Thursday, March 28, 2019

97,000 ಅನಾಲಿಟಿಕ್ಸ್, ಡೇಟಾ ಸೈನ್ಸ್ ಉದ್ಯೋಗಾವಕಾಶ

ಅನಾಲಿಟಿಕ್ಸ್ಮತ್ತು ಡೇಟಾ ಸೈನ್ಸ್ಗೆ ಸಂಬಂಧಿಸಿದಂತೆ 97,000 ಉದ್ಯೋಗಗಳು ಖಾಲಿ ಇವೆ ಎಂದು ಆನ್ಲೈನ್ಶಿಕ್ಷಣ ಕಂಪನಿ ಗ್ರೇಟ್ಲರ್ನಿಂಗ್ವರದಿ ತಿಳಿಸಿದೆ

ಕಾರ್ಪೊರೇಟ್ವಲಯದಲ್ಲಿ ಕಂಪನಿಗಳು ಅನಾಲಿಟಿಕ್ಸ್ ಹಾಗೂ ಡೇಟಾ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ವಲಯದಲ್ಲಿ ಹೇರಳ ಉದ್ಯೋಗಾವಕಾಶ ಸೃಷ್ಟಿಯಾಗಿದೆ

ಅನಾಲಿಟಿಕ್ಸ್ಮತ್ತು ಡೇಟಾ ಸೈನ್ಸ್ಗೆ ಸಂಬಂಧಿಸಿದಂತೆ 97,000 ಉದ್ಯೋಗಗಳು ಖಾಲಿ ಇವೆ ಎಂದು ಆನ್ಲೈನ್ಶಿಕ್ಷಣ ಕಂಪನಿ ಗ್ರೇಟ್ಲರ್ನಿಂಗ್ವರದಿ ತಿಳಿಸಿದೆ

''ಕೇವಲ ಒಂದು ವರ್ಷದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವೆ ಶೇ.45ರಷ್ಟು ಅಂತರ ಉಂಟಾಗಿದೆ. ಉದ್ದಿಮೆ ವಲಯ ಡೇಟಾ ಆಧಾರಿತ ನಿರ್ಣಯ ತೆಗೆದುಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ. ಕೆಲವೇ ವರ್ಷಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಲಿದೆ'' ಎನ್ನುತ್ತಾರೆ ಗ್ರೇಟ್ಲರ್ನಿಂಗ್ಸಹ ಸಂಸ್ಥಾಪಕ ಹರಿ ಕೃಷ್ಣನ್ನಾಯರ್

JOBS
ಏನಿದು ಡೇಟಾ ಸೈನ್ಸ್‌? 

ನಾನಾ ಬಗೆಯ ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸುವ ಪ್ರಕ್ರಿಯೆ ಡೇಟಾ ಸೈನ್ಸ್ನಲ್ಲಿರುತ್ತದೆ. ಕಾರ್ಪೊರೇಟ್ವಲಯದ ಕಂಪನಿಗಳಿಗೆ ಭವಿಷ್ಯದ ತಮ್ಮ ವಹಿವಾಟು ಸುಧಾರಣೆಗೆ, ಹೊಸ ಕಾರ್ಯತಂತ್ರಗಳ ಜಾರಿಗೆ, ಗ್ರಾಹಕರ ಮನಸ್ಥಿತಿಗಳನ್ನು ಅರಿತು ನಿರ್ಣಯ ಕೈಗೊಳ್ಳಲು ಇದು ಸಹಾಯಕ

ಪ್ರಮುಖ ಜಾಬ್ಪೋರ್ಟಲ್ಗಳಲ್ಲಿ ಡೇಟಾ ಸೈನ್ಸ್‌, ಅನಾಲಿಟಿಕ್ಸ್ಕುರಿತ ಉದ್ಯೋಗಾವಕಾಶಗಳ ಮಾಹಿತಿ ಪಡೆಯಬಹುದು. ಬಹುತೇಕ ಹುದ್ದೆಗಳು ಜ್ಯೂನಿಯರ್ಲೆವೆಲ್ನದ್ದಾಗಿದೆ. 5 ವರ್ಷದೊಳಗಿನ ಅನುಭವಸ್ಥರಿಗೆ ಲಭ್ಯ. ಹೊಸಬರಿಗೂ ಅವಕಾಶಗಳಿವೆ. ಅನಾಲಿಟಿಕ್ಸ್ಹುದ್ದೆಗಳು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂಬಯಿ, ದಿಲ್ಲಿ, ಚೆನ್ನೈನಲ್ಲೂ ಅವಕಾಶಗಳು ಇವೆ. ಬ್ಯಾಂಕಿಂಗ್‌, ರಿಟೇಲ್‌ ,-ಕಾಮರ್ಸ್‌, ಔಷಧ, ಆಟೊಮೊಬೈಲ್‌, ಟೆಲಿಕಾಂ ಇತ್ಯಾದಿ ವಲಯಗಳಲ್ಲಿ ಕುರಿತ ಉದ್ಯೋಗಾವಕಾಶಗಳಿವೆ

No comments:

Post a Comment