Monday, July 2, 2018

Good news for government employees from the Modi government.

ನವದೆಹಲಿ, ಜುಲೈ 02: ಕೇಂದ್ರ ಸರ್ಕಾರಿ ನೌಕರರು ಬಹುನಿರೀಕ್ಷೆಯಿಂದ ಕಾದಿರುವ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಪ್ರಧಾನಿ ಮೋದಿ ಅವರು ಖುದ್ದು ಮುತುವರ್ಜಿ ವಹಿಸಿಕೊಂಡಿದ್ದಾರೆ.

ಅಸ್ಸಾಂ ಸರ್ಕಾರ ಕೂಡಾ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಸಮಿತಿ ರಚಿಸಿ, ಅನುಷ್ಠಾನಗೊಳಿಸಲು ಮುಂದಾಗಿದೆ. ಶೀಘ್ರದಲ್ಲೇ ಇತರೆ ರಾಜ್ಯಗಳಲ್ಲೂ ಜಾರಿಗೆ ಬರಲಿದೆ.
ಇದರಿಂದ ಮುಖ್ಯವಾಗಿ ಗೃಹಭತ್ಯೆ(ಎಚ್ಆರ್ ಎ) ಯಲ್ಲಿ ಹೆಚ್ಚಳ ಕಂಡೂ ಬರಲಿದೆ.

ಉದ್ಯೋಗಿಗಳು ತಮ್ಮ ವೇತನದ ಶೇ10ರಷ್ಟು ಎಚ್ಆರ್ ಎ ಪಡೆಯಲಿದ್ದಾರೆ. ಜಿಲ್ಲೆ ಹಾಗೂ ಉಪ ವಿಭಾಗ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಶೇ 7ರಿಂದ ಶೆ 8ರಷ್ಟು ಭತ್ಯೆ ಸಿಗಲಿದೆ.

ಕಿರಿಯ ಪ್ರಾಥಮಿಕ, ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ಪಡೆದ ಪದವೀಧರ ಶಿಕ್ಷಕ ವರ್ಗಕ್ಕೆ 7,400 ರು ನಷ್ಟು ಗ್ರೇಡ್ ಪೇ ಸಿಗಲಿದೆ. ತರಬೇತಿ ಹೊಂದಿರದ ಪದವಿ ಪಡೆದಿರದ ಶಿಕ್ಷಕ ವರ್ಗಕ್ಕೆ 6,200 ರಿಂದ 6,800 ರು ತನಕ ಭತ್ಯೆ ಸಿಗಲಿದೆ.

ಭಾರತ ಸರ್ಕಾರದ ಎಲ್ಲಾ ಸಚಿವಾಲಯ ಹಾಗೂ ಇಲಾಖೆಗಳಲ್ಲೂ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸೂಚನೆ ಹೊರಡಿಸಲಾಗಿದೆ.

No comments:

Post a Comment