Saturday, July 14, 2018

CET-2018- Seat Matrix and Option Entry


CET-2018- Seat Matrix and Option Entry


ವೈದ್ಯ ಶುಲ್ಕ ಪಾವತಿ ವೇಳಾಪಟ್ಟಿ ಪ್ರಕಟ.

ಉದಯವಾಣಿ-ಜು.೧೫.ಬೆಂಗಳೂರು: ವೈದ್ಯಕೀಯ ಅಥವಾ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಚಾಯ್ಸ ಆಯ್ಕೆ ಮಾಡಲು ಮತ್ತು ಶುಲ್ಕ ಪಾವತಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ ಸೈಟ್‌ನಲ್ಲಿ ಲಿಂಕ್‌ ಮತ್ತು ವೇಳಾಪಟ್ಟಿ ಪ್ರಕಟಿಸಿದೆ.
ಅಭ್ಯರ್ಥಿಗಳು ನಿಗದಿತ ಲಿಂಕ್‌ ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು. ಜುಲೈ 17ರ ತನಕ ಚಾಯ್ಸ ಆಯ್ಕೆಗೆ ಅವಕಾಶ ಇರುತ್ತದೆ. ನಾಲ್ಕು ಚಾಯ್ಸಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವ ಮೊದಲ ಅದರಿಂದಾಗುವ ಪರಿಣಾಮದ ಬಗ್ಗೆ ಗಮನ ಇರಲಿ ಎಂದು ಅಭ್ಯರ್ಥಿಗಳಿಗೆ ಪ್ರಾಧಿಕಾರ ನಿರ್ದೇಶಿಸಿದೆ.
ಚಾಯ್ಸ-1 ಮತ್ತು ಚಾಯ್ಸ -2 ಆಯ್ಕೆ ಮಾಡಿರುವ ಅಭ್ಯರ್ಥಿಗಳು ಜುಲೈ 19ರೊಳಗೆ ಶುಲ್ಕಪಾವತಿ ಮಾಡಬೇಕು.
ಚಾಯ್ಸ-1 ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯ ನಂತರ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಈ ಅಭ್ಯರ್ಥಿಗಳು ಜುಲೈ 20ರೊಳಗೆ ಸಂಬಂಧಪಟ್ಟ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂದು ಸೂಚಿಸಿದೆ.

No comments:

Post a Comment