ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ !
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ 7 ಮತ್ತು 8ನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದ ಮೂರು ಗಂಟೆಯಲ್ಲೇ ಅಂತಿಮ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಆನ್ಲೈನ್ನಲ್ಲಿ ಪರೀಕ್ಷೆಗಳ ಫಲಿತಾಂಶ ಕೆಲ ಗಂಟೆಯಲ್ಲೇ ಹೊರಬಂದಿರುವ ಉದಾಹರಣೆಗಳಿವೆ ಆದರೆ ಲಿಖಿತ ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಒಟ್ಟಾರೆ ಫಲಿತಾಂಶ ಪ್ರಕಟವಾದ ಉದಾಹರಣೆಗಳು ಎಲ್ಲೂ ಇಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪರೀಕ್ಷೆ ಮುಗಿದ ಮೂರೇ ಗಂಟೆಗಳಲ್ಲಿ ತಮ್ಮ ಫಲಿತಾಂಶ ಪಡೆದುಕೊಂಡು ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ.
ಕಳೆದ 10 ದಿನಗಳಿಂದ ಸುಮಾರು 150 ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಬರೆಯುತ್ತಿದ್ದರು. ಪ್ರತಿ ದಿನ 2 ಗಂಟೆಗೆ ಪರೀಕ್ಷೆ ಮುಗಿಯುತ್ತಿತ್ತು. ಉತ್ತರ ಪತ್ರಿಕೆಯ ಮೌಲ್ಯ ಮಾಪನವನ್ನು ವಿವಿಯ ಮೌಲ್ಯಮಾಪನ ವಿಭಾಗ ಆಯಾ ದಿನವೇ ಮಾಡಿದ್ದು, ಅಂತಿಮ ಪರೀಕ್ಷೆ ದಿನ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದ ಸಿ. ಶಿವರಾಜು ತಿಳಿಸಿದ್ದಾರೆ.
ಯುವಿಸಿಇಯಲ್ಲಿ ಹಿಂದೆ ಪರೀಕ್ಷೆ ಮುಗಿದ 18 ಗಂಟೆಗಳಲ್ಲಿ, 24 ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಿದ ಉದಾಹರಣೆಗಳಿವೆ. ಈಗ ಅದನ್ನೂ ದಾಟಿ ಕೇವಲ ಮೂರು ಗಂಟೆಗಳಲ್ಲಿ ಫಲಿತಾಂಶ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
No comments:
Post a Comment