Tuesday, March 26, 2019

ಪ್ರೌಢಶಾಲೆಗಳಲ್ಲಿನ 3,633 ಶಿಕ್ಷಕರ ಹುದ್ದೆಗೆ ನೇಮಕ


 ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ 2017ರಲ್ಲಿ ಸರಕಾರ ಕೆಲವು ನಿಯಮಗಳನ್ನು ಜಾರಿಗೆ ತಂದಿತ್ತು. 'ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಂಬಂಧಪಟ್ಟ ಅನುದಾನಿತ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ರಾಜೀನಾಮೆ, ಮರಣ, ಬಡ್ತಿ ಹಾಗೂ ಇತರೆ ಕಾರಣಗಳಿಂದ ಖಾಲಿ ಉಳಿದಿರುವ ಒಟ್ಟು 3,633 ಮಂದಿ ಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ. 2015 ಡಿಸೆಂಬರ್‌ 31ಕ್ಕೆ ಹಿಂದೆ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

 ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಂತ್ಯಗೊಂಡ ನಂತರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.ಪ್ರೌಢಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶವು ಕಳೆದ ಐದು ಶೈಕ್ಷಣಿಕ ವರ್ಷಗಳ ಜಿಲ್ಲಾ ಸರಾಸರಿ ಫಲಿತಾಂಶಕ್ಕೆ ಸಮನಾಗಿರಬೇಕು ಅಥವಾ ಹೆಚ್ಚಾಗಿರಬೇಕು' ಎಂಬುದು ಇದರಲ್ಲಿ ಪ್ರಮುಖ ಷರತ್ತಾಗಿತ್ತು. ಆದರೆ, ರಾಜ್ಯದ ಬಹುತೇಕ ಅನುದಾನಿತ ಪ್ರೌಢಶಾಲೆಗಳು ಷರತ್ತನ್ನು ಪೂರೈಸುವುದರಲ್ಲಿ ವಿಫಲವಾಗಿದ್ದವು. ಹಾಗಾಗಿ, ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು

ಸರಕಾರ ಹಲವು ಬಾರಿ ನಡೆಸಿದ ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡಿತ್ತು. ಶಿಕ್ಷಣ ತಜ್ಞರು, ವಿಧಾನ ಪರಿಷತ್ಸದಸ್ಯರು ಬಗ್ಗೆ ಮನವಿ ಮಾಡಿದ್ದರು. 2019 .29ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೂ ವಿಷಯ ಪ್ರಸ್ತಾಪಗೊಂಡಿತ್ತು. ಸಭೆಯಲ್ಲಿಯೇ ಷರತ್ತನ್ನು ಕೈ ಬಿಡುವ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇತ್ತೀಚೆಗೆ ಸರಕಾರ ಸಂಬಂಧ ಆದೇಶ ಕೂಡ ಹೊರಡಿಸಿದೆ. ಹೀಗಾಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಉಳಿದಿರುವ ಒಟ್ಟು 3,633 ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮತಿ ದೊರೆತಿದೆ

No comments:

Post a Comment