Sunday, July 8, 2018

ಅಲ್ಪಸಂಖ್ಯಾತರಿಗೆ ಸಿಇಟಿ ತರಬೇತಿ: ಅರ್ಜಿ ಅಹ್ವಾನ.

ಧಾರವಾಡ, ಜು.7: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2018-19ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಯೋಜನೆಯಡಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಲು ಅರ್ಜಿ ಅಹ್ವಾನಿಸಿದೆ.

ಅಭ್ಯರ್ಥಿಗಳು ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರಬೇಕು. ಅಭ್ಯರ್ಥಿಗಳ ಪೋಷಕರ ವಾರ್ಷಿಕ ಗರಿಷ್ಠ ವರಮಾನ 2.50 ಲಕ್ಷ ರೂ. ಮೀರಿರಬಾರದು. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅರ್ಜಿನಮೂನೆ, ಕೊನೆಯ ದಿನಾಂಕ ಹಾಗೂ ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿ, ಮಂದಿ ಪ್ಲಾಜಾ, 1 ನೇ ಮಹಡಿ ಕೆ.ಸಿ.ಪಾರ್ಕ್ ಪೋಸ್ಟ್ ಆಫೀಸ್ ಎದುರಿಗೆ, ಹಳಿಯಾಳ ರಸ್ತೆ, ಧಾರವಾಡ. ದೂರವಾಣಿ ಸಂಖ್ಯೆ: 0836-2971590 ಅಥವಾ ಅರಿವು ಕೇಂದ್ರದ ದೂರವಾಣಿ ಸಂಖ್ಯೆ: 0836- 2971132 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

No comments:

Post a Comment