BPL ಕುಟುಂಬಕ್ಕೆ ಈ ಯೋಜನೆಯಿಂದ 6 ಸಾವಿರದವರೆಗೂ ಹಣ ದೊರೆಯಲಿದೆ ಅರ್ಜಿ ಸಲ್ಲಿಕೆಗೆ ನೋಡಿ !
ಬೆಂಗಳೂರು: ಬಜೆಟ್ ನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿ ಮಹಿಳೆಯರಿಗೆ ರಾಜ್ಯ ಸರ್ಕಾರದ ಮಾತೃಪೂರ್ಣ ಮತ್ತು ಕೇಂದ್ರ ಸರ್ಕಾರದ ಮಾತೃವಂದನಾ ಕಾರ್ಯಕ್ರಮಗಳಲ್ಲಿ ಹಲವು ಸೌಲಭ್ಯಗಳು ದೊರೆಯುತ್ತಿದ್ದು, ಇವುಗಳೊಂದಿಗೆ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯನ್ನು ನಾವು ಹೊಸದಾಗಿ ರೂಪಿಸಿದ್ದು ಇದರಡಿ ಹೆರಿಗೆ ಪೂರ್ವದ ಮೂರು ತಿಂಗಳು ಮತ್ತು ಹೆರಿಗೆ ನಂತರದ ಮೂರು ತಿಂಗಳು ತಲಾ ಒಂದು ಸಾವಿರ ರೂ ಹಣ ನೀಡಲಾಗುವುದು ಎಂದು ಕುಮಾರಸ್ವಾಮಿ ಸ್ವಾಮಿ ತಿಳಿಸಿದ್ದಾರೆ.
ಈ ಯೋಜನೆ ತಾಯಿಯ ಎರಡು ಮಕ್ಕಳಿಗೆ ಅನ್ವಯವಾಗಲಿದೆ ಎಂದ ಅವರು, ನವೆಂಬರ್ ಒಂದರಿಂದ ಜಾರಿಯಾಗಲಿರುವ ಈ ಯೋಜನೆಗೆ ಮುನ್ನೂರೈವತ್ತು ಕೋಟಿ ರೂ. ನೀಡಲಾಗುವುದು ಎಂದು ವಿವರಿಸಿದರು. ಅಂಗನವಾಡಿ ಮೇಲುಸ್ತುವಾರಿ : ಮಾತೃಶ್ರೀ ಯೋಜನೆಯ ಮೇಲುಸ್ತುವಾರಿಯನ್ನು ಆಯಾ ಗ್ರಾಮಗಳ ಅಂಗನವಾಡಿ ಶಿಕ್ಷಕಿಯರಿಗೆ ಅಥವಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದೇಗೆ?
ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಕಾರ್ಯಕರ್ತೆಯರ ಬಳಿ ನೀವು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಿ ಪರಿಪೂರ್ಣ ಮಾಹಿತಿ ಪಡೆಯಿರಿ.
ಬೇಕಾಗುವ ದಾಖಲಾತಿಗಳು.
ತಾಯಿ ಕಾರ್ಡ್; ಆಧಾರ್ ಕಾರ್ಡ್; ಚುನಾವಣಾ ಚೀಟಿ; ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ಖಾತೆ; ಪತಿಯ ಆಧಾರ್ ಮತ್ತು ಚುನಾವಣಾ ಚೀಟಿ. ನವೆಂಬರ್ 1 ರಿಂದ ಮಾತೃಶ್ರೀ ಯೋಜನೆ ಜಾರಿಯಾಗಲಿದ್ದು, ಈ ಯೋಜನೆ ಎರಡು ಮಕ್ಕಳಿಗೆ ಅನ್ವಯವಾಗಲಿದೆ. ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ಈ ಮೊತ್ತ ಜಮೆಯಾಗುತ್ತದೆ.
No comments:
Post a Comment