TIME BOUND ADVANCEMENT RULES
ಕಾಲಬದ್ಧ ಮುಂಬಡ್ತಿಯ ವೇತನ ನಿಗದಿ.
ಲ. ರಾಘವೇಂದ್ರ
1) 1982ರ ಪರಿಷ್ಕೃತ ವೇತನ ಶ್ರೇಣಿಯನ್ನು ಆಯ್ಕೆ ಮಾಡಿಕೊಂಡ ದಿನಾಂಕಕ್ಕಿಂತ ಮುಂಚಿತವಾಗಿಯೇ ಕಾಲಮಿತಿ ಮುಂಬಡ್ತಿ ಯೋಜನೆಗೆ ಅರ್ಹತೆ ದೊರೆತಲ್ಲಿ ಉದ್ಯೋಗಿಯು ತನ್ನ ಇಚ್ಛೆಯ ಮೇರೆಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಿದ ನಂತರ ಸದರಿ ವೇತನದ ಆಧಾರದ ಮೇಲೆ ಆಯ್ಕೆ ಕಾಲಿಕ ವೇತನ ಶ್ರೇಣಿಯಲ್ಲಿ ನಿಯಮ 42 (ಬಿ) ಪ್ರಕಾರ ವೇತನ ನಿಗದಿಪಡಿಸಿಕೊಳ್ಳಲು ಅವಕಾಶವಿದೆ.
2) ಉದ್ಯೋಗಿಗೆ ಹತ್ತು ವರ್ಷಗಳ ಅರ್ಹ ಸೇವೆ ಪೂರ್ಣಗೊಳ್ಳುವ ಮುನ್ನ ಉನ್ನತ ಹುದ್ದೆಗೆ ಪದೋನ್ನತಿ ಹೊರತು, ಸದರಿ ಉದ್ಯೋಗಿಯು ಇಚ್ಛೆಪಟ್ಟಲ್ಲಿ ಕಾಲಮಿತಿ ಮುಂಬಡ್ತಿ ಯೋಜನೆಗೆ ಅರ್ಹನಾಗುವವರೆಗೆ ಲಿಖಿತ ಅಭಿಮತ ವ್ಯಕ್ತಪಡಿಸಿ ಕೆಳದರ್ಜೆ ಹುದ್ದೆಯ ವೇತನ ಶ್ರೇಣಿಯಲ್ಲಿಯೇ ಮುಂದುವರಿಯಲು ಅವಕಾಶವಿರುತ್ತದೆ. ಇಂತಹ ಪ್ರಸಂಗಗಳಲ್ಲಿ ‘ಆಯ್ಕೆ ಕಾಲಿಕ ವೇತನ ಶ್ರೇಣಿ’ ಯಲ್ಲಿ ವೇತನ ನಿಗದಿಪಡಿಸಿದ ನಂತರ ಆ ವೇತನದ ಆಧಾರದ ಮೇಲೆ ಪದೋನ್ನತಿ ಹುದ್ದೆಯ ವೇತನ ಶ್ರೇಣಿಯಲ್ಲಿ ನಿಯಮ 42(ಬಿ) ಪ್ರಕಾರ ವೇತನ ನಿಗದಿಪಡಿಸಬಹುದು. (ಸ.ಅ.ಸಂಖ್ಯೆ : ಎಫ್ಡಿ 60 ಎಸ್ಆರ್ಪಿ 8 ಬೆಂಗಳೂರು ದಿ. 3-9-1985 )
3) ಉದ್ಯೋಗಿಯು ತಾವು ಧಾರಣ ಮಾಡಿದ ಹುದ್ದೆಯ ವೇತನ ಶ್ರೇಣಿಯಲ್ಲಿ ಸ್ಥಗಿತ ವೇತನ ಬಡ್ತಿ ಪ್ರಾಪ್ತವಾಗುವ ಮುನ್ನವೇ ‘ಕಾಲಮಿತಿ ಮುಂಬಡ್ತಿ’ ಯೋಜನೆಯ ಸೌಲಭ್ಯ ಮಂಜೂರಾದಲ್ಲಿ ಸ್ಥಗಿತ ವೇತನ ಬಡ್ತಿಯನ್ನು ಪಡೆದು ಆ ವೇತನದ ಹಂತದ ಆಧಾರದ ಮೇಲೆ ‘ಆಯ್ಕೆ ಕಾಲಿಕ ವೇತನ ವೇತನ ಶ್ರೇಣಿ’ಯಲ್ಲಿ ವೇತನ ನಿಗದಿಪಡಿಸಿಕೊಳ್ಳಲು ಅವಕಾಶವಿದೆ. (ಸ.ಅ.ಸಂಖ್ಯೆ ಎಫ್ಡಿ 1 ಎಸ್ಆರ್ಪಿ 96 ದಿ. 8- 5-1997)
