ನ್ಯೂಸ್
ಕನ್ನಡ ವರದಿ: 2017 ಜುಲೈ 1 ರಂದು ಅಧಿಕೃತವಾಗಿ ಕೇಂದ್ರ ಸರ್ಕಾರ
ಜಿಎಸ್ಟಿಯನ್ನು ಜಾರಿಗೊಳಿಸಿತು. ಆರಂಭದಲ್ಲಿ ಎಲ್ಲ ಕಡೆ ಸರಕು ಮತ್ತು ಸೇವಾ ತೆರಿಗೆ ನೀತಿಯದ್ದೇ
ಚರ್ಚೆಯಾಗಿತ್ತು. ಜಿಎಸ್ಟಿ ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ ಎಂಥಹುದು. ರಾಜ್ಯಗಳ ಮೇಲೆ
ಬಿರುವ ಪರಿಣಾಮ ಏನು? ಯಾರಿಗೆ ಲಾಭ?
ಯಾರಿಗೆ ನಷ್ಟ?
ಆರ್ಥಿಕ
ನೀತಿ ತರುವ ಬದಲಾವಣೆಗಳು ಏನು? ಎಂಬ ಹತ್ತಾರು ಪ್ರಶ್ನೆಗಳಿಗೆ
ಹುಟ್ಟಿಕೊಂಡಿದ್ದವು.
ಬಳಿಕ ಇದರ
ವಿರುದ್ಧ ದೇಶವ್ಯಾಪಿಯಾಗಿ ಚರ್ಚೆಗಳು ನಡೆದವು. ಈ ಮೂಲಕ ಸಣ್ಣಪುಟ್ಟ ವ್ಯಾಪಾರಸ್ಥರಿಗೆ
ಹಾನಿಯುಂಟಾಗಲಿದೆ ಎನ್ನಲಾಗಿತ್ತು. ಆದರೆ ಇಂದಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)
ವ್ಯವಸ್ಥೆ ಜಾರಿಗೆ ತಂದು ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ
ಸರ್ಕಾರದಿಂದ ಜಿಎಸ್ಟಿ ದಿನಾಚರಣೆ ಆಚರಿಸಲಾಗುತ್ತಿದೆ.
ಭಾರತ
ತೆರಿಗೆ ವ್ಯವಸ್ಥೆಯಲ್ಲಿ ಏರುಪೇರಾಗಲಿದೆ ಎಂದು ವಿಪಕ್ಷಗಳು ಸೇರಿದಂತೆ ಪ್ರಜ್ಞಾವಂತ ವರ್ಗದವರೂ
ಟೀಕಿದ್ದರು. ಸರಕುಗಳು ಮತ್ತು ಸೇವಾ ತೆರಿಗೆ ಎಂದರೇನು,
ತೆರಿಗೆ
ನೀತಿಗಳಲ್ಲಿ ಇಂತಹ ಬೃಹತ್ ಪರಿಷ್ಕರಣೆ ಏಕೆ ಬೇಕು? ಎಂದು ಪ್ರಶ್ನಿಸಿದವರಿಗೆ ಉತ್ತರ ನೀಡಿರುವ
ಹಣಕಾಸು ಇಲಾಖೆ ಇಂದು ದೇಶದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದೆ ಎನ್ನುತ್ತಿದೆ.
ಜಿಎಸ್ಟಿ ಮೂಲಕ ದೇಶಕ್ಕೆ ಆದಾಯ ಹೆಚ್ಚಾಗಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು
ತಿಳಿಸಿದ್ದಾರೆ.
ದೇಶದಲ್ಲಿ
ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ ,
ಸೇವಾ
ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ,
ಮೌಲ್ಯವರ್ಧಿತ
ತೆರಿಗೆ (ವ್ಯಾಟ್ ), ಮನರಂಜನಾ ತೆರಿಗೆ,
ಐಷಾರಾಮಿ
ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ
ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿ ನೆರವಾಗುತ್ತದೆ ಎನ್ನಲಾಗಿದೆ.
ಕೃಪೆ: ನ್ಯೂಸ್ ಕನ್ನಡ.
No comments:
Post a Comment