Sunday, July 1, 2018

ಡಿಸೆಂಬರ್ ನಂತ್ರ ಕೆಲಸ ನಿಲ್ಲಿಸಲಿದೆ ನಿಮ್ಮ ಎಟಿಎಂ ಕಾರ್ಡ್

                                 ಡಿಸೆಂಬರ್ ನಂತ್ರ ಕೆಲಸ ನಿಲ್ಲಿಸಲಿದೆ ನಿಮ್ಮ ಎಟಿಎಂ ಕಾರ್ಡ್!


ಬ್ಯಾಂಕ್ ಎಟಿಎಂ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಶೀಘ್ರದಲ್ಲಿಯೇ ನಿಮ್ಮ ಎಟಿಎಂ ಕಾರ್ಡ್ ಕೆಲಸ ನಿಲ್ಲಿಸಲಿದೆ. ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡನ್ನು ಬ್ಯಾಂಕ್ ಬಂದ್ ಮಾಡಲಿದೆ. ಇದಕ್ಕೆ ಬದಲು ಚಿಪ್ ಕಾರ್ಡನ್ನು ಬಳಸಲು ನಿರ್ಧರಿಸಿದೆ.
ದೇಶದಲ್ಲಿ ಎರಡು ರೀತಿಯ ಎಟಿಎಂ ಕಾರ್ಡ್ ಜಾರಿಯಲ್ಲಿದೆ. ಒಂದು ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ಹಾಗೂ ಇನ್ನೊಂದು ಚಿಪ್ ಕಾರ್ಡ್. ಇನ್ಮುಂದೆ ಬ್ಯಾಂಕ್ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ರದ್ದು ಮಾಡಲಿದೆ. ಇದ್ರ ಬದಲು ದೇಶದಾದ್ಯಂತ ಚಿಪ್ ಕಾರ್ಡನ್ನು ಜಾರಿಗೆ ತರಲಿದೆ. ಆರ್ಬಿಐ ಆದೇಶದ ಮೇರೆಗೆ ಈ ನಿಯಮ ಜಾರಿಗೆ ತರಲಾಗ್ತಿದೆ. ಡಿಸೆಂಬರ್ 2018 ರ ನಂತ್ರ ಹೊಸ ನಿಯಮ ಜಾರಿಗೆ ಬರಲಿದೆ.

ಆರ್ಬಿಐ ಗ್ರಾಹಕರ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸುರಕ್ಷಿತವಾಗಿಡಲು ಈ ನಿರ್ಧಾರ ತೆಗೆದುಕೊಳ್ತಿದೆ. ಮ್ಯಾಗ್ನೆಟಿಕ್ ಸ್ಟ್ರೈಪ್ ಹಳೆ ತಂತ್ರಜ್ಞಾನದ ಕಾರ್ಡ್ ಎಂದು ಆರ್ಬಿಐ ಹೇಳಿದೆ. ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ ತಯಾರಿಕೆಯನ್ನೂ ಬಂದ್ ಮಾಡಲಾಗಿದೆ. ಹಳೆ ಕಾರ್ಡ್ ಗಳನ್ನು ಚಿಪ್ ಕಾರ್ಡ್ ಆಗಿ ಬದಲಾವಣೆ ಮಾಡಲಾಗ್ತಿದ್ದು, ಗ್ರಾಹಕರಿಗೆ ಹೊಸ ಕಾರ್ಡ್ ನೀಡಲಾಗ್ತಿದೆ.

ಕೃಪೆ: ಸುದ್ದಿ ಮೂಲ.

No comments:

Post a Comment