Wednesday, July 4, 2018

Want to get permission from the Appointment Authority to obtain higher education externally?

 ಬಾಹ್ಯವಾಗಿ ಉನ್ನತ ಶಿಕ್ಷಣ ಪಡೆಯಲು ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆಯಬೇಕೆ?ಸರ್ಕಾರಿ ಕಾರ್ನರ್ ಪ್ರಶ್ನೆಗೆ ಉತ್ತರ ಜೊತೆಗೆ ಪ್ರಶ್ನೆಗೆ ಹೊಂದಿಕೊಂಡಂತೆ ಸುತ್ತೋಲೆ.
ಪ್ರಶ್ನೆ:
ನಾನು ಪ್ರೌಢಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಬಾಹ್ಯವಾಗಿ ಉನ್ನತ ಶಿಕ್ಷಣ ಪಡೆಯಲು ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆಯಬೇಕೆ? ಮಾಹಿತಿ ನೀಡಿ.
| ಬಿ.ಕೆ. ಗೌತಮ್ ಬೆಳಗಾವಿ
ಉತ್ತರ:
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61ರ ಮೇರೆಗೆ ಹಾಗೂ ದಿನಾಂಕ 5.2.1973ರ ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4, ಎಸ್​ಆರ್​ಸಿ 73, ಹಾಗೂ ದಿನಾಂಕ 6.9.86ರ ಸರ್ಕಾರಿ ಸುತ್ತೋಲೆಯಂತೆ ಬಾಹ್ಯವಾಗಿ ಉನ್ನತ ಶಿಕ್ಷಣವನ್ನು ಪಡೆಯಲು ನೇಮಕಾತಿ ಪ್ರಾಧಿಕಾರವಾಗಲೀ, ಅಥವಾ ಮೇಲಾಧಿಕಾರಿಗಳ ಅನುಮತಿ ಅನವಶ್ಯಕ. ಆದರೆ ನೀವು ಉನ್ನತ ವ್ಯಾಸಂಗದಲ್ಲಿ ನಡೆಸುವ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಪೂರ್ವಭಾವಿಯಾಗಿ ಈ ಬಗ್ಗೆ ಮಾಹಿತಿಯನ್ನು ನೀಡಬೇಕು.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸುತ್ತೋಲೆ. ಪ್ರತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
CLICK HERE TO CIRCULARNo comments:

Post a Comment