Wednesday, April 10, 2019

ಅಮೇಥಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ


ಅಮೇಥಿ (ಉತ್ತರ ಪ್ರದೇಶ): ಕಾಂಗ್ರೆಸ್ಅಧ್ಯಕ್ಷ ರಾಹುಲ್ಗಾಂಧಿ ಅವರು ಉತ್ತರ ಪ್ರದೇಶ ರಾಜ್ಯದ ಅಮೇಥಿ ಲೋಕಸಭೆ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದರು.
ರಾಹುಲ್ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕ ಗಾಂಧಿ, ಹಾಗೂ ರಾಬರ್ಟ್ವಾದ್ರ ಉಪಸ್ಥಿತರಿದ್ದರು.
ಇಲ್ಲಿನ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ರಾಹುಲ್ಗಾಂಧಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ರಾಹುಲ್ಗಾಂಧಿ ರೋಡ್ಶೋ ನಡೆಸಿದರು. ಕಾಂಗ್ರೆಸ್ಹಿರಿಯ ಮುಖಂಡರಾದ ಸಂಜಯ್ಸಿಂಗ್‌, ಪ್ರಮೋದ್ತಿವಾರಿ ಸಾಥ್ನೀಡಿದರು.
ರೋಡ್ಶೋ ಸಮಯದಲ್ಲಿ ಕಾಂಗ್ರೆಸ್ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ರಾಹುಲ್ಗಾಂಧಿ ಅಮೇಥಿಯನ್ನು ಮೊದಲ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದಲೂ ರಾಹುಲ್ಗಾಂಧಿ ಸ್ಪರ್ಧಿಸಿದ್ದಾರೆ.

No comments:

Post a Comment