Sunday, July 1, 2018

ಸರ್ಕಾರಿ ನೌಕರರ ಪಿಂಚಣಿ ಪರಿಷ್ಕರಣೆ.


ಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರಿಗೆ ವಿಸ್ತರಿಸಿರುವ ರೀತಿಯಲ್ಲಿಯೇ ಅಂಶದಾಯ ಪಿಂಚಣಿ ಕೊಡುಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿಗೆ ಸೌಲಭ್ಯವನ್ನು ವಿಸ್ತರಿಸಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.

2018 ಜೂನ್ 23ರ ಸರ್ಕಾರದ ಆದೇಶ ಸಂಖ್ಯೆ ಆಇ34 ಪಿಇಎನ್ 2018 ರಲ್ಲಿ ದಿನಾಂಕ 01-04-2006 ರಂದು ಮತ್ತು ನಂತರ ಸರ್ಕಾರಿ ಸೇವೆಗೆ ಸೇರಿದ ಹೊಸ ವ್ಯಾಖ್ಯಾನಿಸಿದ ಅಂಶದಾಯ ಪಿಂಚಣಿ ಕೊಡುಗೆ ಯೋಜನೆಯಡಿ ಬರುವ ಸರ್ಕಾರಿ ನೌಕರರಿಗೆ ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಎಂದು ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರಿಗೆ ವಿಸ್ತರಿಸುವ ರೀತಿಯಲ್ಲಿಯೇ ಹೊಸ ವ್ಯಾಖ್ಯಾನಿಸಿದ ಅಂಶದಾಯ ಪಿಂಚಣಿ ಕೊಡುಗೆ ಯೋಜನೆಯಡಿ ನಿವೃತ್ತರಾಗುವ ಸರ್ಕಾರಿ ನೌಕರರಿಗೂ 2018 ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಅನ್ವಯಿಸಿ ನಿವೃತ್ತಿ ಉಪದಾನ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಹಾಗೂ ನಿವೃತ್ತಿ ಉಪದಾನದ ಮೊತ್ತವು ಗರಿಷ್ಠ ಮಿತಿ 20 ಲಕ್ಷ ರೂ. ಗಳಿಗೊಳಪಟ್ಟಿರುತ್ತದೆ.

ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರ ಅವಲಂಬಿತ ಕುಟುಂಬಕ್ಕೆ ವಿಸ್ತರಿಸಿರುವ ರೀತಿಯಲ್ಲಿಯೇ ಹೊಸ ಪಿಂಚಣಿ ಕೊಡುಗೆ ಯೋಜನೆಗೆ ಒಳಪಟ್ಟಿದ್ದು ಸೇವೆಯಲ್ಲಿರುವಾಗಲೇ ಮರಣ ಹೊಂದುವ ಸರ್ಕಾರಿ ನೌಕರರ ಅವಲಂಬಿತ ಕುಟುಂಬಕ್ಕೆ 2018 ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಅನ್ವಯಿಸಿ ಉಪದಾನದ ಮೊತ್ತವು ಗರಿಷ್ಠ ರೂ. 20 ಲಕ್ಷಗಳಿಗೊಳಪಟ್ಟಿರುತ್ತವೆ.

2018 ಮಾರ್ಚ್ 31ರ ಪೂರ್ವದಲ್ಲಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಹೊಸ ವ್ಯಾಖ್ಯಾನಿಸಿದ ಅಂಶದಾಯ ಪಿಂಚಣಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರಿಗೆ ಸರ್ಕಾರದ ಆದೇಶ ಸಂಖ್ಯೆ ಆಇ 03 ಸೇನಿಸೇ 2010. ದಿನಾಂಕ 12-10-2010 ಮತ್ತು 15-04-2011 ರಲ್ಲಿ ಈಗಾಗಲೇ ನೀಡಿರುವ ಇಡಿಗಂಟಿನ ಪರಿಹಾರದ ಸೌಲಭ್ಯವು ಅನ್ವಯಿಸಲಿದ್ದು ಅದನ್ನು ಪುನರ್ ಪರಿಷ್ಕರಿಸತಕ್ಕದ್ದಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಹೊಸ ಪಿಂಚಣಿ ಯೋಜನೆಗೆ ಒಳಪಟ್ಟಿದ್ದು ಸೇವೆಯಲ್ಲಿರುವಾಗಲೇ ನಿಧನ ಹೊಂದುವ ಅಂತಹ ಸರ್ಕಾರಿ ನೌಕರರ ಅವಲಂಬಿತ ಕುಟುಂಬಕ್ಕೆ ಮರಣ ಉಪದಾನದ ಸೌಲಭ್ಯವನ್ನು ಈ ಆದೇಶಾನುಸಾರ ಪರಿಗಣಿಸಿ ವಿಸ್ತರಿಸುವ ತತ್ಪರಿಣಾಮವಾಗಿ ಸರ್ಕಾರಿ ಆದೇಶ ಸಂಖ್ಯೆ ಆಇ 03 ಸೇನಿಸೇ 2010, ದಿನಾಂಕ 12-10-2010 ಮತ್ತು 15-04-2011 ರನ್ವಯ ವಿಸ್ತರಿಸಲಾಗಿದ್ದ ಇಡಿಗಂಟಿನ ಸೌಲಭ್ಯವನ್ನು ದಿನಾಂಕ 01-04-2018 ರಿಂದ ಅನ್ವಯಿಸಿ ಹಿಂಪಡೆಯಲಾಗಿದೆ.

