Wednesday, April 10, 2019

ರಾಜ್ಯದ 20 ಸಾವಿರ ಸರ್ಕಾರಿ ಶಾಲಾ ಕಾಲೇಜುಗಳು ಮತಗಟ್ಟೆಯಾಗಿ ಪರಿವರ್ತನೆ


ಬೆಂಗಳೂರು, .10: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ .18 ಹಾಗೂ .23 ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೀಗಾಗಿ ಕರ್ನಾಟಕದ ಸುಮಾರು 20ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳು ಮತಗಟ್ಟೆಯವಾಗಿ ಪರಿವರ್ತನೆ ಹೊಂದುತ್ತಿವೆ. ಕಾಲೇಜು ಶಾಲೆಗಳಲ್ಲಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 34 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ.

ರಾಜ್ಯದ ಒಟ್ಟು 19,953 ಶಾಲೆ ಹಾಗೂ ಕಾಲೇಜುಗಳನ್ನು ಮತಗಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. ವಿಕಲಾಂಗ ಚೇತನಿರಾಗಿ ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ನಿರ್ದೇಶನ ನೀಡಿದೆ.
ಹಾಗೆಯೇ ಚುನಾವಣಾ ಮತಗಟ್ಟೆಗೆ ಕಡ್ಡಾಯವಾಗಿ ಬಣ್ಣ ಬಳಿದಿರಬೇಕು, ಶೌಚಾಲಯಗಳು ಇರಬೇಕು. ಕಾಂಪೌಂಡ್ಗಳು ಸರಿಯಾಗಿರಬೇಕು. ಅಷ್ಟೇ ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆಯೂ ಕೂಡ ಇರಬೇಕು.
ಚುನಾವಣೆಗಾಗಿ ಮೀಸಲಿಟ್ಟ ಹಣದಲ್ಲಿ ಹೊಸದಾಗಿ ಕ್ಲಾಸ್ರೂಮುಗಳ ನಿರ್ಮಾಣ ಅಥವಾ ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡುವಂತಿಲ್ಲ ಬದಲಾಗಿ ಇರುವುದನ್ನೇ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದೆ.

 

 

No comments:

Post a Comment