾಂದೋಲನ ಮತ್ತು ಚುನಾವಣಾ ರ್ಯಾಲಿಗಳನ್ನು ನಡೆಸಿ ಮತದಾರರನ್ನು ಓಲೈಸುವ ಅಂತಿಮ ಕಸರತ್ತು ನಡೆಸಿದರು.
ಬಿಜೆಪಿಯ ಸ್ಟಾರ್ ಕ್ಯಾಂಪೆನರ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲಹಂತದ ಚುನಾವಣೆ ನಡೆಯುವ 91 ಕ್ಷೇತ್ರಗಳಲ್ಲಿ ಸುತ್ತಾಡಿ ತಮ್ಮ ಪಕ್ಷಗಳ ಪರ ಬಿರುಸಿನ ಪ್ರಚಾರ ನಡೆಸಿ ಗಮನ ಸೆಳೆದರು.
ಪ್ರಥಮ ಹಂತದ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಮ್ ನಿಭಾಹೇಂಗೆ ಹೆಸರಿನಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಹಾಗೂ ಬಿಜೆಪಿ ಸಂಕಲ್ಪ್ ಪತ್ರ ಚುನಾವಣಾ ಪ್ರಣಾಳಿಕೆಯ ಮೂಲಕ ದೇಶದ ಮತದಾರರನ್ನು ಓಲೈಸಲು ಅನೇಕ ಭರವಸೆ-ಆಶ್ವಾಸೆಗಳ ವಾಗ್ದಾನ ಮಾಡಿವೆ. 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಸಮಯವು ಸ್ವಲ್ಪ ವ್ಯತ್ಯಾಸದಿಂದ ಕೂಡಿರುತ್ತದೆ. ಸುಗಮ, ಶಾಂತಿಯುತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಆಯೋಗ ಬಿರುಸಿನ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.
ಮತದಾನದ ವೇಳೆ ಯಾವುದೇ ಅಹಿತಕರಣ ಘಟನೆಗಳು ನಡೆಯದಂತೆ ವ್ಯಾಪಕ್ತ ಬಂದೋಬಸ್ತ್ ಮಾಡಲಾಗುತ್ತಿದೆ. ಚುನಾವಣಾ ಆಯೋಗ ನಾಳೆಯ ಮೊದಲಹಂತದ ಮತದಾನಕ್ಕಾಗಿ ಸಲಕ ರೀತಿಯಲ್ಲಿ ಸಜ್ಜಾಗಿದ್ದು, ಆಯಾಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಸೂಕ್ತ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗಿವೆ.
. 18, . 23, . 29, ಮೇ 6, ಮೇ 12 ಹಾಗೂ ಮೇ 19ರಂದು ಉಳಿದ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
     

No comments:

Post a Comment