2018 ಏಪ್ರಿಲ್ 1 ರಂದು ಅಥವಾ ತದ ನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಹೊಸ ವ್ಯಾಖ್ಯಾನಿಸಿದ ಅಂಶದಾಯ ಪಿಂಚಣಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಅವಲಂಬಿತರು ಆಯ್ಕೆ ಮಾಡಿಕೊಂಡಲ್ಲಿ ಮೃತ ನೌಕರರ ಪಿಂಚಣಿ ನಿಧಿಯಲ್ಲಿ ಕ್ರೋಢೀಕೃತವಾದ ಮೊತ್ತವನ್ನು ಸರ್ಕಾರವು ಹಿಂಪಡೆಯುವ ಷರತ್ತಿಗೊಳಪಟ್ಟು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು 2002 ರನ್ವಯ ಕುಟುಂಬ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಲಾಗಿದೆ.


ಈ ಉದ್ದೇಶಕ್ಕಾಗಿ ಮೃತ ಸರ್ಕಾರಿ ನೌಕರನ ಅವಲಂಬಿತರು ನೀಡುವ ಆಯ್ಕೆಯು ಐಚ್ಛಿಕವಾಗಿರುವುದಾಗಿದೆ. ಈ ಮೇರೆಗೆ ಒಮ್ಮೆ ಮೃತ ನೌಕರರ ಪಿಂಚಣಿ ನಿಧಿಯಲ್ಲಿನ ಮೊತ್ತವನ್ನು ಸರ್ಕಾರವು ಹಿಂಪಡೆಯುವ ಇಚ್ಛೆಯೊಂದಿಗೆ ಕುಟುಂಬ ಪಿಂಚಣಿ ಸೌಲಭ್ಯವನ್ನು ಆಯ್ಕೆ ಮಾಡಿಕೊಂಡ ತರುವಾಯದಲ್ಲಿ ಮುಂದಿನ ದಿನಗಳಲ್ಲಿ ಸದರಿ ಆಯ್ಕೆಯನ್ನು ಪರಿಷ್ಕರಿಸಿ ಕುಟುಂಬ ಪಿಂಚಣಿ ಬದಲಿಗೆ ಪಿಂಚಣಿ ನಿಧಿಯಲ್ಲಿನ ಮೊತ್ತವನ್ನು ಪಾವತಿಸುವಂತೆ ಕೋರಿಕೆ ಸಲ್ಲಿಸುವ ಅಥವಾ ಪಿಂಚಣಿ ನಿಧಿಯಲ್ಲಿನ ಮೊತ್ತವನ್ನು ಪಡೆಯಲು ಇಚ್ಛಿಸಿ ಪಡೆದ ತರುವಾಯದಲ್ಲಿ ಮುಂದಿನ ದಿನಗಳಲ್ಲಿ ಸದರಿ ಸೌಲಭ್ಯದ ಬದಲಿಗೆ ಸರ್ಕಾರಕ್ಕೆ ಪಿಂಚಣಿ ನಿಧಿಯಿಂದ ಪಡೆದ ಮೊತ್ತವನ್ನು ಹಿಂಪಾವತಿಸುವ ಮೇರೆಗೆ ಕುಟುಂಬ ಪಿಂಚಣಿ ಸೌಲಭ್ಯವನ್ನು ಕೋರುವಲ್ಲಿ ಅವಕಾಶಗಳಿಲ್ಲ. ಮತ್ತು ಈ ಸಂಬಂಧದ ಮಂಜೂರಾತಿ ಸಮಯದಲ್ಲಿ ನೀಡುವ ಆಯ್ಕೆಯೇ ಅಂತಿಮವಾಗಿದ್ದು ಯಾವುದೇ ಸಂದರ್ಭ/ಕಾರಣಗಳಿಗಾಗಿ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಕೃಪೆ: ಸಂಜೆವಾಣಿ

No comments:

Post a Comment