4) ‘ಆಯ್ಕೆ ಕಾಲಿಕ ವೇತನ ಶ್ರೇಣಿ’ ಮತ್ತು ಪದೋನ್ನತಿ ಹುದ್ದೆಯ ವೇತನ ಶ್ರೇಣಿಗಳು ಒಂದೇ ಆಗಿದ್ದಲ್ಲಿ ಪದೋನ್ನತಿ ನೀಡಿದ ಸಂದರ್ಭದಲ್ಲಿ ಸದರಿ ಹುದ್ದೆಯ ವೇತನವನ್ನು ಅದೇ ವೇತನ ಶ್ರೇಣಿಯಲ್ಲಿ ನಿಯಮ 42(ಬಿ) ಪ್ರಕಾರ ಮುಂದಿನ ಹಂತದಲ್ಲಿ ವೇತನ ನಿಗದಿಪಡಿಸಬಹುದು.
5) ದಿನಾಂಕ 5- 9- 2014ರ ಸರ್ಕಾರಿ ಆದೇಶ ಸಂ. ಆಇ13, ಎಸ್ಆರ್ಪಿ 2014ರ ಮೇರೆಗೆ ಸ್ವಂತ ಕೋರಿಕೆ ಮೇರೆಗೆ ಒಂದು ಜಿಲ್ಲೆಯ ಜೇಷ್ಠತೆಯನ್ನು ಹೊಂದಿದ ಸರ್ಕಾರಿ ನೌಕರನು ಒಂದು ಇಲಾಖೆಯಲ್ಲಿನ ಒಂದು ಜ್ಯೇಷ್ಠತಾ ಘಟಕದಿಂದ ಮತ್ತೊಂದು ಜ್ಯೇಷ್ಠತಾ ಘಟಕಕ್ಕೆ ಅದೇ ಹುದ್ದೆಗೆ ವರ್ಗಾವಣೆಯಾಗಿರುವ ಪ್ರಕರಣಗಳಿಗೆ ಅವರ ಹಿಂದಿನ ಜ್ಯೇಷ್ಠತಾ ಘಟಕದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸದೆ ಒಮ್ಮೆ ಮಾತ್ರ ಕಾಲಬದ್ಧ ಮುಂಬಡ್ತಿ ಪರಿಗಣಿಸಬಹುದು.
6) ಸರ್ಕಾರಿ ನೌಕರರಿಗೆ ಹತ್ತು ವರ್ಷವಾಗುವ ಮೊದಲೇ ಮೂರು ತಿಂಗಳೊಳಗೆ ಯಾವುದಾದರೂ ಪದೋನ್ನತಿ ಲಭ್ಯವಾದರೆ ಈ ಕಾಲಮಿತಿ ವೇತನ ಬಡ್ತಿ ಪಡೆದು ನಂತರ ಪದೋನ್ನತಿಯ ವೇತನ ನಿಗದಿಪಡಿಸಿಕೊಳ್ಳಬಹುದು.
ಕಾಲಮಿತಿ ವೇತನ ಬಡ್ತಿಗೆ ಸಂಬಂಧಿಸಿದಂತೆ ಹೊರಡಿಸಲಾದ ಸರ್ಕಾರಿ ಆದೇಶಗಳಿಗಾಗಿ ಈ ಕೆಳಗಿನ ಲಿಂಕ್ ಬಳಸಿ.
- K.C.S (TIME BOUND ADVANCEMENT ) RULES 1981
- K.C.S (AUTOMATIC GRANT OF SPECIAL PROMOTION TO
- SENIOR SCALE OF PAY) RULES 1991 AND RELATED ORDERS
- K.C.S TIME BOUND ADVANCEMENT FOR 10 YEARS AND 15 YEARS
- K.C.S TIME BOUND ADVANCEMENT FOR 15 YEARS
- K.C.S TIME BOUND ADVANCEMENT FOR 20 YEARS
- TIME BOUND ADVANCEMENT FOR 25 TO 30 YEARS
No comments:
Post a Comment