ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕೈಪಿಡಿ
ಪ್ರಕೃತಿ ವಿಕೋಪಗಳಾದ ಭೂಕಂಪ,ನೆರೆಹಾವಳಿ,ಅಗ್ನಿ ದುರಂತ, ಭೂಕುಸಿತ, ಕಾಡ್ಗಿಚ್ಚು,ಅತೀವೃಷ್ಟಿ,ಅನಾವೃಷ್ಟೀ, ಕೈಗಾರಿಕಾ ದುರಂತ, ಮುಂತಾದ ಭೀತಿಗಳಿಂದ ನಾವು ಮುಕ್ತವಾಗಿಲ್ಲ. ಇಂತಹ ದುರಂತಗಳಿಂದ ಪಾರಾಗಲು ಮತ್ತು ಆಕಸ್ಮಿಕ ಘಟನೆಗಳು ನಡೆದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಪಡೆಯುವದು ಅತ್ಯಗತ್ಯವಾಗಿದೆ. ಮತ್ತು ಅದಕ್ಕಾಗಿ ತರಬೇತಿ ಪಡೆಯುವದು ಇಂದು ಅನಿವಾರ್ಯವಾಗಿದೆ. ಶಾಲೆಗಳು ಭವಿಷತ್ತಿನ ಮಾನವ ಸಂಪನ್ಮೂಲದ ಕಾರ್ಯಾಗಾರಗಳಾಗಿವೆ.ಸಾರ್ವಜನಿಕ ಸ್ಥಳಗಳಾಗಿವೆ.ಅಗತ್ಯ ಸಂದರ್ಭಗಳಲ್ಲಿ ಆಶ್ರಯತಾಣಗಳಾಗಿ ಬಳಸಬಹುದಾಗಿದೆ. ಆದ್ದರಿಂದ ಅವು ಹೆಚ್ಚು ಸುರಕ್ಷಿತ ತಾಣಗಳಾಗಬೇಕಾಗಿದೆ. ಅಲ್ಲಿರುವವರು ಹೆಚ್ಚು ಸನ್ನದ್ಧರಾಗಬೇಕಾಗಿದೆ.ಅದಕ್ಕಾಗಿ ಕ್ರಿಯಾಯೋಜನೆ ರೂಪಿಸಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದವರು ಹೊರ ತಂದಿರುವ ಅತೀ ಅಮೂಲ್ಯವಾದ ಕೈಪಿಡಿ...
No comments:
Post a Comment