Monday, July 2, 2018

Leave facility rules for government employees


ರಜೆ ಸೌಲಭ್ಯದ ನಿಯಮಗಳು

ರಜೆಯನ್ನು ಗೃಹಕೃತ್ಯಕ್ಕಾಗಿ ಅಥವಾ ವೈದ್ಯಕೀಯ ಕಾರಣಗಳಿಗಾಗಿ ಮಂಜೂರು ಮಾಡಬಹುದು.
ಗೃಹಕೃತ್ಯಕ್ಕಾಗಿ ಬಳಸಿಕೊಂಡ ಅಸಾಧಾರಣ ರಜೆ ಅವಧಿಯನ್ನು ನಿವೃತ್ತಿ ವೇತನ ಲೆಕ್ಕಾಚಾರಕ್ಕೆ ಅರ್ಹ ಸೇವೆಯಾಗಿ ಪರಿಗಣಿಸಬಹುದು.

ಮಂಜೂರಾದ ರಜೆಯನ್ನು ಪೂರ್ವಾನ್ವಯವಾಗುವಂತೆ ಹಕ್ಕಿನಲ್ಲಿರುವ ಇತರ ರಜೆಯನ್ನಾಗಿ ಪರಿವರ್ತಿಸಬಹುದು. ಗೈರು ಹಾಜರಿಯನ್ನು ಪೂರ್ವಾನ್ವಯವಾಗಿ ಅಸಾಧಾರಣ ರಜೆಯನ್ನಾಗಿ ಪರಿವರ್ತಿಸಬಹುದಾಗಿದೆ. ಆದರೆ ಗೃಹಕೃತ್ಯಕ್ಕಾಗಿ ಬಳಸಿದ ಭತ್ಯೆರಹಿತ ರಜೆಯನ್ನು ವೈದ್ಯಕೀಯ ಕಾರಣಕ್ಕಾಗಿ ಅಸಾಧಾರಣ ರಜೆ ಎಂದು ಪರಿವರ್ತಿಸುವಂತಿಲ್ಲ.

ಉದ್ಯೋಗಿಯ ಗೈರು ಹಾಜರಿಯನ್ನು ನಿಯಮ – 106ಎ ಅನ್ವಯ ‘‘ಅಧಿಕೃತ ಗೈರು ಹಾಜರಿ’’ಯೆಂದು ನಿರ್ಧರಿಸಿದಲ್ಲಿ ಸದರಿ ಅವಧಿಯನ್ನು ಅರ್ಧವೇತನ ರಜೆಗೆ ಖರ್ಚು ಹಾಕುವುದರ ಜತೆಗೆ ಈ ಅವಧಿಗೆ ವೇತನ ಭತ್ಯೆ ಪಾವತಿಸುವಂತಿಲ್ಲ. ಹಾಗೂ ಉದ್ಯೋಗಿಯು ಶಿಸ್ತುಕ್ರಮಕ್ಕೂ ಒಳಗಾಗುತ್ತಾನೆ.

ಹಕ್ಕಿನಲ್ಲಿಲ್ಲದ ರಜೆಯಲ್ಲಿದ್ದ ಉದ್ಯೋಗಿ ರಾಜೀನಾಮೆ ನೀಡಿದ ಅಥವಾ ನಿವೃತ್ತನಾದ ಪಕ್ಷದಲ್ಲಿ ನಿವೃತ್ತಿ / ರಾಜೀನಾಮೆ ರಜಾ ಪ್ರಾರಂಭದ ದಿನಾಂಕದಿಂದಲೇ ಜಾರಿಗೆ ಬಂದಂತಾಗುವುದು.
ಪರಿವರ್ತಿತ ರಜೆ ಮತ್ತು ಹಕ್ಕಿನಲ್ಲಿಲ್ಲದ ರಜೆ ಅವಧಿಯಲ್ಲಿ ಉದ್ಯೋಗಿ ಮೃತನಾದ ಅಥವಾ ಕಡ್ಡಾಯ ನಿವೃತ್ತಿಗೊಳಿಸದ ಸಂದರ್ಭದಲ್ಲಿ ರಜಾ ವೇತನವನ್ನು ವಸೂಲು ಮಾಡುವಂತಿಲ್ಲ.
ರಜಾ ಅವಧಿಗೆ, ಉದ್ಯೋಗಿ ರಜೆ ಪ್ರಾರಂಭದ ಹಿಂದಿನ ದಿನ ಪಡೆಯುತ್ತಿದ್ದ ವೇತನದ ಆಧಾರದ ಮೇಲೆ ರಜಾ ಸಂಬಳ ಸಂದಾಯ ಮಾಡಬೇಕು.

ಮುಷ್ಕರದ ಅವಧಿಯನ್ನು ಸರ್ಕಾರ ರಜೆಯೆಂದು ಪರಿಗಣಿಸದಿದ್ದಲ್ಲಿ, ಉದ್ಯೋಗಿಯ ಹಕ್ಕಿನಲ್ಲಿರುವ ಎಲ್ಲ ರಜೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಸಾಂದರ್ಭಿಕ ರಜೆಯನ್ನು ಕರ್ತವ್ಯವೆಂದೇ ಪರಿಗಣಿಸಬೇಕು. ಈ ರಜೆ ಉದ್ಯೋಗಿಯ ವೇತನಕ್ಕೆ ಪ್ರತಿಕೂಲ ಪರಿಣಾಮವಾಗುವುದಿಲ್ಲ.

ಸಾಂರ್ದಭಿಕ ರಜೆಯನ್ನು ಇತರ ರಜೆಗಳೊಡನೆ ಸಂಯೋಜಿಸಿ ಬಳಸುವಂತಿಲ್ಲ.
ಸರ್ಕಾರಿ ನೌಕರನು ಅಗತ್ಯ ಗೃಹ ಕೃತ್ಯ ಹಾಗೂ ಇತರೆ ವೈಯಕ್ತಿಕ ಕಾರ್ಯಗಳನ್ನು ನಿರ್ವಹಿಸಲು ಹಾಗೂ ಅನಾರೋಗ್ಯದ ನಿಮಿತ್ತ ಔಷಧೋಪಚಾರ ಪಡೆಯಲು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕರ್ತವ್ಯಕ್ಕೆ ಗೈರು ಹಾಜರಾಗುವುದನ್ನು ರಜೆ ಎಂದು ಹೇಳಬಹುದು.
ರಜೆಯನ್ನು ಹಕ್ಕೆಂಬಂತೆ ಕೋರುವಂತಿಲ್ಲ, ಸರ್ಕಾರಿ ಸೇವೆಯ ಅಗತ್ಯತೆ ಮತ್ತು ಅನಿವಾರ್ಯತೆಯ ಕಾರಣದಿಂದ ರಜೆಯನ್ನು ರದ್ದುಗೊಳಿಸುವ, ಮೊಟಕುಗೊಳಿಸುವ ಮತ್ತು ನಿರಾಕರಿಸುವ ವಿವೇಚನೆಯು ರಜೆಯನ್ನು ಮಂಜೂರು ಮಾಡುವ ಅಧಿಕಾರವುಳ್ಳ ಅಧಿಕಾರಿಯ ವಿವೇಚನೆಗೆ ಒಳಪಟ್ಟಿರುತ್ತದೆ (ಕ.ಸ.ಸೇ.ನಿ.107).

ಸೇವೆಯಿಂದ ವಜಾ ಮಾಡಲು, ತೆಗೆದುಹಾಕಲು, ಕಡ್ಡಾಯ ನಿವೃತ್ತಿಗೊಳಿಸಲು ಉದ್ದೇಶಿಸಿರುವ ಪ್ರಕರಣಗಳ ನೌಕರರಿಗೆ ರಜೆಯನ್ನು ಮಂಜೂರು ಮಾಡಲು ಅವಕಾಶವಿಲ್ಲ (ಕ.ಸ.ಸೇ.ನಿ. 107). ಅಂಶ ಕಾಲಿಕ (ಪಾರ್ಟ್ ಟೈಂ) ಸರ್ಕಾರಿ ನೌಕರನು ಸಾಂರ್ದಭಿಕ ರಜೆಯ ಹೊರತು ಯಾವುದೇ ಇತರೆ ಪ್ರಕಾರದ ರಜೆ ಹಕ್ಕು ಹೊಂದಿರುವುದಿಲ್ಲ. ಇವರಿಗೆ ಬಿಡುವಿಲ್ಲದ ಇಲಾಖೆಗಳಲ್ಲಿ 15 ದಿನಗಳೂ, ಬಿಡುವಿರುವ ಇಲಾಖೆಗಳಲ್ಲಿ 10 ದಿನಗಳು ಮಾತ್ರ ದೊರೆಯುತ್ತದೆ (ಕ.ಸ.ಸೇ.ನಿ. 147).
ಪುನರ್ ನೇಮಕಗೊಂಡ, ಸಂಬಳ ಅಥವಾ ಗೌರವ ಧನ ಪಡೆಯುತ್ತಿರುವ ನಿವೃತ್ತಿ ನೌಕರರಿಗೆ ಗಳಿಕೆ ರಜೆ (ಕ.ಸ.ಸೇ.ನಿ. 112 ರಂತೆ) ಲಭ್ಯವಾಗುತ್ತದೆ. ಹೀಗೆ ಗಳಿಸಿದ ಗಳಿಕೆ ರಜೆ ಮತ್ತು ನಿವೃತ್ತಿಯ ದಿನಾಂಕದವರೆಗೆ ತನ್ನ ಲೆಕ್ಕದಲ್ಲಿ ಜಮಾ ಇರುವ ಗಳಿಕೆ ರಜೆಗೆ ಸಮನಾದ ನಗದನ್ನು ರಜೆ ಮಂಜೂರಾತಿ ಪ್ರಾಧಿಕಾರ ಮಂಜೂರು ಮಾಡಬಹುದು.

(ಕ.ಸ.ಸೇ.ನಿ.150).
ಕೃಪೆ: ವಿಜಯವಾಣಿ

No comments:

Post a Comment